ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ದಿನಾಂಕ: ೧೪-೦೨-೨೦೨೫ ರಂದು ಮಧ್ಯಾಹ್ನ ೪ ಗಂಟೆಗೆ ಸಂಘದ ಶ್ರೀ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಶ್ರೀಮತಿ ಪಾರ್ವತೆವ್ವಾ ಮಲ್ಲಯ್ಯ ರಾಚಯ್ಯನವರ ದತ್ತಿ ಕಾರ್ಯಕ್ರಮ ಅಂಗವಾಗಿ “ಸರ್ವಜ್ಞನ ಸ್ಮರಣೆ” ನಿಮಿತ್ತ ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪಿ.ಯು.ಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಮಾತ್ರ “ಸರ್ವಜ್ಞನ ವಚನಗಳ ಕಂಠಪಾಠ ಮತ್ತು ಅರ್ಥ ವಿವರಣೆ” ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯ ನಿಯಮಗಳು
೧. ಪಿ.ಯು.ಸಿ ವಿದ್ಯಾರ್ಥಿಗಳು ಸರ್ವಜ್ಞನ ಒಂದು ವಚನವನ್ನು ಕಂಠಪಾಠ ಹೇಳಿ (ಬಾಯಿಪಾಟ) ವಚನದ ಅರ್ಥವನ್ನು ೩ ರಿಂದ ೫ ನಿಮಿಷದ ಒಳಗಾಗಿ ಹೇಳುವುದು.
೨. ಮೊದಲು ಹೆಸರು ನೊಂದಾಯಿಸಿಕೊಳ್ಳುವ ೨೫ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ತಮ್ಮ ಪೂರ್ಣ ಹೆಸರು, ಓದುತ್ತಿರುವ ಕಾಲೇಜು, ವರ್ಗ, ಮೊಬೈಲ್ ಸಂಖ್ಯೆಯೊಂದಿಗೆ ದಿನಾಂಕ ೧೦-೦೨-೨೦೨೫ ರ ಒಳಗಾಗಿ ಸಂಘದ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಇವರನ್ನು (೧೮೩೬/೨೪೪೦೨೮೩, ೯೪೪೮೦೨೨೯೫೦) ಸಂಪರ್ಕಿಸಬಹುದು.
೩. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಿ, ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
೪. ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಅದೇ ದಿನಾಂಕ ೧೪-೦೨-೨೦೨೫ ರಂದು ಸಾಯಂಕಾಲ ೬ ಗಂಟೆಗೆ ಜರುಗುವ ಶ್ರೀಮತಿ ಪಾರ್ವತೆವ್ವಾ ಮಲ್ಲಯ್ಯ ರಾಚಯ್ಯನವರ ದತ್ತಿ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುವುದು.
೫. ಫಲಿತಾಂಶ ಪ್ರಕಟಿಸುವಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ನಿರ್ಣಯವೇ ಅಂತಿಮ.
ಈ ಬಗ್ಗೆ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.