ಸಾರ್ವಜನಿಕವಾಗಿ ಸಾಬೀತಾದ ಕನ್ನೇರಿ ಶ್ರೀಗಳ ಅಹಂಕಾರ, ದರ್ಪ, ಅಜ್ಞಾನ

ದುಬೈ

ಮೊನ್ನೆ ಸುವರ್ಣ ಟಿವಿ ಕಾರ್ಯಕ್ರಮದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಗಳನ್ನು ಒಬ್ಬರು ನಿಮ್ಮ ಮಠದ ಸಂಪ್ರದಾಯ ವೈದಿಕವೋ ಅವೈದಿಕವೋ ಎಂದು ಕೇಳಿದರು. ಅದನ್ನ ನಿರ್ಣಯ ಮಾಡಲು ನೀವ್ಯಾರು ಎಂದು ಕನ್ನೇರಿ ಶ್ರೀಗಳು ಮರು ಪ್ರಶ್ನೆ ಮಾಡಿದರು. ಸಾಲದ್ದಕ್ಕೆ ಬಸವಾನುಯಾಯಿಗಳನ್ನ ತಾಲಿಬಾನಿಗಳು ಎಂತಲೂ ಜರಿದರು.

ತಮ್ಮ ಸ್ವಂತ ಮಠವಾಗಿದ್ದರೆ ಅಥವಾ ಅಪ್ಪನ ಆಸ್ತಿಯಾಗಿದ್ದರೆ ಬೇರೊಬ್ಬರು ಕೇಳುವಂತಿಲ್ಲ. ಆದರೆ ಕನ್ನೇರಿ ಮಠ ಜನಸಾಮಾನ್ಯರದ್ದು, ಸಮಾಜದ ಹಿತಕ್ಕಾಗಿ ಜನಸಾಮಾನ್ಯರಿಗೆ ಆತ್ಮೋದ್ಧಾರದ ದಾರಿಯನ್ನ ತೋರುವುದಕ್ಕಾಗಿ ಹುಟ್ಟಿದ ಮಠ. ಅಂತಹ ಮಠದ ಮುಖ್ಯಸ್ಥರೊಬ್ಬರು ಸಾರ್ವಜನಿಕವಾಗಿ ‘ಕೇಳೋಕೆ ನೀನ್ಯಾರು’ ಅನ್ನೋ ರೀತಿಯಲ್ಲಿ ಮಾತನಾಡಿದ್ದು ಅವರ ಅಹಂಕಾರ, ದರ್ಪ ಮತ್ತು ಅಜ್ಞಾನವನ್ನು ಎತ್ತಿ ತೋರಿಸಿತು.

ಅಷ್ಟಕ್ಕೂ ವಚನಕಾರ ಕಾಡಸಿದ್ದೇಶ್ವರರು ಬಸವಾದಿ ಶರಣರ ಸಂಪ್ರದಾಯವರು, ಅವರ ೫೦೦ ಕ್ಕೂ ಹೆಚ್ಚು ವಚನಗಳು “ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ” ಎಂಬ ಅಂಕಿತನಾಮದಲ್ಲಿ ದೊರಕಿವೆ, ಈ ವಚನಗಳನ್ನು ಓದಿದವರಿಗೆಲ್ಲ ಕಾಡಸಿದ್ದೇಶ್ವರರು ಬಸವಾದಿ ಶರಣ ಸಂಪ್ರದಾಯದವರು ಎಂದು ನಿಶ್ಚಿತವಾಗಿ ತಿಳಿಯುತ್ತದೆ.

ಅಂತಹ ಮಠಕ್ಕೆ ಇಂದು ಮುಖ್ಯಸ್ಥನಾಗಿ ಬಂದಿರುವ ಇವರು ಮಠದ ಸಂಪ್ರದಾಯ, ತತ್ವ ಸಿದ್ದಾಂತ, ವೈಚಾರಿಕತೆ ಚಿಂತನೆಗಳನ್ನೆಲ್ಲ ಗಾಳಿಗೆ ತೂರಿದ್ದಾರೆ.

ಸಂದರ್ಶನದಲ್ಲಿ ಬಸವ ತತ್ವದ ‘ಇವ ನಮ್ಮವ’ ಸಂಪ್ರದಾಯಕ್ಕೆ ವಿರುದ್ಧವಾಗಿ ಅಲ್ಪಸಂಖ್ಯಾತರ ಕುರಿತು ವಿಷಕಕ್ಕಿದ, ಈ ಮನುಷ್ಯ ಖಾವಿ ತೊಡುವುದಕ್ಕೆ ಅಯೋಗ್ಯ ಎಂದು ತೋರಿಸಿದ್ದಾರೆ.

ಸನ್ಯಾಸಿಯೊಬ್ಬ ಒಂದು ಮಠದ ಪೀಠಾದಿಪತಿಯಾದಾಗ ಆ ಮಠದ ತತ್ವ ಸಿದ್ಧಾಂತ ಸಂಪ್ರದಾಯಗಳಿಗೆ ಮತ್ತು ಸಮಾಜಮುಖಿ ಕೆಲಸಗಳಿಗೆ ತನ್ನ ಬದ್ಧತೆ ನಿಷ್ಠೆಯನ್ನು ತೋರಬೇಕಾಗುತ್ತದೆ. ತಾನು ನಂಬಿರುವ ತತ್ವ ಸಿದ್ಧಾಂತಗಳಿಗೆ ಎಷ್ಟು ನಿಷ್ಠರಾಗಿರಬೇಕು ಎಂದು ಬಸವಣ್ಣನವರು ಒಂದು ವಚನದಲ್ಲಿ ಹೇಳಿದ್ದು ಹೀಗೆ-

“ಎನಿಸೆನಿಸೆಂದಡೆ ನಾ ಧೃತಿಗೆಡೆನಯ್ಯಾ.
ಎಲುದೋರಿದಡೆ, ನರ ಹರಿದಡೆ, ಕರುಳು ಕುಪ್ಪಳಿಸಿದಡೆ
ನಾ ಧೃತಿಗೆಡೆನಯ್ಯಾ.
ಶಿರಹರಿದು ಅಟ್ಟೆ ನೆಲಕ್ಕೆ ಬಿದ್ದಡೆ
ನಾಲಗೆ ಕೂಡಲಸಂಗಾ ಶರಣೆನುತ್ತಿದ್ದಿತ್ತಯ್ಯಾ.”

ಇಂತಹ ನಿಷ್ಠೆ ತೋರಲು ಅಶಕ್ತರಾದಲ್ಲಿ ತಕ್ಷಣವೇ ಮಠ ತ್ಯಾಗ ಮಾಡಬೇಕು, ಮೂರು ಕಾಸಿನ ಅಧಿಕಾರಕ್ಕೋ ಅಥವಾ ಬಿಟ್ಟಿ ಪ್ರಚಾರಕ್ಕೋ ತತ್ವಸಿದ್ಧಾಂತಗಳನ್ನ ಮಾರಿಕೊಳ್ಳುವ ಹೇಡಿಯಾಗಬಾರದು.

ಇವರು ಬಸವಾನುಯಾಯಿಗಳಲ್ಲಿ ಕ್ಷಮೆಕೋರಿ ಕನ್ನೇರಿ ಮಠ ಪೀಠ ತ್ಯಾಗ ಮಾಡಬೇಕು.

Share This Article
5 Comments
  • ಇಂದು ಮಠಕ್ಕೆ ಮುಖ್ಯಸ್ಥನಾಗಿ, ಮಠದ ಸಂಪ್ರದಾಯ,
    ಚಿಂತನೆಗಳನ್ನೆಲ್ಲ ಗಾಳಿಗೆ ತೂರಿದ್ದಾರೆ.
    ಇವರು ಬಸವಾನುಯಾಯಿಗಳಲ್ಲಿ ಕ್ಷಮೆಕೋರ ಬೇಕು

  • ಮಾಠಾಧೀಷರು ಇವನ್ಯಾರವ ಇವನ್ಯಾರವ ಅನ್ನದೇ ಇವ ನಮ್ಮವ ನಮ್ಮವ ಅನ್ನುವ ಸಿದ್ದಾಂತ ಹೊಂದಿರಬೇಕು ಶ್ರೀ ಕಾಡಸಿದ್ದೇಶ್ವರ ಅವರ ಸನ್ಯಾಸತ್ವ ಹೊಳೆಯಲ್ಲಿ ಹುನಸಿಹಣ್ಣು ತೊಳೆದ ಹಾಗಾಯಿತು

  • ಕಾಡಸಿದ್ದೇಶ್ವರ ಶರಣರ ಐದುನೂರು ವಚನಗಳನ್ನು ಓದಿಕೊಂಡು ಅರ್ತೈಸಿಕೊಂಡು ಮಾತಾಡುವುದನ್ನು ಮೊದಲು ಕಲಿಯಲಿ….ಬರೀ ಕಾಡ ಸಿದ್ದೇಶ್ವರ ದೆಂದು ಹೆಸರಿಟ್ಟುಕೊಂಡು ಕಾಡು ಪ್ರಾಣಿಯ ರೀತಿ ಓದರಿದರೆ .. ಕಾಡಸಿದ್ದೇಶ್ವರ ಶರಣರಿಗೆ ಅಪಮಾನ ಮಾಡಿದಂತೆ….ನಮ್ಮ ಶರಣರಿಗೆ ಅಪಮಾನ ಮಾಡಿದರೆ ..ಬಸವತತ್ವಾನುಯಿಗಳು …ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ…..ಮುಂದೆ ಕಾನೂನಿನ ಮೊರೆ ಹೊರಬೇಕಾಗುತ್ತದೆ ಮಠವನ್ನು ಬಿಡಲು ತಯಾರಿದ್ದರೆ ವೈದಿಕರ ಪರ ಮಾತನಾಡಿ.

Leave a Reply

Your email address will not be published. Required fields are marked *