ಬೆಳಗಾವಿ
ನಗರದ ರಾಮತೀರ್ಥ ನಗರದಲ್ಲಿರುವ ಬಸವರಾಜ ದೇಯಣ್ಣವರ ಅವರಿಗೆ ಸೇರಿದ ಹೊಸ ಮನೆಯ ಗುರುಪ್ರವೇಶ ಲಿಂಗಾಯತ ನಿಜಾಚರಣೆಯಂತೆ ಇತ್ತೀಚೆಗೆ ನೆರವೇರಿತು.
ಮೊದಲು ಬಸವಧ್ವಜಾರೋಹಣ ನಡೆಯಿತು. ನಂತರ ಬಸವಣ್ಣನವರ ಮೂರ್ತಿಯೊಂದಿಗೆ, ವಚನ ಸಾಹಿತ್ಯವನ್ನು ತಲೆಮೇಲೆ ಹೊತ್ತುಕೊಂಡು ಕುಟುಂಬ ಸದಸ್ಯರು ನೂತನ ಮನೆಯ ಪ್ರವೇಶ ಮಾಡಿದರು.

ಬೆಳಗಾವಿ ಸಂಚಾರಿ ಗುರುಬಸವ ಬಳಗದ ಸಂಚಾಲಕ, ಶರಣ ಮಹಾಂತೇಶ ತೋರಣಗಟ್ಟಿ ಅವರು ಧರ್ಮಗುರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ವಚನಗಳ ಪಠಣ ಮಾಡಿದರು.

ನೂತನ ಮನೆಯಲ್ಲಿ ಇಷ್ಟಲಿಂಗ ಪೂಜೆಯ ಅನುಸಂಧಾನ ನಡೆಯಿತು. ಮತ್ತು ಹಲವಾರು ಶರಣ-ಶರಣೆಯರು ಇದೇ ಸಂದರ್ಭದಲ್ಲಿ ತೋರಣಗಟ್ಟಿ ಶರಣರಿಂದ ಲಿಂಗದೀಕ್ಷೆಯನ್ನು ಪಡೆದುಕೊಂಡರು.

ಸಮಾರಂಭದಲ್ಲಿ ಈರಣ್ಣ ದೇಯಣ್ಣವರ, ಬಿ.ಪಿ. ಜೇವಣಿ, ಕೆಂಪಣ್ಣ ರಾಮಾಪುರಿ, ಶಿವಾನಂದ ನಾಯಕ, ಕೊಪ್ಪದ ಮತ್ತು ಅಡಿವೇಶ ಇಟಗಿ ಮತ್ತಿತರರು ಉಪಸ್ಥಿತರಿದ್ದರು.

ಲಿಂಗಾಯತ ಸಂಘಟನೆಯ ಸಹಕಾರ, ಬೆಂಬಲದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಜೆ.ಎಲ್. ಎಂ. ಪದಾಧಿಕಾರಿಗಳು, ಅನೇಕ ಗ್ರಾಮಗಳ ಗುರುಬಸವ ಬಳಗದ ಸದಸ್ಯರು, ದ್ಯೇಯಣ್ಣವರ ಬಂಧುಗಳು, ಮಿತ್ರರು ಉಪಸ್ಥಿತರಿದ್ದರು.