ಯರಗಟ್ಟಿ
ಪಟ್ಟಣದ ಮಹಾಂತ ದುರುದುಂಡೇಶ್ವರ ಮಠದಲ್ಲಿ ಶರಣ ಕಿನ್ನರಿ ಬೊಮ್ಮಯ್ಯರವರ ಜಯಂತೋತ್ಸವವು ಬುಧವಾರದಂದು ಜರುಗಿತು.
ಈ ಸಂದರ್ಭದಲ್ಲಿ 10 ದಿನಗಳ ಯೋಗ ಶಿಬಿರವನ್ನು ಕಾಲ ಆಯೋಜನೆ ಮಾಡಲಾಗಿತ್ತು. ಯರಹಟ್ಟಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಶ್ರೀ ವೈದ್ಯ ಸಂಗಣ್ಣರ ನಿಸರ್ಗ ಚಿಕಿತ್ಸಾಲಯ, ಕಪ್ಪತ್ತಗುಡ್ಡ, ಇವರ ಸಹಯೋಗದಲ್ಲಿ ನಡೆದ ಶಿಬಿರದ ನೇತೃತ್ವವನ್ನು ಪೂಜ್ಯಶ್ರೀ ಓಂಕಾರೇಶ್ವರಿ ಮಾತಾಜಿ ರವರು ವಹಿಸಿದ್ದರು.
ಮಾತಾಜಿ ಶರಣರಾದ ಕಿನ್ನರಿಬೊಮ್ಮಯ್ಯರವರ ಜೀವನದ ಸ್ಥೂಲ ಪರಿಚಯ ಮಾಡಿ, ಅಕ್ಕ ಮಹಾದೇವಿಯವರು ಕಲ್ಯಾಣಕ್ಕೆ ಬಂದಾಗ ಕಿನ್ನರಿಬೊಮ್ಮಯ್ಯ ಮತ್ತು ಅಕ್ಕಮಹಾದೇವಿಯವರ ನಡುವೆ ನಡೆದ ಪ್ರಸಂಗವನ್ನು ವಿವರಿಸಿ ಮಾತನಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್ ಎಸ್ ಕುರುಬಗಟ್ಟಿಮಠ, ಪ್ರಭುಕಮ್ಮಾರ್, ಡಾಕ್ಟರ್ ವಿಶ್ವನಾಥ್ ತಾಂವಶಿ ರವರು ಆಗಮಿಸಿದ್ದರು. ರಾಜಶೇಖರ್ ಬಿರಾದರ್ ನಿರೂಪಣೆ ಮಾಡಿದರು, ದೇವೇಂದ್ರ ಕಮ್ಮತ್ ಶರಣು ವಂದನೆ ಮಾಡಿದರು, ತಮ್ಮಣ್ಣ ಕಾಮಣ್ಣವರ್, ಮಹಾಂತೇಶ್ ಜಕಾತಿ ,ಪ್ರಭು ಕಮ್ಮಾರ್, ವೇದ ಕಮ್ಮಾರ್, ನಿರ್ಮಲ ಕಮ್ಮಾರ್, ಆಶಾ ಪರಿಟ್ ,ಚಿದಾನಂದ ಪತ್ತಾರ್, ಹೂಗಾರ್ ಈರಣ್ಣ, ಉಲ್ಲರ್ ತುಪ್ಪದ್, ಮಹಾಂತೇಶ್ ಹಿರೇಮಠ, ಭಾಸ್ಕರ್ ಹಿರೇಮಠ್, ಶಿವಾನಂದ ಮದ್ದಾನಿ ಭಾಗವಹಿಸಿದ್ದರು.
