ರಾಷ್ಟ್ರೀಯ ಬಸವ ದಳದಿಂದ ಇಫ್ತಾರ್ ಕೂಟ, ಸೌಹಾರ್ದತೆಯ ಸಂದೇಶ

ಬಸವ ಮೀಡಿಯಾ
ಬಸವ ಮೀಡಿಯಾ

“ಭಾರತದಲ್ಲಿ ಲಿಂಗಾಯತ, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಮತ್ತಿತರ ಧರ್ಮದವರು ಒಂದಾಗಿ ಬದುಕಬೇಕು”

ಬೀದರ

ರಂಜಾನ್ ಹಬ್ಬದ ಪ್ರಯುಕ್ತ, ರಾಷ್ಟ್ರೀಯ ಬಸವ ದಳದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವನ್ನು ಶುಕ್ರವಾರ ಸಂಜೆ ಏರ್ಪಡಿಸಲಾಗಿತ್ತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಸ್ಲಾಂ ಬಾಂಧವರಿಗೆ ಹಣ್ಣು- ಹಂಪಲು, ಉಪಹಾರ ನೀಡುವಂತ ಕಾರ್ಯಕ್ರಮ, ಈ ಬಾರಿ ಬಸವ ಮಂಟಪದ ಹತ್ತಿರ ಇರುವ ರಾಷ್ಟ್ರೀಯ ಬಸವದಳದ ಜಿಲ್ಲಾ ಉಪಾಧ್ಯಕ್ಷ ಶರಣ ಶಿವಶರಣಪ್ಪ ಪಾಟೀಲ ಅವರ ಮನೆಯ ಮುಂಭಾಗದಲ್ಲಿ ನಡೆಯಿತು.

ಭಾರತ ದೇಶ ಜಾತ್ಯಾತೀತ ರಾಷ್ಟ್ರ. ಇಲ್ಲಿ ಲಿಂಗಾಯತ, ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಮತ್ತಿತರ ಧರ್ಮದವರು ಒಂದಾಗಿ ಬದುಕಬೇಕು. ಮುಸ್ಲಿಂ ಬಾಂಧವರು ಆಚರಿಸುತ್ತಿರುವ ರಂಜಾನ್ ಮಾಸದ ಹಬ್ಬಕ್ಕೆ ನಾವೆಲ್ಲ ಶುಭ ಕೋರುತ್ತೇವೆ, ಸೌಹಾರ್ದತೆ ಸಾರುತ್ತೇವೆ ಎಂದು ಸಾನಿಧ್ಯ ವಹಿಸಿ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿದರು.

ರಾ.ಬ. ದಳದ ಪ್ರಮುಖರಾದ ಶಿವರಾಜ ಪಾಟೀಲ ಅತಿವಾಳ, ಶಿವಶರಣಪ್ಪ ಪಾಟೀಲ, ಗಣಪತಿ ಬಿರಾದಾರ, ಶ್ರೀನಾಥ ಕೋರೆ, ರವಿಕಾಂತ ಬಿರಾದಾರ, ವಿಶ್ವನಾಥ ಪಾಟೀಲ, ಮಲ್ಲಿಕಾರ್ಜುನ ಶಹಾಪುರ, ಭರತ್ ಪಾಟೀಲ, ಭೀಮರಾವ ಪೊಲೀಸಪಾಟೀಲ ಮತ್ತು ಮುಸ್ಲಿಂ ಸಮಾಜ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಉಪಹಾರ ಸೇವಿಸಿದರು.

ಬಸವ ಪ್ರಾರ್ಥನೆ ಸಹ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/E98vBDEsxjs5GHomGeoNMz

Share This Article
1 Comment
  • ಒಳ್ಳೆಯ ಕೆಲಸ ಮಾಡಿದ್ದೀರಾ ಶರಣರೆ, ಸುಡುತ್ತಿರುವ ಸಮಾಜಕ್ಕೆ ಬಸವಣ್ಣ ತಂಗಾಳಿಯಾಗಿ ಬರಲಿ. ಎಲ್ಲರೂ ನೆಮ್ಮದಿಯಿಂದ ಬಾಳಲಿ

Leave a Reply

Your email address will not be published. Required fields are marked *