ಎಡಬಿಡಂಗಿತನದ ನಿಲುವು ನಿಲ್ಲಿಸದಿದ್ದರೆ ಉಗ್ರ ಹೋರಾಟ
ಬಸವ ಕಲ್ಯಾಣ
ಬಸವ ಜಯಂತಿ ಆಚರಣೆ ವೇಳೆ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಜೊತೆಗೆ ಕಾಲ್ಪನಿಕ ರೇಣುಕಾಚಾರ್ಯರ ಭಾವಚಿತ್ರವಿಟ್ಟು ಮೆರವಣಿಗೆ ತೆಗೆಯಬೇಕೆಂಬ ಅಸಂಬದ್ಧ ಆದೇಶದ ಹೇಳಿಕೆಯನ್ನು ನೀಡಿರುವುದು ಮೂರ್ಖತನದ ಪರಮಾವಧಿ.
ಹನ್ನೆರಡನೆ ಶತಮಾನದ ಐತಿಹಾಸಿಕ ಪರುಷಮಯ ವ್ಯಕ್ತಿತ್ವದ ಹರಿಕಾರ ಗುರು ಬಸವಣ್ಣನವರಿಗೂ ಪಂಚಾಚಾರ್ಯರ ಕಪೋಲಕಲ್ಪಿತ ಶೈವ ಮತದ ರೇಣುಕಾಚಾರ್ಯರಿಗೂ ಹೋಲಿಕೆ ಮಾಡುವುದೆಂದರೆ ಕಾಗೆಗೂ ಕೋಗಿಲೆಗೂ ಹೋಲಿಸಿದಷ್ಟೇ ಹಾಸ್ಯಾಸ್ಪದ.
ಇತ್ತೀಚೆಗೆ ದೇಶ ವಿದೇಶದಲ್ಲಿ ಬಸವ ತತ್ವ ಪ್ರಸಾರವಾಗುತ್ತಿರುವುದನ್ನು ಸಹಿಸದ ವೀರಶೈವ ಮಹಾಸಭೆಯ ಶಂಕರ ಬಿದರಿ ಎಂಬ ಅಜ್ಞಾನಿ ಹುಳು ಬಸವತತ್ವದವರನ್ನು ಕೆಣಕಿದ್ದಾರೆ.
ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಕಂಡ ಕಂಡಲ್ಲಿ ಶಂಕರ ಬಿದರಿಯವರಿಗೆ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈ ಮೂಲಕ ತಿಳಿಸುತ್ತೇವೆ.