ಆರೆಸ್ಸೆಸ್ ನಾಯಕ ಬಸವರಾಜ ಪಾಟೀಲ್ ಸೇಡಂ, ಮನುಸ್ಮೃತಿ ಬೆಂಬಲಿಸುವ ಗುರುರಾಜ ಕರ್ಜಗಿ,
ಕೋಮು ಭಾಷಣ ಮಾಡುವ ಹಾರಿಕಾ ಮಂಜುನಾಥ್ ಜೊತೆ ಶ್ರೀಗಳು ವೇದಿಕೆ ಹಂಚಿಕೊಂಡರು
ಭಾಲ್ಕಿ
ಸೇಡಂನಲ್ಲಿ ನಡೆಯುತ್ತಿರುವ ಸಂಘ ಪರಿವಾರ ಪ್ರಾಯೋಜಿತ ‘ಭಾರತೀಯ ಸಂಸ್ಕೃತಿ ಉತ್ಸವ’ದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಶ್ರೀ ಬಸವಲಿಂಗ ಪಟ್ಟದೇವರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಬಸವಪರ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ‘ಭಾರತೀಯ ಸಂಸ್ಕೃತಿ ಉತ್ಸವ’ವವನ್ನು ದೇಶದಲ್ಲಿ ಏಕ ಸಂಸ್ಕೃತಿ ಹೇರುವ ಹುನ್ನಾರವೆಂದು ತೀವ್ರವಾಗಿ ವಿರೋಧಿಸಿವೆ.
ಉತ್ಸವದ ಉದ್ಘಾಟನಾ ಸಮಾರಂಭದ ಅಂಗವಾಗಿ ಬುಧವಾರ ನಡೆದ ದಿಶಾ ನಿರ್ದೇಶನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀ ಬಸವಲಿಂಗ ಪಟ್ಟದೇವರು ಮಾತನಾಡಿದರು.

ಇದೇ ಕಾರ್ಯಕ್ರಮದಲ್ಲಿ ಸೇಡಂ ಉತ್ಸವದ ಮುಖ್ಯ ಆಯೋಜಕ ಮತ್ತು ಆರೆಸ್ಸೆಸ್ ನಾಯಕ ಬಸವರಾಜ ಪಾಟೀಲ್ ಸೇಡಂ, ಹಂಪಿಯ ಭಾಸ್ಕರತೀರ್ಥ ಶ್ರೀಗಳು, ಸಂಘ ಪರಿವಾರದ ಕಟ್ಟಾಳುಗಳಾಗಿರುವ ಗುರುರಾಜ ಕರ್ಜಗಿ ಮತ್ತು ಹಾರಿಕ ಮಂಜುನಾಥ್ ಉಪಸ್ಥಿತರಿದ್ದರು.
ಇವರಲ್ಲಿ ಗುರುರಾಜ ಕರ್ಜಗಿಯವರು ಇತ್ತೀಚೆಗೆ ಮನುಸ್ಮೃತಿಯನ್ನು ಬೆಂಬಲಿಸಿ ವಿವಾದ ಸೃಷ್ಟಿಸಿದ್ದರು. ಹಿಂದುತ್ವದ ಯುವ ವಾಗ್ಮಿ ಎಂದು ಹೆಸರು ಮಾಡಿರುವ ಬೆಂಗಳೂರಿನ ಹಾರಿಕಾ ಮಂಜುನಾಥ ಅವರ ಮೇಲೆ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಎಫ್ಐಆರ್ ಕೂಡ ದಾಖಲಾಗಿದೆ.
10 ನಿಮಿಷಗಳ ಆಶೀರ್ವಚನ ನೀಡಿದ ಶ್ರೀಗಳು ತಮಗಿಂತ ಮುಂಚೆ ಭಾಷಣ ಮಾಡಿದ ಗುರುರಾಜ ಕರ್ಜಗಿ ಮತ್ತು ‘ಚಿಕ್ಕ ತಾಯಿ’ (ಹಾರಿಕಾ ಮಂಜುನಾಥ) ಅವರು ಅದ್ಭುತವಾಗಿ ಮಾತನಾಡಿದರು ಎಂದು ಹೇಳಿದರು.

ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು, ಆದರೆ ಇಂದು ವಯಸ್ಸಾದ ತಂದೆ ತಾಯಿಗಳನ್ನು ನೋಡಿಕೊಳ್ಳದ ಪ್ರವೃತಿ ಬೆಳೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಯೋಜಕರಿಂದ ಗೌರವ ಸನ್ಮಾನ ಸ್ವೀಕರಿಸಿ, ಶ್ರೀ ಬಸವಲಿಂಗ ಪಟ್ಟದೇವರು ‘ವಂದೇ ಮಾತರಂ’ ಶೀರ್ಷಿಕೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು
ಆಯೋಜಕರಿಂದ ಗೌರವ ಸನ್ಮಾನ ಸ್ವೀಕರಿಸಿ, ಶ್ರೀ ಬಸವಲಿಂಗ ಪಟ್ಟದೇವರು ‘ವಂದೇ ಮಾತರಂ’ ಶೀರ್ಷಿಕೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸಭೆಯಲ್ಲಿ ಇವರನ್ನು ಸಾಮಾಜಿಕ ಕಳಕಳಿಯಿರುವ ತ್ರಿವಿಧ ದಾಸೋಹಿ, ಎಲ್ಲ ಹಂತಗಳಲ್ಲಿಯೂ ಧ್ವನಿ ಎತ್ತುವ ಪರಮಪೂಜ್ಯ ಗುರು ಎಂದು ಪರಿಚಯ ಮಾಡಿಕೊಡಲಾಯಿತು.
ಕಲಬುರಗಿ ಚಲೋ
ಸೇಡಂನ ಏಕ ಸಂಸ್ಕೃತಿ ಉತ್ಸವದ ವಿರುದ್ಧ ಇತ್ತೀಚೆಗೆ ನಡೆದ ಕಲಬುರಗಿ ಚಲೋ ಕಾರ್ಯಕ್ರಮದಲ್ಲಿ ಭಾಲ್ಕಿ ಶ್ರೀಗಳು ಭಾಗವಹಿಸಿದ್ದರೂ, ಅವರು ಸಂಘದ ಸೇಡಂ ಉತ್ಸವಕ್ಕೂ ಹೋಗುವ ಸುಳಿವು ಕೊಟ್ಟಿದ್ದರು.
ಸೇಡಂ ಉತ್ಸವಕ್ಕೆ ಪ್ರಚಾರ ನೀಡಲು ಬಂದಿದ್ದ ಸಂಘ ಪರಿವಾರದ ‘ಬಸವ ರಥ’ಕ್ಕೆ ಭಾಲ್ಕಿ ಮಠದ ಆವರಣದಿಂದಲೇ ಭಾಲ್ಕಿಯ ಕಿರಿಯ ಶ್ರೀ ಗುರುಬಸವ ಪಟ್ಟದೇವರು ಚಾಲನೆ ಕೊಟ್ಟಿದ್ದರು.
ಕಲಬುರಗಿ ಚಲೋಗೂ ಬಂದು ಸೇಡಂ ಉತ್ಸವವನ್ನೂ ಬೆಂಬಲಿಸುತ್ತಿರುವ ಅಕ್ಕ ಗಂಗಾಂಬಿಕೆ, ಶ್ರೀ ಗುರುಬಸವ ಪಟ್ಟದೇವರಂತವರು ಮುಗ್ದರಲ್ಲ, ಸ್ವಾರ್ಥಿಗಳು ಎಂದು ಸೌಹಾರ್ದ ಕರ್ನಾಟಕ ವೇದಿಕೆಯ ಕೆ.ನೀಲಾ ಬಸವ ಮೀಡಿಯಾದಲ್ಲಿ ಬರೆದಿದ್ದರು.
ಭಾಲ್ಕಿ ಮಠದ ಈ ದ್ವಂದ್ವ ನಿಲುವು ಹೊಸದೇನಲ್ಲ, ಇವರಿಗೆ ಆರೆಸ್ಸೆಸ್ ಜೊತೆ ಬಹಳ ವರ್ಷಗಳಿಂದ ಒಡನಾಟವಿದೆ,
ಭಾಲ್ಕಿ ಮಠದ ಈ ದ್ವಂದ್ವ ನಿಲುವು ಹೊಸದೇನಲ್ಲ, ಇವರಿಗೆ ಆರೆಸ್ಸೆಸ್ ಜೊತೆ ಬಹಳ ವರ್ಷಗಳಿಂದ ಒಡನಾಟವಿದೆ, ಎಂದು ಭಾಲ್ಕಿಯ ವಿಶ್ವಕ್ರಾಂತಿ ದಿವ್ಯ ಪೀಠದ ಅಧ್ಯಕ್ಷ ಓಂ ಪ್ರಕಾಶ್ ರೊಟ್ಟೆ ಹೇಳಿದರು.
ಶ್ರೀ ಗುರುಬಸವ ಪಟ್ಟದೇವರು ಕೇಂದ್ರ ಸರಕಾರದಲ್ಲಿ ಪ್ರಭಾವ ಬೆಳೆಸಿಕೊಳ್ಳಲು ಸಕ್ರಿಯವಾಗಿ ಸಂಘ ಪರಿವಾರದ ಜೊತೆ ಗುರುತಿಸಿಕೊಂಡಿದ್ದಾರೆ. ಶ್ರೀ ಬಸವಲಿಂಗ ಪಟ್ಟದೇವರು ಆಗಾಗ್ಗೆ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುತ್ತ ರಾಜ್ಯ ಸರಕಾರದಲ್ಲಿ ಪ್ರಭಾವ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಈಗ ಇವರು ಸಂಪೂಣವಾಗಿ ಆ ಕಡೆಯೇ ಹೋಗಿದ್ದಾರೆ.
ಸಮಾಜದಲ್ಲಿ ಬಸವ ತತ್ವ ಬೆಳೆಯುತ್ತಿರುವುದು ಇಂತ ಸ್ವಾರ್ಥಿಗಳಿಂದಲ್ಲ, ನಮ್ಮ ನಿಮ್ಮಂತಹ ಸಾಮಾನ್ಯ ಬಸವ ಅನುಯಾಯಿಗಳಿಂದ, ಇದನ್ನು ಯಾರೂ ಮರೆಯಬಾರದು, ಎಂದು ರೊಟ್ಟೆ ಹೇಳಿದರು.
ಸಮಾಜದಲ್ಲಿ ಬಸವ ತತ್ವ ಬೆಳೆಯುತ್ತಿರುವುದು ಇಂತ ಸ್ವಾರ್ಥಿಗಳಿಂದಲ್ಲ, ನಮ್ಮ ನಿಮ್ಮಂತಹ ಸಾಮಾನ್ಯ ಬಸವ ಅನುಯಾಯಿಗಳಿಂದ,
ಮಠಾಧೀಶರ ಒಕ್ಕೊಟದ ಸದಸ್ಯರ ಪ್ರತಿಕ್ರಿಯೆ
ಸೇಡಂ ಉತ್ಸವಕ್ಕೆ ಹೋಗಿ ಬೆಂಬಲ ಸೂಚಿಸಿರುವ ಶ್ರೀ ಬಸವಲಿಂಗ ಪಟ್ಟದೇವರ ವಿರುದ್ಧ ಲಿಂಗಾಯತ ಮಠಾಧೀಶರ ಒಕ್ಕೊಟದ ಹಲವಾರು ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ.
ಬಸವ ತತ್ವಕ್ಕೆ ವಿಷ ಕೊಟ್ಟು, ವೈದಿಕರಿಗೆ ಗುಲಾಮರಾದ ಇವರಿಗೆ ಲಿಂಗಾಯತ ಧರ್ಮ ಮತ್ತು ಬಸವ ತತ್ವ ಮುಖ್ಯವಲ್ಲ. ಶಿಕ್ಷಣ ಸಂಸ್ಥೆ ಮತ್ತು ಹಣ ಮುಖ್ಯವಾಗಿದೆ, ಎಂದು ಸಾಮಾಜಿಕ ಜಾಲತಾಣದಲ್ಲಿ ಯುವ ಸ್ವಾಮೀಜಿಯೊಬ್ಬರು ಬರೆದುಕೊಂಡಿದ್ದಾರೆ.
ಬಸವ ಮೀಡಿಯಾ ಕರೆ ಮಾಡಿದಾಗ ಸಮುದಾಯದ ಪ್ರಮುಖ ಮಠಾಧೀಶರೊಬ್ಬರು ಭಾಲ್ಕಿ ಶ್ರೀಗಳ ನಡೆಗೆ ವಿಷಾದ ವ್ಯಕ್ತಪಡಿಸಿದರು.
ಒಕ್ಕೂಟದ ಅಧ್ಯಕ್ಷರಾಗಲು ಇವರು ನೈತಿಕ ಆರ್ಹತೆ ಕಳೆದುಕೊಂಡಿದ್ದಾರೆ. ಇವರು ಈಗ ರಾಜೀನಾಮೆ ನೀಡಿದರೆ
ಒಕ್ಕೂಟಕ್ಕೆ ಒಳ್ಳೆಯದು.
“ಇವರಿಂದ ಬಹಳ ಗೊಂದಲದ ಸಂದೇಶ ಬರುತ್ತಿದೆ. ಒಂದು ಕಡೆ ಧರ್ಮ ಜಾಗೃತಿ ಅಭಿಯಾನ ಅಂತ ಸಭೆ ಕರೆಯುತ್ತಾರೆ, 10 ದಿನದ ನಂತರ ಆರೆಸ್ಸೆಸ್ ಜೊತೆ ಕಾಣಿಸಿಕೊಳ್ತಾರೆ. ಒಕ್ಕೂಟದ ಅಧ್ಯಕ್ಷರಾಗಲು ಇವರು ನೈತಿಕ ಆರ್ಹತೆ ಕಳೆದುಕೊಂಡಿದ್ದಾರೆ. ಇವರು ಈಗ ರಾಜೀನಾಮೆ ನೀಡಿದರೆ ಒಕ್ಕೂಟಕ್ಕೆ ಒಳ್ಳೆಯದು.
“ಇಂತವರು ಅನುಭವ ಮಂಟಪದ ಅಧ್ಯಕ್ಷರಾಗಲು ಎಷ್ಟು ಆರ್ಹರು ಎಂಬ ಪ್ರಶ್ನೆಯೂ ಈಗ ಬಂದಿದೆ”
ಈ ದಶಕದ ಬಹು ದೊಡ್ಡ ಬೆಳವಣಿಗೆಯೆಂದರೆ ಬಸವ ಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಅನುಭವ ಮಂಟಪ. ಅದು ಬಸವ ತತ್ವ ಪ್ರಸಾರದ ಮತ್ತು ಲಿಂಗಾಯತ ಚಳುವಳಿಯ ಕೇಂದ್ರ ಬಿಂದುವಾಗುತ್ತದೆ. ಇಂತವರು ಅನುಭವ ಮಂಟಪದ ಅಧ್ಯಕ್ಷರಾಗಲು ಎಷ್ಟು ಆರ್ಹರು ಎಂಬ ಪ್ರಶ್ನೆಯೂ ಈಗ ಬಂದಿದೆ,” ಎಂದು ಹೇಳಿದರು.
ದುಡ್ಡೇ ದೊಡ್ಡಪ್ಪ
ಲಿಂಗಾಯತ ಧಮ೯ ನಿಂತಿರುವುದು / ಬೆಳೆಯಬೆಕಿರುವುದು ಯಾರೊಬ್ಬ ಮಠಾಧಿಶರಿಂದಲ್ಲಾ ಎಂಬುದನ್ನು ಬಾಲ್ಕಿಮಠ ,ಬಸವಗಿರಿಮಠ, ರುಜುವಾತು ಪಡಿಸಿದೆ.
ಈ ಹಿಂದೆ ಬಸವಕಲ್ಯಾಣದಲ್ಲಿ ರಾಜಕೀಯ ಮುಖಂಡರನ್ನು ಹೊರಗಿಟ್ಟು ರಾಜ್ಯಮಟ್ಟದ ಲಿಂಗಾಯತ ಸಮಾವೆಶ ಮಾಡಿದಾಗಲೇ ಲಿಂಗಾಯತರ ನೈಜ ಹೋರಾಟ ಪ್ರಾರಂಭವಾಗಿ ,ಈಗ ಮಠಾಧಿಶರನ್ನು ಹೊರಗಿಟ್ಟು ಸಂಘಟನೆಯನ್ನು ಗಟ್ಟಿಗೊಳಿಸುವ ಸವಾಲೊಂದನ್ನು ಬಸವಪ್ರಣಿತ ಲಿಂಗಾಯತರು ಎದುರಿಸುವುದಕ್ಕೆ ಸಜ್ಜಾಗಬೆಕಾದ ಅನಿವಾಯ೯ತೆಯಿದೆ.
ಮನಸ್ಸಿಗೆ ತುಂಬಾ ನೋವು ದುಃಖ ಆಗಿದೆ
ಬೇಲಿನೆ ಎದ್ದು ಹೊಲ ಮೇಯ್ದ ಹಾಗೆ
ತಾಯ ಮೊಲೆಹಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ಅನ್ನುವಂತಾಗಿದೆ.
12ನೇಯ ಶತಮಾನದಲ್ಲಿ ಬಸವಾದಿ ಪ್ರಮಥರಿಗೆ ಅನ್ಯಾಯ ಮಾಡಿ, ಬಸವಣ್ಣನವರನ್ನ ಗಡಿಪಾರು ಮಾಡಿ, ಬಸವಾದಿ ಶರಣರ ಕಗ್ಗೊಲೆ ಮಾಡಿ, ಜೀವಕ್ಕೆ ಜೀವವಾಗಿರುವ ವಚನಸಾಹಿತ್ಯ ಸುಟ್ಟು ಹಾಕಿ,
ಈಗ 21 ನೇಯ ಶತಮಾನದಲ್ಲೂ ಬಸವಣ್ಣನವರು ಗುರುನೇ ಅಲ್ಲ ವಚನಗಳು ವಚನಗಳೇ ಅಲ್ಲ, ಈ ನೆಲದಲ್ಲಿ ಕ್ರಾಂತಿನೇ ನಡೆದಿಲ್ಲ ಅಂತಾ ಹೇಳುತ್ತ ತಿರುಗುವವರ ಜೊತೆಗೆ ಕೈ ಜೋಡಿಸುತ್ತೀರುವವರು ಬೇರೆ ಯಾರೂ ಅಲ್ಲ
ಬಸವತತ್ವದ ಕಟ್ಟಾಳು ಎಂದು ಹೇಳುತ್ತ, ಬಸವಣ್ಣನವರ ಹೆಸರು ಹೇಳುತ್ತ ಬೆಳಕಿಗೆ ಬಂದವರು.
ಇಂಥವರಿಗೆ ಏನೆನ್ನಬೇಕು. ಇದನ್ನೆಲ್ಲ ನೋಡಿ ನಮಗಂತು ತುಂಬಾ ದಿಗ್ಭ್ರಮೆಯಾಗಿದೆ.
ಇವರಿಗೂ ವಚನಾನಂದರಿಗೂ ಏನು ವ್ಯತ್ಯಾಸ
ಬಸವಾದಿ ಶರಣ ಪರಂಪರೆಯ ಲಿಂಗ ಧರ್ಮವು ಭಕ್ತಪ್ರಣೀತ ಧರ್ಮವಾಗಿತ್ತು ಕಾವಿಧಾರಿ ಗಳ ಕೀರ್ತನೆಗೆ ಕಿವಿಗೊಡದೆ ಪ್ರತಿಯೊಬ್ಬ ಲಿಂಗವಂತರು ಆಯಾ ಪ್ರದೇಶಗಳಲ್ಲಿ ಸಂಘಟನೆಗಳನ್ನು ಮಾಡಿಕೊಂಡು ನಿಜಾಚರಣೆಗಳೊಂದಿಗೆ ಮುಂದುವರೆಯಿರಿ ಶರಣಾರ್ಥಿ.
ಅನುಭವ ಮಂಟಪ ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು RSS ಗೆ ವಲವು ಇದ್ದರೆ ಅವರ ಮಠದಲ್ಲಿ ದೀಕ್ಷೆ ತೆಗೆದುಕೊಳ್ಳಲಿ. ಬಸವ ಡ್ರೋಹಿಗಳಾಗಬಾರದು ಯಾರನ್ನು ನಂಬಬೇಕು ತಿಳಿಯುತ್ತಿಲ್ಲ
Lingayat religion love all religions. Don’t angry for other religious. Basava love all the world.