ಬನಹಟ್ಟಿ
ಬಾಗಲಕೋಟೆ ಜಿಲ್ಲೆ ತಾಲೂಕು ಕೇಂದ್ರವಾದ ಬನಹಟ್ಟಿ ನಗರದಲ್ಲಿ ರವಿವಾರ ಸಾಹಿತಿ ಡಾ. ಡಿ ಎ ಬಾಗಲಕೋಟೆ ಅವರ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಸಾಹಿತಿ ಶಿವಕುಮಾರ ಪಾವಟೆಯವರು ‘ಶಿವಯೋಗದ ಗುಡಿಯ ನೋಡಿರಣ್ಣ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಮಹಾನ್ ಶಿವಯೋಗ ಸಾಧಕರಾಗಿದ್ದ ಮಹಾಲಿಂಗಪುರದ ಶ್ರೀ ಚನ್ನವೀರ ಶಿವಯೋಗಿಗಳ ಜೀವನ ಚರಿತ್ರೆಯ ಪೂರ್ಣ ಮಾಹಿತಿ ಈ ಕೃತಿಯಲ್ಲಿದೆ ಎಂದು ತಿಳಿಸಿದರು. ಇದು ಇಂಗ್ಲಿಷ್ ಸಾಹಿತ್ಯದ ಪ್ರಮುಖ ಅಧ್ಯಾತ್ಮಿಕ ಕೃತಿಯಾದ ಜಾನ್ ಬಾನಿಯನ್ ಅವರ ‘ದ ಪಿಲ್ಗ್ರೀಮ್ಸ್ ಪ್ರೋಗ್ರೆಸ್’ಗೆ ಹೋಲಿಸಬಹುದಾದ ಕೃತಿ ಎಂದರು.
ಇನ್ನೊಂದು ಕೃತಿ ‘ಬಯಲು ಬೆಡಗು’ ಕೃತಿಯನ್ನು ಶ್ರೀ ಜಂಬುನಾಥ ಕಂಚಾಣಿ ಅವರು ಬಿಡುಗಡೆ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯಕುಮಾರ್ ಕಟ್ಟಿಗೆಹಳ್ಳಿ ಮಠ, ಬಸವರಾಜ ಕಡ್ಡಿ, ಉಮಾಶೇಖರ ಎಸ್ ಸ್ವಾಮಿ ಹಿರೇಮಠ, ಡಾ ಡಿ ಎ ಬಾಗಲಕೋಟೆ, ಚೆನ್ನಪ್ಪ ಅಂಗಡಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅರು ಪ್ರಕಾಶನದವರು ಆಯೋಜಿಸಿದ್ದರು.