ಸೆಪ್ಟೆಂಬರ್ ಅಭಿಯಾನ ಪ್ರತಿಯೊಬ್ಬ ಬಸವ ಅನುಯಾಯಿಯ ವೈಯಕ್ತಿಕ ಮತ್ತು ಸಾಮೂಹಿಕ ಚಳುವಳಿಯಾಗಬೇಕು.
ಬೆಂಗಳೂರು
ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನವನ್ನು ಮನೆ-ಮನಗಳಿಗೆ ಮುಟ್ಟಿಸಲು ಬಸವ ರೇಡಿಯೋ ಸರಣಿ ಚರ್ಚೆಗಳನ್ನು ನಡೆಸುತ್ತಿದೆ.
ಅಭಿಯಾನದ ಪೂರ್ವಸಿದ್ಧತೆ, ಚಟುವಟಿಕೆಗಳು, ಒಟ್ಟಾರೆ ರೂಪುರೇಷೆಯ ಮೇಲೆ ಬಸವ ತತ್ವದ ಸ್ವಾಮೀಜಿಗಳ, ಹೋರಾಟಗಾರರ, ಚಿಂತಕರ ಮತ್ತು ಸಂಘಟನೆಗಳ ಕಾರ್ಯಕರ್ತರ ಅಭಿಪ್ರಾಯವನ್ನು ಮುನ್ನೆಲೆಗೆ ತರುವ ಪ್ರಯತ್ನವಿದು.
ಇತ್ತೀಚಿನ ವರ್ಷಗಳಲ್ಲಿ ನಾಡಿನಲ್ಲಿ ಬಸವ ಚಳುವಳಿ ಮತ್ತು ಪಟ್ಟಭದ್ರ ಶಕ್ತಿಗಳಿಂದ ಅದಕ್ಕೆ ವಿರೋಧ ಕೂಡ ತೀವ್ರವಾಗುತ್ತಿದೆ. ಈ ಹಿನ್ನಲೆಯಲ್ಲಿ
ಎಲ್ಲಾ ಬಸವ ಸಂಘಟನೆಗಳೂ ಸೇರಿ ಅಭಿಯಾನವನ್ನು ಒಂದು ತಿಂಗಳು ಪೂರ್ತಿ ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಸಲು ಮುಂದಾಗಿರುವುದು ಮಹತ್ವದ ಬೆಳವಣಿಗೆ.
ಬಸವಾದಿ ಶರಣರ ವಿಶಿಷ್ಟ ತತ್ವ-ಸಿದ್ದಾಂತ, ಇತಿಹಾಸ, ಪರಂಪರೆ, ಅಧ್ಯಾತ್ಮ, ವೈಚಾರಿಕತೆ, ಸಾಮಾಜಿಕ ಕಳಕಳಿಗಳನ್ನು ಸಮಾಜದಲ್ಲಿ ಹರಡಲು ಇದೊಂದು ಅಪರೂಪದ ಅವಕಾಶ.
ಆದರೆ ಪ್ರತಿಯೊಬ್ಬರೂ ಹೆಗಲು ಕೊಟ್ಟರೆ ಮಾತ್ರ ಅಭಿಯಾನ ಗುರಿ ಮುಟ್ಟಲು ಸಾಧ್ಯ. ಇದು ಕೆಲವು ಸಂಘಟನೆಗಳಿಗೆ ಸೀಮಿತವಾದ ಕಾರ್ಯಕ್ರಮವಾಗದೆ ಎಲ್ಲಾ ಬಸವ ಅನುಯಾಯಿಗಳ ವೈಯಕ್ತಿಕ ಮತ್ತು ಸಾಮೂಹಿಕ ಚಳುವಳಿಯಾಗಬೇಕು.
900 ವರ್ಷಗಳಿಂದ ಬಸವ ತತ್ವವನ್ನು ಹುದುಗಿಸಿಬಿಡುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನವನ್ನು ಸಂಪೂರ್ಣವಾಗಿ ನಿಲ್ಲಿಸಿ, ಮತ್ತಾರು ಇಂತಹ ಆಲೋಚನೆಗಳನ್ನೂ ಮಾಡದಂತೆ ನೋಡಿಕೊಳ್ಳುವ ಅವಕಾಶ, ಸಾಮರ್ಥ್ಯ, ಜವಾಬ್ದಾರಿ ನಮ್ಮ ಪೀಳಿಗೆಗಿದೆ.
ಇಂದು ರಾತ್ರಿ ಬಸವ ರೇಡಿಯೋ ಚರ್ಚೆ:
ವಿಷಯ: ಬಸವ ಸಂಸ್ಕೃತಿ ಅಭಿಯಾನ
ಸೆಪ್ಟೆಂಬರ್ ಅಭಿಯಾನವನ್ನು ಮನೆ-ಮನ ಮುಟ್ಟಿಸಲು ನಮ್ಮ ಸಲಹೆ
ಇಂದಿನ ಅತಿಥಿಗಳು
೧) ಶ್ರೀಕಾಂತ ಸ್ವಾಮಿ, ಬೀದರ್
ಕರ್ನಾಟಕ ರಾಜ್ಯ ಸಂಚಾಲಕರು,
ಲಿಂಗಾಯತ ಸಮನ್ವಯ ಸಮಿತಿ, ಬೀದರ
೨) ಸುನೀಲ ಎಸ್. ಸಾಣಿಕೊಪ್ಪ
ನ್ಯಾಯವಾದಿ, ಲೇಖಕ, ಕೃಷಿಕರು,
ಬೆಳಗಾವಿ
ದಿನಾಂಕ : ಎಪ್ರಿಲ್ 06, 2025
ಸಮಯ : ರಾತ್ರಿ 8:30 – 9:30
ಪ್ರಾಸ್ತಾವಿಕ ಹಾಗೂ ಸಮಾರೋಪ ನುಡಿ,
ಡಾ. ಹೆಚ್. ಎಂ. ಸೋಮಶೇಖರಪ್ಪ.
ಕಾರ್ಯಕ್ರಮ ನಿರ್ವಹಣೆ: ಕುಮಾರಣ್ಣ ಪಾಟೀಲ.
ಶರಣು ಸಮರ್ಪಣೆ : ಜಿ. ಎಮ್. ನಾಗರತ್ನ
ದಯವಿಟ್ಟು ಗಮನಿಸಿ:
ಅತಿಥಿಗಳು 20+ 20 ನಿಮಿಷ ಮಾತನಾಡಲಿದ್ದಾರೆ.
ನಂತರ 15 ನಿಮಿಷ ಮುಕ್ತ ವೇದಿಕೆ
(ಆಸಕ್ತರಿಗೆ ಮಾತನಾಡಲು ಅವಕಾಶ)
ಯಾವುದೇ ವ್ಯಕ್ತಿಯ ಅಥವಾ ಸಂಘಟನೆಯ ಟೀಕೆ,
ನಿಂದನೆಗೆ ಅವಕಾಶವಿರುವುದಿಲ್ಲ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದಯವಿಟ್ಟು ಎಲ್ಲರೂ 8:30 ಕ್ಕೆ ಈ ಕೆಳಗಿನ ಲಿಂಕ್‌ಗೆ ಜಾಯಿನ್ ಆಗಿ.
https://meet.google.com/trh-uvxh-efx
ಶರಣು ಶರಣಾರ್ಥಿಗಳು.
ಬಸವ ಸಂಸ್ಕೃತಿ ವಿಶ್ವ ವ್ಯಾಪ್ತಿಯ ನ್ನು ಮೀರಿ ಬೆಳೆಯಲಿ.
ಪಟ್ಟಭಧ್ರ ಶಕ್ತಿಗಳು ಅವ್ಯಾಹತವಾಗಿ ಬಸವಣ್ಣನವರ ಸಮಷ್ಟಿ ಸೈದ್ಧಾಂತಿಕ ತತ್ವಗಳನ್ನು ತುಳಿಯುತ್ತಲೇ ಬಂದಿವೆ.
ಈ ದುಷ್ಟ ಶಕ್ತಿಗಳನ್ನು ನಾಶಮಾಡಿದಾಗ ಮನುಷ್ಯ ಮನುಷ್ಯರು ಸಾಮರಸ್ಯದಿಂದ ಬದುಕಿ ಬಾಳಲು ಸಾಧ್ಯ.
ವಂದನೆಗಳು