ಬೆಳಗಾವಿ
ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಮಾಸಿಕ ಅನುಭಾವ ಗೋಷ್ಠಿ ಕಾರ್ಯಕ್ರಮ ಜರುಗಿತು.
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಶರಣೆ ಶಿವಲೀಲಾ ಅರಳಿಕಟ್ಟಿ ಶರಣರ ಏಕದೇವೋಪಾಸನೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಾ, ದೇವನೊಬ್ಬ ನಾಮ ಹಲವು ಎಂದು ಬಸವಣ್ಣವರು ಹೇಳಿದ್ದಾರೆ. ನಾವು ನಮ್ಮ ತಾಯಿಯನ್ನು ಹಲವಾರು ಹೆಸರಿನಿಂದ ಕರೆದರೂ, ಮೂಲ ತಾಯಿ ಎನ್ನುವ ಶಕ್ತಿ ಒಂದೇ ಹಾಗಿದೆ.
ಅದೇ ರೀತಿ ದೇವರು ಒಬ್ಬನೇ, ಅವನೇ ನಮ್ಮಲ್ಲಿನ ಅಂತರಂಗದಲ್ಲಿರುವಾತ. ದೆವನಲ್ಲಿ ನಾವು ಧ್ಯೇಯ ಹಾಗೂ ಭಕ್ತಿಯಿಂದ ನಡೆದುಕೊಂಡರೆ ಮಾತ್ರ ಸಾಧನೆ, ಸಾರ್ಥಕತೆ ಸಾಧ್ಯ ಎಂದು ತಿಳಿಸಿದರು.

ನಮ್ಮೆಲ್ಲರ ಲಿಂಗಾಯತ ಧರ್ಮ ಕೇವಲ ಪ್ರಮಾಣ ಪತ್ರಕ್ಕಾಗಿ ಅಲ್ಲ, ಅದನ್ನು ಆತ್ಮದಲ್ಲಿ ಬೆರೆಸಿಕೊಂಡಾಗ ಮಾತ್ರ ಲಿಂಗಾಯತರಾಗಿದ್ದು ಸಾರ್ಥಕ ಎಂದು ಹೇಳಿದರು.
ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮಿಗಳು ರುದ್ರಾಕ್ಷಿಮಠ, ನಾಗನೂರು–ಬೆಳಗಾವಿ, ಪ್ರೇಮಕ್ಕ ಅಂಗಡಿ ಜಿಲ್ಲಾಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಸಂಗೀತಾ ಮುರುಗೇಶ ಶಿವಪೂಜಿ ಹಾಗೂ ಮುರುಗೇಶ ಬಾಬುರಾವ ಶಿವಪೂಜಿ ದಂಪತಿ, ವಿದ್ಯಾ ಗೌಡರ, ದಾಕ್ಷಾಯಿಣಿ ಹೂಗಾರ, ಮಹಾನಂದ ಪರುಶೆಟ್ಟಿ ಹಾಗೂ ಅನೇಕ ಶರಣ, ಶರಣೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
