ಗದಗ
ಜಾಗತಿಕ ಲಿಂಗಾಯತ ಮಹಾಸಭಾ, ಗದಗ ಜಿಲ್ಲಾ ಹಾಗೂ ತಾಲೂಕು ಘಟಕಗಳ ಆಶ್ರಯದಲ್ಲಿ ಬುಧವಾರ ಸಾಯಂಕಾಲ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಚಿಂತನ ಕಾರ್ಯಕ್ರಮ ನಡೆಯಿತು.
“ಶರಣರು ವೇದಗಳನ್ನು ಯಾಕೆ ನಿರಾಕರಿಸಿದರು” ಎಂಬ ವಿಷಯದ ಕುರಿತು ಅನುಭಾವವನ್ನು ಶರಣ ಚಿಂತಕ ಅಶೋಕ ಬರಗುಂಡಿ ಅವರು ನೀಡಿದರು.
ವೇದಗಳು ಭಿನ್ನತೆಯನ್ನು ಭೋದಿಸುತ್ತವೆ. ಅವು ಮನುಷ್ಯ ಮನುಷ್ಯರಲ್ಲಿ ದ್ವೇಷಕ್ಕೆ ದಾರಿ ಮಾಡಿಕೊಡುತ್ತವೆ. ದೇವರ ಕುರಿತು ಜನರಲ್ಲಿ ಇಲ್ಲದ ಭ್ರಾಂತಿಗಳನ್ನು ಹುಟ್ಟು ಹಾಕುತ್ತವೆ. ವೇದಗಳು ಸೂತಕಗಳ ಸಾಗರವಾಗಿವೆ. ಉತ್ತಮರೆಂಬ ಭ್ರಾಂತಿಯಲ್ಲಿ ದುಡಿಯದೇ ಹೊಟ್ಟೆ ಹೊರೆಯಲು ಉಪದೇಶ ನೀಡುತ್ತವೆ. ಕರ್ಮಸಿದ್ದಾಂತವೇ ವೇದಗಳ ಮೂಲಾಧಾರವಾಗಿದೆ. ಅಸಮಾನತೆಯೇ ಇವುಗಳ ಮುಖ್ಯ ಗುರಿಯಾಗಿದೆ. ಅದಕ್ಕಾಗಿ ಬಸವಾದಿ ಶರಣರು ವೇದಗಳನ್ನು ಸಂಪೂರ್ಣ ಅಲ್ಲಗಳೆಯುತ್ತಾರೆ ಎಂದು ಹೇಳಿದರು.

ಶರಣರ ವಚನ ವಿಚಾರಧಾರೆ ನೋಡುವುದಾದರೆ, ವಚನಗಳು ಅಭಿನ್ನತೆಯನ್ನು ಭೋದಿಸುತ್ತವೆ. ವಚನಗಳು ಮನುಷ್ಯ ಮನುಷ್ಯರನ್ನಷ್ಟೇ ಅಲ್ಲದೆ ಸಕಲ ಜೀವಿಗಳನ್ನು ಪ್ರೀತಿಸಲು ಕಲಿಸುತ್ತವೆ.
ದೇವರ ಕುರಿತು ಭ್ರಾಂತಿಗೆ ಎಡೆಗೊಡದೆ “ತನ್ನ ತಾನಾರೆಂದರಿದೊಡೆ ತಾನೇ ದೇವ ನೋಡಾ” ಎಂದು ತನ್ನಲ್ಲಿರುವ ದೈವತ್ವವನ್ನು ತೋರಿಸುತ್ತವೆ. ಶರಣರು “ಲಿಂಗಧಾರಿ ಸದಾಶುಚಿ” ಎನ್ನುತ್ತಾ ಸಕಲ ಸೂತಕಗಳನ್ನು ಅಲ್ಲಗಳೆಯುತ್ತಾರೆ. ದುಡಿಯದೇ ಉಣ್ಣುವುದನ್ನು ತಿರಸ್ಕರಿಸಿದ ಶರಣರು “ಕಾಯಕವೇ ಕೈಲಾಸ”ವೆಂದು ಹೇಳಿ ಗುರುವಾದಡೂ ಕಾಯಕದೊಳಗು, ಲಿಂಗವಾದಡೂ ಕಾಯಕದೊಳಗು, ಜಂಗಮವಾದಡೂ ಕಾಯಕದೊಳಗು ಎನ್ನುತ್ತಾ ಸರ್ವರೂ ಕಾಯಕ ಮಾಡಿಯೇ ಉಣ್ಣಬೇಕೆಂದು ಹೇಳುತ್ತಾ, ಕಾಯಕದಿಂದಲೇ ಜೀವನ್ಮುಕ್ತಿ, ಸ್ವತಃ ದೇವರೇ ಆದರೂ ಕಾಯಕವಿಲ್ಲದೆ ಇರಲಾಗದೆಂದು ಖಡಾಖಂಡಿತ ತಿಳಿಸುತ್ತಾರೆ.
ಕರ್ಮಸಿದ್ಧಾಂತವನ್ನು ಅಲ್ಲಗಳೆದು ಕಾಯಕ ಸಿದ್ಧಾಂತವನ್ನು ಎತ್ತಿಹಿಡಿದು, ಹುಟ್ಟಿನಿಂದ ಶ್ರೇಷ್ಠ ಕನಿಷ್ಠ ಎಂಬ ಭ್ರಾಂತಿಗೆ ಒಳಗಾಗದೆ ಸರ್ವಸಮಾನತೆಯನ್ನು ಸಾಧಿಸಲು ಶರಣರು ತಿಳಿಸುತ್ತಾರೆ. ಎಲ್ಲಾ ಬಗೆಯ ಅಸಮಾನತೆಗಳನ್ನು ಅಲ್ಲಗಳೆದು ಕರುಣೆ ವಿನಯ ಸಮತೆಗಳೇ ಸರ್ವಶ್ರೇಷ್ಠವೆಂದು ಸಾರಿದ ಶರಣರ ವಚನಗಳು ಸಾರ್ವಕಾಲಿಕ ಸತ್ಯದ ಮಾರ್ಗ ವನ್ನು ತೋರಬಲ್ಲವು ಎಂದು ಬರಗುಂಡಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶೇಖಣ್ಣ ಕವಳಿಕಾಯಿ, ಗೌರಕ್ಕ ಬಡಿಗಣ್ಣವರ, ಶ್ರೀದೇವಿ ಶೆಟ್ಟರ್, ಎ.ವೈ. ನವಲಗುಂದ, ಶಿವಣ್ಣ ಮುಗದ, ಎಸ್.ಎಸ್. ಕಳಸಾಪುರಶೆಟ್ರ, ನಿರ್ಮಲ ಪಾಟೀಲ, ಜಯಶ್ರೀ ಹಳ್ಳಿಕೇರಿ, ಸುಜಾತ ವಾರದ, ಮಂಜುಳಾ ಹಾಸಿಲ್ಕರ ಮತ್ತಿತರರು ಉಪಸ್ಥಿತರಿದ್ದರು.
I am interested in unity only
No comments please
👏👍
ವೇದಗಳು ಅರಮನೆ,ಗುರುಮನೆಗಳನ್ನು ಸೃಷ್ಟಿ ಮಾಡಿ,ಅವರಿಗಾಗಿ ಐದು ದುಡಿಯುವ ದುಡಿಯುವ ವರ್ಗಗಳನ್ನು ಸೃಷ್ಟಿಸಿ , ಮತ್ತು ಗುರುಮನ್ನು ಸೇವೆಗಳನ್ನು ಮಾಡಿಸಿಕೊಳ್ಳುತ್ತಾರೆ. ಅವು ೧) ರಾಜಭಟ್ಟರು,೨)ಪುರೋಹಿತರು(ಕೇವಲ ಗುರುಗಳ ಸೇವೆಗಾಗಿ ಎಲ್ಲ ಪೂಜಾ ಪರಿಕರಗಳನ್ನು ತರುವವರು)೩) ಅವರಿಗೆ ಬೇಕಾಗುವ ನಿತ್ಯ ಸಾಮಗ್ರಿ ಮತ್ತು ಯುದ್ಧ ಪರೀಕರ್ ಸರಬರಾಜು ಮಾಡುವವರು ೪) ಅಡಿಗೆ ಸೆವಕರು, ಮನೆ ಕೆಲಸದವರು, ಇತ್ಯಾದಿ,.೫) ಅಡವಿಯೆಲ್ಲಿನ ಹಣ್ಣು, ತರಕಾರಿ, ಬಾಳೆಎಲೆ,ತೆಂಗು, ಅಡಿಕೆ, ಕಾಳು, ಇತ್ಯಾದಿ, ಪೂರೈಸುವವರು .
ವರ್ಗಭೇದ, ವರ್ಣಭೇದ, ಜಾತಿಭೇದ, ಲಿಂಗ ಭೇದ ತಾರತಮ್ಯಗಳನ್ನು ಮಾಡುತ್ತದೆ.
ಅವರು ಸ್ವಅರ್ಜನೆಗೆ ಮಹತ್ವ ಬಿಡುವದಿಲ್ಲ. ಪರಾವಲಂಬಿ ಜೀವನಕ್ಕೆ ಒತ್ತು ಕೊಡುತ್ತಾರೆ. ಶಿಕ್ಷಣಕ್ಕೆ ಸಾರ್ವಜನಿಕ ಶಿಕ್ಷಣ ಇಲ್ಲಾ. ಕೇವಲ ಅರಮನೆ,ಗುರುಮನೆಯವರಿಗೆ ಮಾತ್ರ ಶಿಕ್ಷಣ. ಉಳಿದವರು ಕೇವಲ ಅವರ ಸೇವಕರು ವರ್ಗ ಮಾತ್ರ. ಆದರೆ ನಮ್ಮ ಶರಣು ಪರಂಪರೆಯಲ್ಲಿ, ಸಮಾನತೆ, ಸ್ತ್ರೀ ಸಮಾನತೆ, ಆರ್ಥಿಕ ಸಮಾನತೆ, ವರ್ಣಭೇದ, ಲಿಂಗಭೇದ, ಜಾತಿ ಭೇದಗಳನಲ್ಲ ಅಲ್ಲಗಳೆದಿದ್ದಾರೆ. ಕಾಯಕಕ್ಕೆ ಮಹತ್ವ ಬಾಲು ಬಂಗಾರ ವಾಗಲು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ. ಏಕದೇವೋಪಾಸನೆಯ. ಮಾನವರು ಮತ್ತು ಸಕಲ ಜೀವಿಗಳೆಲ್ಲರು ದೇವನ್ ಮಕ್ಕಳು ಎಂಬ ಪರಿಕಲ್ಪನೆ.
ಉತ್ತಮ ನಡೆ,ನುಡಿ, ಆಚರಣೆ ನಿಜಕ್ಕೂ ಪ್ರಶಂಸನೀಯ.
All Lingayat Sub castes should fight together, so as to gain political access, job reservations keeping aside self ego. It all depends on our leaders, Swamijis etc. Hope this will come true only after joining and believing in Vachanas of 12th century.
ತಾವು ಹಿಂದುಗಳಲ್ಲ ಎಂದು ತಿಳಿಯಲು. ವೇದಗಳು ಭಿನ್ನತೆ ಬೋಧಿಸುತ್ತವೆ.ವಚನಗಳು ಅಭಿನ್ನತೆ ಬೋಧಿಸುತ್ತವೆ-ಎಂಬ ಈ ಅರಿವು ಲಿಂಗಾಯತರಿಗೆ ಮುಖ್ಯ.
ವೇದವನ್ನೇ ತಿಳಿಯದವರ ಮಾತು
ಹಾಗೆ ಅಂದರೆ ?
ಲಿಂಗಧಾರಿ ಸದಾಶುಚಿ.ಎಂಬುದನ್ನು ಅರಿತುಕೊಂಡು ಲಿಂಗಾಯತರು ಮಾಡಿ ಮೈಲಿಗೆ ಎಂಬ ಅಸ್ಪೃಶ್ಯತೆ ಎಂಬ ಅವೈಜ್ಞಾನಿಕ ವೈದಿಕ ಆಚರಣೆ ಬಿಡಬೇಕು.
ವೇದಗಳ ಮಲಿನತೆಯನ್ನು ತೊಡೆಯಲು ಗುರು ಬಸವಲಿಂಗರು ಲಿಂಗಾಯತರ ಕಾಯಕ್ಕೆ ಅಷ್ಟಾವರಣ, ಮನಸ್ಸಿಗೆ ಪಂಚಾಚಾರ ಮತ್ತು ಪ್ರಾಣಕ್ಕೆ ಷಟ್ಸ್ಥಲ ಮಾರ್ಗ ನೀಡಿದ್ದಾರೆ. ಲಿಂಗಾಯತವು ವೇದೋಪನಿಷತ್ತುಗಳನ್ನು ತಿರಸ್ಕರಿಸಿದ ಧರ್ಮ.
ಶ್ರೀ ಅಶ್ಶೋಕ ಬರಗುಂಡಿಯವರು ಸರ್ವ ಕಾಲಿಕ ಚಿರಂತನ ಸತ್ಯ ವನ್ನು ಪ್ರಸ್ತುತ ಪಡಿಸಿದ್ದಾರೆ. ಅವರಿಗೆ ವಿನಯಪೂರ್ವಕ ವಂದನೆಗಳು. ಕೆಟ್ಟ ಶಕ್ತಿಗಳ ಪ್ರಾಬಲ್ಯ ವನ್ನು ಬಸವಣ್ಣ ನವರು ತಮ್ಮ ಇರುವಿಕೆಯಿಂದ ದೂರ ಸರಿಸಲು ಕಾಯಕ ತತ್ವವನ್ನು ಆಚರಿಸಿ ಆದರ್ಶ ಪುರುಷರಾದರು. ಅವರ ಚಿಂತನಗಳನ್ನು ಅಶೋಕರು ಮನಸ್ಸಿಗೆ ಮುಟ್ಟುವಂತೆ ತಿಳಿಸಿದ್ದಾರೆ.
ವೇದಕ್ಕೆ ಒರೆಯಕಟ್ಟುವೆರೆಂದ ಶರಣರು, ತಾರತಮ್ಯವನ್ನು ಅರಿತೇ ಈ ರೀತಿಯಾಗಿ ತಮ್ಮ ವಚನಗಳಲ್ಲಿ ನುಡಿದಿದ್ದಾರೆ.ಜೖ ಬಸವೇಶ.
ನಾನೂ ಒಂದೂವರೆ ವರ್ಷದಿಂದ ನಾವು ಲಿಂಗಾಯತರು ಹಿಂದೂಗಳಲ್ಲ, ನಮ್ಮ ಧರ್ಮ ಬೇರೆ, ಹಿಂದೂ ಧರ್ಮ ಬೇರೆ ಎಂದು ಸಾರಿ, ಸಾರಿ ನನ್ನ ಜನಗಳಿಗೆ ಹೇಳುತ್ತಾ ಬಂದಿದ್ದೇನೆ. ಈವರೆಗೆ ಒಬ್ಬರನ್ನು ಸುಧಾರಿಸಲಾಗಿಲ್ಲ. ತಲೆಯಲ್ಲಿ ಬ್ರಾಹ್ಮಣರ ಮೌಢ್ಯತೆಯ ಗೊಬ್ಬರ ಸರಿಯಾಗಿ ಕುಳಿತು ಬಿಟ್ಟಿದೆ.
ಇವತ್ತು ಅಂದರೆ ಒಂದು ಏಪ್ರಿಲ್ 2025 ರಂದು ನನ್ನಿಬ್ಬರು ಗೆಳೆಯರು ಮಂತ್ರಾಲಯಕ್ಕೆ ಹೋಗಿದ್ದಾರೆ.
ಏನು ಮಾಡುವುದು ಇಂತಹ ಲಿಂಗಾಯತರಿಗೆ..?
ಅಶೋಕ್ ಬರಗುಂಡಿ
. ಅದ್ಭುತವಾಗಿ ಬುದ್ಧಿ ಚಣಕ್ಷತೆಯಿಂದ ಪದಗಳ ದೃಷ್ಟಿಕೋನದಲ್ಲಿ ಮನ ಮನಸ್ಸುಗಳನ್ನು ಒಡೆಯುವ ಹುಳಿ ಹಿಂಡುವ ಕೆಲಸವನ್ನು ಪೂರ್ವಗ್ರಹ ಪೀಡಿತರಾಗಿ ಲೇಖನದ ಮೂಲಕ ಅರಿತವಾಗಿ ಬರೆದು ಸೈನಿಸಿಕೊಂಡಿದ್ದೀರಿ ಇದು ನಿಮ್ಮ ಮೆಚ್ಚಿಗೆ ಅಷ್ಟೇ ಬೇರೆಯವರಿಗೆಲ್ಲ