ಬೀದರಿನಲ್ಲಿ ಒಂದು ವಿಶಿಷ್ಟ ಆಚರಣೆ: ವಚನ ಗ್ರಂಥಗಳ ಪಟ್ಟಾಭಿಷೇಕ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಕನ್ನಡದ ಅನರ್ಘ್ಯ ಸಂಪತ್ತಾಗಿರುವ ವಚನ ಗ್ರಂಥಗಳಿಗೆ ಪ್ರತಿ ವರ್ಷ ಪಟ್ಟ ಕಟ್ಟಿ, ಪೂಜೆ ಸಲ್ಲಿಸಿ ಪಟ್ಟಾಭಿಷೇಕ ಕಟ್ಟುವ ಇದೊಂದು ವಿಶಿಷ್ಟ ಆಚರಣೆ.

ಬುಧವಾರ ವಚನ ವಿಜಯೋತ್ಸವದ ಕೊನೆ ದಿನವಾದ ಬುಧವಾರದಂದು ವಚನ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಗೊರುಚ, ಗಂಗಾ ಮಾತಾಜಿ, ಡಾ. ಬಸವಲಿಂಗ ಪಟ್ಟದ್ದೇವರು ಮತ್ತು ಡಾ. ಗಂಗಾಂಬಿಕಾ ಅಕ್ಕ ಇತರರು ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರು ‘ಹನ್ನೆರಡನೇ ಶತಮಾನದಲ್ಲಿ ವಚನ ಸಾಹಿತ್ಯ ನಾಶಗೊಳಿಸಬೇಕೆಂದು ಜಾತಿವಾದಿ ಶಕ್ತಿಗಳು ಪಣ ತೊಟ್ಟಿದ್ದರು. ಈಗ ಅದೇ ಜಾಗದಲ್ಲಿ 21ನೇ ಶತಮಾನದಲ್ಲಿ ವಚನ ವಿಜಯೋತ್ಸವ ಮಾಡುತ್ತಿರುವುದು ಸ್ತುತ್ಯಾರ್ಹ ಕೆಲಸ’ ಎಂದು .

ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ ‘ನನಗೆ ನೈತಿಕ ಬೆಂಬಲ ಕೊಟ್ಟು ವಚನ ವಿಜಯೋತ್ಸವ ಯಶಸ್ವಿಗೊಳಿಸಿರುವ ತಮ್ಮೆಲ್ಲರಿಗೂ ಧನ್ಯವಾದ ಹೇಳುವೆ,’ ಎಂದು ಭಾವುಕರಾಗಿ ಹೇಳುತ್ತ ಗದ್ಗಿದಿತರಾದರು.

ಶರಣ ಸಾಹಿತಿ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಅವರು ಗುರುಬಸವ ಪುರಸ್ಕಾರ ಸ್ವೀಕರಿಸಿ ಅನುಭವ ಮಂಟಪ ಜಾಗತಿಕ ಕೇಂದ್ರವಾಗಿ ಬೆಳೆಯಬೇಕು. ಅಲ್ಲಿ ವಚನ ವಿಶ್ವವಿದ್ಯಾಲಯ ಆಗಬೇಕು. ಬಯಲಾಟ, ಯಕ್ಷಗಾನ, ಜಾನಪದ ಅಕಾಡೆಮಿಯಂತೆ ವಚನ ಅಕಾಡೆಮಿ ಕೂಡ ಸರ್ಕಾರ ಮಾಡಬೇಕು ಎಂದರು.
ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಇಳಕಲ್‌ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಸಾರಂಗಮಂಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಸವರಾಜ ಧನ್ನೂರ, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಗುರುನಾಥ ಕೊಳ್ಳೂರ, ನಿರ್ಮಾಪಕ ಬಿ.ಜೆ. ವಿಷ್ಣುಕಾಂತ, ನಟಿ ಸುಲಕ್ಷಾ ಕೈರಾ ಮತ್ತಿತರರು ಹಾಜರಿದ್ದರು.

Share This Article
Leave a comment

Leave a Reply

Your email address will not be published. Required fields are marked *