ಗದಗ
ರವಿವಾರ ಬಸವದಳದ ಬಸವ ಸಮುದಾಯ ಭವನದಲ್ಲಿ ‘ವಚನ ಸಂಗಮ’ ಕಾರ್ಯಕ್ರಮ ಜರುಗಿತು.
ಆರೋಗ್ಯ ವಿಚಾರಗಳ ಕುರಿತು ಡಾ. ಎಸ್. ಬಿ. ಗೋವಿಂದಪ್ಪನವರ ಮಾತನಾಡಿದರು.
ಅತಿಥಿ ನಿವೃತ್ತ ಪ್ರಾಂಶುಪಾಲರಾದ ಬಿ.ಎಫ್. ಚೇಗರಡ್ಡಿ ಅವರು ಯುವಕರು ಮತ್ತು ಬಸವಾದಿ ಶರಣರ ಕುರಿತು ಮಾತನಾಡಿದರು.
ಮತ್ತೋರ್ವ ಅತಿಥಿ ನಿವೃತ್ತ ಪ್ರಾಂಶುಪಾಲ ಎಸ್. ಎನ್. ಹೊಟ್ಟಿನ ಅವರು ಬಸವಣ್ಣನವರ ಕುರಿತು ಅನೇಕ ವಚನಗಳನ್ನು ಉದಾಹರಿಸುತ್ತಾ ಮಾತಾಡಿದರು. ಜಾತವೇದ ಮುನಿ ಎಂಬವರು ಬಸವಣ್ಣನವರ ಗುರುಗಳಲ್ಲ. ಗುರುವಿಲ್ಲದ ಗುಡ್ಡ ಬಸವಣ್ಣನವರು ಎಂಬ ಮಾತನ್ನು ಸ್ಪಷ್ಟೀಕರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಓಂಕಾರದಿಂದ ‘ಇಷ್ಟಲಿಂಗ ಪೂಜೆ’ ಶುರುವಾಯಿತು. ವಿಭೂತಿ, ರುದ್ರಾಕ್ಷಿ, ಪಾದೋದಕ ವಚನಗಳನ್ನು ಹೇಳುತ್ತಾ, ಲಿಂಗಪೂಜೆ ಸಾಗಿ, ಮಂತ್ರ- ಪ್ರಸಾದದ ವಚನಗಳನ್ನಲ್ಲದೇ ಅನೇಕ ವಚನಗಳನ್ನು ಈ ವೇಳೆಯಲ್ಲಿ ಹೇಳಬಹುದೆಂದು ಶರಣೆ ಗಿರಿಜಕ್ಕ ಧರ್ಮರೆಡ್ಡಿಯವರು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

ವಚನ ಸಂಗಮದ ಅಧ್ಯಕ್ಷತೆ ವಹಿಸಿದ ಶರಣಾದ ವಿ.ಕೆ. ಕರೇಗೌಡ್ರ ಎಲ್ಲರನ್ನೂ ಶ್ಲಾಘಿಸಿ, ಬಸವಾದಿ ಶರಣರ ವಚನಗಳನ್ನೇ ಮುಖ್ಯವಾಗಿಟ್ಟುಕೊಂಡು, ಪ್ರತಿ ರವಿವಾರ ಈ ಕಾರ್ಯಕ್ರಮ ಇರುತ್ತದೆ. ಒಂದೇ ದಿನ ಬರುವುದರ ಬದಲಾಗಿ ಪ್ರತಿವಾರ ಬರಲು ಅತಿಥಿಗಳಾದಿಯಾಗಿ ಎಲ್ಲರಿಗೂ ವಿನಂತಿಸಿದರು.
ರಾಯಚೂರಿನ ಶರಣೆ ಇಂದ್ರಕ್ಕ ಭಾಗವಹಿಸಿದ್ದರು. ಶರಣೆ ರೇಣುಕಾ ಕರೇಗೌಡ್ರ ವಚನ ಪ್ರಾರ್ಥನೆ ಮಾಡಿದರು. ಶರಣ ಪ್ರಕಾಶ ಅಸುಂಡಿ ಕಾರ್ಯಕ್ರಮ ನಿರೂಪಿಸಿ, ಕೆಲ ಪ್ರಕಟಣೆಗಳನ್ನು ಹೇಳಿದರು.

ಶರಣೆ ಗೌರಕ್ಕ ಬಡಿಗಣ್ಣವರ ಶರಣು ಸಮರ್ಪಣೆ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಶರಣರಾದ ಶಂಕರಪ್ಪ ಸೋಮಗೊಂಡ ಅವರು ವ್ಯವಸ್ಥೆಗೊಳಿಸಿದ ಪ್ರಸಾದ ಎಲ್ಲರಿಗೂ ವಿತರಣೆಯಾಯಿತು.