ಶರಣ ಜ್ಞಾನ ಶಿಬಿರ, ಶರಣೆ ದಾನಮ್ಮ ಉತ್ಸವ, ನಂತರ ಜ್ಯೋತಿಯಾತ್ರೆ ಪ್ರಾರಂಭ
ಬಸವಕಲ್ಯಾಣ
ತಾಲೂಕಿನ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಏಪ್ರಿಲ್ 5 ಮತ್ತು 6 ರಂದು ಎರಡು ದಿನ ಶರಣ ಸಮಾಗಮ ಹಾಗೂ ಶರಣೆ ದಾನಮ್ಮ ಉತ್ಸವ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಎರಡೂ ದಿನವೂ ಶರಣ ಜ್ಞಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸತತವಾಗಿ 13ವರ್ಷದಿಂದ ಗುಡ್ಡಾಪೂರ ಶರಣೆ ದಾನಮ್ಮ ಜ್ಯೋತಿ ಹೊತ್ತಿಸಿಕೊಂಡು ಬೀದರ, ಕಲಬುರಗಿ, ಬಿಜಾಪುರ, ಸೋಲಾಪೂರ, ಸಾಂಗ್ಲಿ, ಕೊಲ್ಲಾಪುರ ಭಾಗದಲ್ಲಿ ಬಸವ ಧರ್ಮ ಪ್ರಚಾರ ಮಾಡಲಾಗುತ್ತಿತ್ತು. ಕಳೆದ ಎರಡು ವರ್ಷದಿಂದ ಐದು ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತ ಬಂದು ಕಲ್ಯಾಣ ಮಹಾಮನೆಯಲ್ಲಿ ಎರಡು ದಿನ ಶರಣ ಸಮಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಈಗ ಮೂರನೇ ವರ್ಷದ ಕಾರ್ಯಕ್ರಮ ಇದಾಗಿದ್ದು 14ನೇ ಶರಣೆ ದಾನಮ್ಮ ಜ್ಯೋತಿಯಾತ್ರೆಯನ್ನು ಮಾರ್ಚ್ ದಿನಾಂಕ 15 ರಂದು ಗುಡ್ಡಾಪೂರುದಿಂದ ಹಮ್ಮಿಕೊಳ್ಳಲಾಗುತ್ತಿದೆ.
ಭಕ್ತರು ಜ್ಯೋತಿ ತಮ್ಮ ಊರಿಗೆ ಬಂದಾಗ ಭಕ್ತಿ ಭಾವನೆಯಿಂದ ಸ್ವಾಗತಿಸಿ ತನು ಮನ ಧನದಿಂದ ಸೇವೆ ಸಲ್ಲಿಸಬೇಕೆಂದರಲ್ಲದೆ ಶರಣ ಸಮಾಗಮಕ್ಕೆ ನಾಡಿನ ಚಿಂತಕರು, ಸಾಹಿತಿಗಳು, ರಾಜಕೀಯ ಮುತ್ಸದ್ದಿಗಳು, ಅನುಭಾವಿಗಳು ಆಗಮಿಸಲಿದ್ದು ಬಸವ ಭಕ್ತರು, ದಾನಮ್ಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಪೂಜ್ಯರು ಕರೆ ಕೊಟ್ಟಿದ್ದಾರೆ.
