ವೀರಶೈವ ಧರ್ಮವಲ್ಲ, ಲಿಂಗಾಯತ ಬಸವಣ್ಣ ಸ್ಥಾಪಿಸಿದ ಧರ್ಮ: ಬಸವರಾಜ ಧನ್ನೂರ

ಬಸವ ಮೀಡಿಯಾ
ಬಸವ ಮೀಡಿಯಾ

‘ಜಾಗತಿಕ ಲಿಂಗಾಯತ ಮಹಾಸಭಾ ಸಮಾಜವನ್ನು ಛಿದ್ರಗೊಳಿಸುತ್ತಿಲ್ಲ. ಸಂಘಟಿಸುತ್ತಿದೆ.’

ಬೀದರ

“ವೀರಶೈವ ಒಂದು ಧರ್ಮ, ಆದರೆ ಲಿಂಗಾಯತ ರೂಢಿಯಿಂದ ಬಂದಿರುವ ಆಡು ಭಾಷೆಯ ಪದ ಮಾತ್ರ. ಅದು ಧರ್ಮದ ಯಾವುದೇ ಸ್ವರೂಪ ಪಡೆದುಕೊಳ್ಳಲು ಸಾಧ್ಯವಿಲ್ಲ,” ಎಂದು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಸೋಮವಾರ ತಾಳಿಕೋಟೆಯಲ್ಲಿ ಮಾಧ್ಯಮಗಳಿಗೆ ಹೇಳಿದ್ದರು.

ಈಗ ಶ್ರೀಗಳ ಹೇಳಿಕೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅವರಿಂದ ಪ್ರತಿಕ್ರಿಯೆ ಬಂದಿದೆ.

ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ ‘ಅವರು ವೀರಶೈವ ಸೈದ್ಧಾಂತಿಕ ಧರ್ಮ. ಲಿಂಗಾಯತ ಪದ ರೂಢಿಯಿಂದ ಬಂದದ್ದು. ಅದು ಧರ್ಮವಾಗಲು ಸಾಧ್ಯವೇ ಇಲ್ಲ’ ಎಂಬ ಶ್ರೀಗಳ ಹೇಳಿಕೆ ಯಾರೂ ಒಪ್ಪುವಂಥದ್ದಲ್ಲ ಎಂದು ತಿಳಿಸಿದ್ದಾರೆ.

ಲಿಂಗಾಯತ ಧರ್ಮ ಬಸವಣ್ಣನವರು ಸ್ಥಾಪಿಸಿದ ಧರ್ಮ. ವೀರಶೈವ ಧರ್ಮ ಅಲ್ಲ. ಲಿಂಗಾಯತ ಧರ್ಮದ 102 ಒಳ ಪಂಗಡಗಳಲ್ಲಿ ಅದು ಒಂದು. ಲಿಂಗಾಯತ ಧರ್ಮ ಉದಯವಾದದ್ದು 12ನೇ ಶತಮಾನದಲ್ಲಿ. ಇಷ್ಟಲಿಂಗ ಧರಿಸುವವರೆಲ್ಲ ಲಿಂಗಾಯತರು. ಬಸವಣ್ಣನವರು ಇಷ್ಟಲಿಂಗದ ಜನಕ. ಅವರಿಗಿಂತ ಮುಂಚೆ ಇಷ್ಟಲಿಂಗದ ಪರಿಕಲ್ಪನೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಒಂದೆಡೆ ಬಸವಣ್ಣನವರು ಸಮಾಜ ಒಗ್ಗೂಡಿಸುವ ಕೆಲಸ ಮಾಡಿದ್ದರು ಎಂದು ಹೇಳುತ್ತ, ಮತ್ತೊಂದೆಡೆ ಅವರು ಸ್ಥಾಪಿಸಿದ ಲಿಂಗಾಯತ ಧರ್ಮವು ಧರ್ಮವಲ್ಲ ಎಂಬುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಲಿಂಗಾಯತ ಧರ್ಮವೇ ಅಲ್ಲವೆಂದು ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆಯಿಂದ ಬಸವಾದಿ ಶರಣರಿಗೆ ಅಪಮಾನವಾಗಿದೆ.

ಏಕಕಾಲಕ್ಕೆ ಎರಡು ದೋಣಿಗಳಲ್ಲಿ ಸಂಚರಿಸಲು ಆಗುವುದಿಲ್ಲ. ಕಾರಣ, ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಲಿಂಗಾಯತ ಧರ್ಮವೇ ಅಲ್ಲ ಎನ್ನುವುದಾದರೆ ಶ್ರೀಗಳು ಬಸವಾದಿ ಶರಣರ ಬಗ್ಗೆ ಪ್ರಸ್ತಾಪಿಸದಿರುವುದೇ ಒಳ್ಳೆಯದು ಎಂದು ತಿಳಿಸಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ದೊರಕಿತ್ತು. ಆಗಲೇ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಸಿಗುತ್ತಿತ್ತು. ಆದರೆ, ಕೆಲವರು ಸಮಾಜದ ದಿಕ್ಕು ತಪ್ಪಿಸಿದ್ದರಿಂದಲೇ ಮಾನ್ಯತೆ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಲಿಂಗಾಯತ ಮಹಾಸಭೆ

ಸೋಮವಾರದ ಸುದ್ದಿಘೋಷ್ಠಿಯಲ್ಲಿ ರಂಭಾಪುರಿ ಶ್ರೀ ಜಾಗತಿಕ ಲಿಂಗಾಯತ ಮಹಾಸಭೆ ವೀರಶೈವ ಲಿಂಗಾಯತ ಎಂದು ಭೇದ ಹುಟ್ಟಿಸಿ ಧರ್ಮ ಒಡೆಯುವ ಮತ್ತು ಜನರ ಮನಸ್ಸುಗಳನ್ನು ಕಲುಷಿತಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.

ಅದಕ್ಕೆ ಪ್ರತಿಯಾಗಿ ಧನ್ನೂರ ಜಾಗತಿಕ ಲಿಂಗಾಯತ ಮಹಾಸಭಾ ಸಮಾಜವನ್ನು ಛಿದ್ರಗೊಳಿಸುತ್ತಿಲ್ಲ. ಸಂಘಟಿಸುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ದೊರೆತರೆ ಛಿದ್ರವಾಗಿರುವ ಲಿಂಗಾಯತದ ಎಲ್ಲ ಒಳಪಂಗಡಗಳೂ ಒಂದಾಗಲಿವೆ. ಸಮಾಜದಲ್ಲಿರುವ ಬಡವರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸಿಗಲಿದೆ. ಆದ್ದರಿಂದ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಯೇ ಮಹಾಸಭಾದ ಗುರಿಯಾಗಿದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಜಾಗತಿಕ ಲಿಂಗಾಯತ ಮಹಾಸಭಾ ಹುಟ್ಟಿಕೊಂಡು ಐದೇ ವರ್ಷಗಳಾದರೂ ಸಂಸ್ಥೆಗೆ ನಾಡಿನಾದ್ಯಂತ ಸಾವಿರಾರು ಜನ ಸ್ವಯಂ ಪ್ರೇರಣೆಯಿಂದ ಸದಸ್ಯರಾಗಿದ್ದಾರೆ. ಸಂಸ್ಥೆ ಲಿಂಗಾಯತ ಧರ್ಮದ ಸಂಘಟನೆ ಹಾಗೂ ಬಸವ ತತ್ವ ಪ್ರಚಾರಕ್ಕೆ ಹಗಲಿರುಳು ಶ್ರಮಿಸುತ್ತಿದೆ. ಶರಣರ ಆಶಯ ಹಾಗೂ ತತ್ವಗಳಿಗೆ ಚ್ಯುತಿ ತರುವ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.

ಸಂಸ್ಥೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಮಾಜದ ಎಲ್ಲರ ಬಗ್ಗೆಯೂ ಗೌರವ ಇದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಸಮುದಾಯದ ಒಳಿತಿಗಾಗಿ ಒಗ್ಗೂಡಿ ಕೆಲಸ ಮಾಡುವ ದಿಸೆಯಲ್ಲೇ ಹೆಜ್ಜೆ ಇಡುತ್ತಿದೆ. ಅದಾಗಿಯೂ ಜಾಗತಿಕ ಲಿಂಗಾಯತ ಮಹಾಸಭೆಯನ್ನು ತೆಗಳುತ್ತಿರುವುದು ಯಾವ ಕಾರಣಕ್ಕಾಗಿ ಎಂದು ಶ್ರೀಗಳನ್ನು ಕೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ

https://chat.whatsapp.com/IxxC2m7AXyW84KPf73t5iL

Share This Article
7 Comments
  • ಬಸವರಾಜ ಧನ್ನೂರ್ ರವರು ರಂಭಾಪುರಿ ಸ್ವಾಮಿಗೆ ತುಂಬಾ ಚನ್ನಾಗಿ ಉತ್ತರಿಸಿದ್ದಾರೆ ಧನ್ಯವಾದಗಳು 👌🏻👍🏻🙏🏻

    • ಬಸವರಾಜ್ ಧನ್ನೂರ್ ಅವರ ಅಭಿಪ್ರಾಯವನ್ನು ಎಲ್ಲಾ ಲಿಂಗಾಯತ ಧರ್ಮದ ಅನುಯಾಯಿಗಳು ಬೆಂಬಲಿಸುತ್ತೇವೆ.

    • ನಿಮ್ಮ ಅಭಿಪ್ರಾಯಕ್ಕೆ ಸರ್ವ ಲಿಂಗಾಯತ ಲೇಖಕರ, ವಿಚಾರವಾದಿಗಳ, ಬಸವಭಕ್ತರ ಬೆಂಬಲವಿದೆ.

      ಜೈ ಬಸವ, ಜೈಲಿಂಗಾಯತ….. ಜಾಗೋ ಲಿಂಗಾಯತ ಜಾಗೋ….. ವಕ್ತ ಆಯಾ ಹೈ ಜಾಗೋ… ಸಶಕ್ತ ಹೋನೆ ಕೆ ಲಿಯೇ ಜಾಗೋ….

  • ಪೂಜ್ಯ ರಂಬಾಪುರಿ ಶ್ರೀಗಳೆ ಅಷ್ಟೆ ಏಕೆ ಪಂಚಪೀಠಗಳ ಜಗತ್ ಗುರುಗಳೇ ಲಿಂಗದಲ್ಲಿ ಉದ್ಭವಿಸಿದ ರೇಣುಕಾಚಾರ್ಯರು ನಿಮ್ಮ ಧರ್ಮ ಸಂಸ್ಥಾಪಕರಾಗಿದ್ದ ಮೇಲೆ ನಿಮ್ಮ ವೀರಶೈವ ಧರ್ಮವನ್ನು ಮಾನ್ಯತೆ ಪಡೆಯಲು ನೀವು ಹೋರಾಟ ಮಾಡಿ. ಅದರಲ್ಲಿ ಲಿಂಗಾಯತ ಸೇರಿಸ್ಲಿಕ್ಕೆ ಹೋಗಬೇಡಿ ಜನಸಾಮಾನ್ಯರಿಗೆ ಗೊಂದಲಗೊಳಿಸಿದರು ತಾವು ಸ್ಪಷ್ಟತೆಯನ್ನು ಹೊಂದಿ
    ವೀರಶೈವ ಲಿಂಗಾಯತ ಎಂದು ಸೇರಿಸಲಿಕ್ಕೆ ಹೋಗದಿರಿ, ಈಗಾಗಲೇ ಸುಪ್ರೀಂ ಕೋರ್ಟ್ ಚೇಮರಿ ಹಾಕಿ ಕಳಿಸಿದ್ದು ಸಾಕಾಗಿಲ್ಲ ಎಂದು ಕಾಣಿಸುತ್ತದೆ. ಇನ್ನೊಮ್ಮೆ ಮತ್ತೊಮ್ಮೆ ಪ್ರಯತ್ನಿಸಿ, ನಮ್ಮದೇನು ಅಭ್ಯಂತರವಿಲ್ಲ.
    ಲಿಂಗಾಯತ ಧರ್ಮ ಕನ್ನಡ ನಾಡಿನಲ್ಲಿ ಹುಟ್ಟಿದ ಸ್ವತಂತ್ರ ಧರ್ಮವಾಗಿದ್ದು ಬಸವಣ್ಣನವರು ಸಂಸ್ಥಾಪಕರಾಗಿದ್ದು ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರದ ಮಾನ್ಯತೆ ದೊರಕುವುದರಲ್ಲಿ ಎರಡು ಮಾತಿಲ್ಲ….
    ನಿಮ್ಮ ವೀರಶೈವ ಲಿಂಗಾಯತ ಮಹಾಸಭೆಯನ್ನು ಈ ಕೂಡಲೇ ವೀರಶೈವ ಮಹಾಸಭಾ ಎಂದು ಬದಲಾಯಿಸಿಕೊಳ್ಳಿ ನಮಗೆ ಯಾವ ತಕರಾರು ಇಲ್ಲ.
    ಲಿಂಗಾಯತ ಸಂಘಟನೆಗಳ ಮತ್ತು ಸಂಘಟಕರ ವಿದ್ವಾಂಸರ ಹೆಸರುಗಳಿಗೆ ಸುಖ ಸುಮ್ಮನೆ ಕಪ್ಪು ಮಸಿ ಒರೆಸುವ ಕೆಲಸ ಮಾಡದಿರಿ.
    ಬಸವರಾಜ್ ಧನ್ನೂರ್ ಅಣ್ಣನವರು ತಕ್ಕ ಉತ್ತರ ಕೊಟ್ಟಿದ್ದಾರೆ ನಾವೆಲ್ಲ ನಿಜವಾಚರಣೆ ಲಿಂಗಾಯಿತರು ಅವರೊಂದಿಗೆ ಇದ್ದೇವೆ.

    • ಪೂಜ್ಯ ರಂಬಾಪುರಿ ಶ್ರೀಗಳೆ ಅಷ್ಟೆ ಏಕೆ ಪಂಚಪೀಠಗಳ ಜಗತ್ ಗುರುಗಳೇ ಲಿಂಗದಲ್ಲಿ ಉದ್ಭವಿಸಿದ ರೇಣುಕಾಚಾರ್ಯರು ನಿಮ್ಮ ಧರ್ಮ ಸಂಸ್ಥಾಪಕರಾಗಿದ್ದ ಮೇಲೆ ನಿಮ್ಮ ವೀರಶೈವ ಧರ್ಮವನ್ನು ಮಾನ್ಯತೆ ಪಡೆಯಲು ನೀವು ಹೋರಾಟ ಮಾಡಿ. ಅದರಲ್ಲಿ ಲಿಂಗಾಯತ ಸೇರಿಸ್ಲಿಕ್ಕೆ ಹೋಗಬೇಡಿ ಜನಸಾಮಾನ್ಯರಿಗೆ ಗೊಂದಲಗೊಳಿಸಲಿಕ್ಕೆ ಹೋಗಬೇಡಿ ತಾವು ಮೊದಲು ಸ್ಪಷ್ಟತೆಯನ್ನು ಹೊಂದಿ ನಿಮ್ಮ ಹತ್ತಿರ ಎಲ್ಲ ದಾಖಲೆಗಳು ಇವೆ ಅಂದ ಮೇಲೆ ನೀವೇಕೆ ನಿಮ್ಮ ಧರ್ಮದಲ್ಲಿ
      ವೀರಶೈವ ಲಿಂಗಾಯತ ಎಂದು ಸೇರಿಸಲಿಕ್ಕೆ ಹೋಗುತ್ತಿದ್ದೀರಿ , ಈಗಾಗಲೇ ಸುಪ್ರೀಂ ಕೋರ್ಟ್ ಛೀ ಮಾರಿ ಹಾಕಿ ಕಳಿಸಿದ್ದು ಸಾಕಾಗಿಲ್ಲ ಎಂದು ಕಾಣಿಸುತ್ತದೆ. ಇನ್ನೊಮ್ಮೆ ಮತ್ತೊಮ್ಮೆ ಪ್ರಯತ್ನಿಸಿ, ನಮ್ಮದೇನು ಅಭ್ಯಂತರವಿಲ್ಲ.
      ಲಿಂಗಾಯತ ಧರ್ಮ ಕನ್ನಡ ನಾಡಿನಲ್ಲಿ ಹುಟ್ಟಿದ ಸ್ವತಂತ್ರ ಧರ್ಮವಾಗಿದ್ದು ಬಸವಣ್ಣನವರು ಸಂಸ್ಥಾಪಕರಾಗಿದ್ದು ಒಂದು ಧರ್ಮವು ಹೊಂದಿರಬೇಕಾದ ಸಂವಿಧಾನಬದ್ಧವಾದ ಎಲ್ಲಾ ರೀತಿಯ ಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರದ ಮಾನ್ಯತೆ ದೊರಕುವುದರಲ್ಲಿ ಎರಡು ಮಾತಿಲ್ಲ….
      ನಿಮ್ಮ ವೀರಶೈವ ಲಿಂಗಾಯತ ಮಹಾಸಭೆಯನ್ನು ಈ ಕೂಡಲೇ ವೀರಶೈವ ಮಹಾಸಭಾ ಎಂದು ಬದಲಾಯಿಸಿಕೊಳ್ಳಿ ನಮಗೆ ಯಾವ ತಕರಾರು ಇಲ್ಲ.
      ಲಿಂಗಾಯತ ಸಂಘಟನೆಗಳ ಮತ್ತು ಸಂಘಟಕರ ವಿದ್ವಾಂಸರ ಹೆಸರುಗಳಿಗೆ ಸುಖ ಸುಮ್ಮನೆ ಕಪ್ಪು ಮಸಿ ಒರೆಸುವ ಕೆಲಸ ಮಾಡದಿರಿ.
      ಬಸವರಾಜ್ ಧನ್ನೂರ್ ಅಣ್ಣನವರು ತಕ್ಕ ಉತ್ತರ ಕೊಟ್ಟಿದ್ದಾರೆ ನಾವೆಲ್ಲ ನಿಜವಾಚರಣೆ ಲಿಂಗಾಯಿತರು ಅವರೊಂದಿಗೆ ಇದ್ದೇವೆ.

  • ವೀರಶೈವಕ್ಕೆ ಕೇವಲ ಒಂದು ನೂರು ವರ್ಷದ ಇತಿಹಾಸವಿದೆ ಎಂದರೆ. ಏಕೆ ಸ್ವತಂತ್ರ ಧರ್ಮವಾಗಿಲ್ಲ? ಅದರ ಗುರು, ಲಾಂಛನ, ಸಂಹಿತೆ ಇತ್ಯಾದಿ ಇರಬೇಕಲ್ಲವೇ? ಅದರ ಕರ್ತು ಇಲ್ಲವೆ? ಏಕೆ ಸಂವಿಧಾನಿಕ ಮಾನ್ಯತೆ ಪಡೆದಿಲ್ಲ? ಬಸವರಾಜ ಧನ್ನೂರಾವರ ಹೇಳಿಗೆ ಸೂಕ್ತವಾಗಿದೆ.

Leave a Reply

Your email address will not be published. Required fields are marked *