ಕೂಡಲ ಸಂಗಮ
ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವಗಳನ್ನು ಜನಮನದಲ್ಲಿ ಬಿತ್ತಲು ವಿಶೇಷ ಕಾರ್ಯಕ್ರಮ ರೂಪಿಸಿ ಬಜೆಟಿನಲ್ಲಿ ಅನುದಾನ ಕೋರಲು ಲಿಂಗಾಯತ ಸಮಾಜದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಫೆಬ್ರವರಿ 24 ಭೇಟಿ ಮಾಡುತ್ತಿದ್ದಾರೆ.
ಇದೇ ಉದ್ದೇಶದಿಂದ ಇಲ್ಲಿ ಕೆಲವು ವರ್ಷಗಳ ಹಿಂದೆ ಶುರುವಾಗಿದ್ದ ಎರಡು ಮಹತ್ವದ ಯೋಜನೆಗಳು ಅರ್ಧಕ್ಕೆ ನಿಂತು ದೂಳು ಕುಡಿಯುತ್ತಿವೆ. ಇವುಗಳ ಬಗ್ಗೆಯೂ ಗಮನ ಕೊಟ್ಟು ಹಂತ ಹಂತವಾಗಿಯಾದರೂ ಅವುಗಳ ಉದ್ದೇಶ ಪೂರೈಸುವಂತೆ ನೋಡಿಕೊಳ್ಳಬೇಕು ಎನ್ನುವುದು ರಾಜ್ಯದ ಬಸವ ಅನುಯಾಯಿಗಳ ಆಗ್ರಹವಾಗಿದೆ.