ಧಾರವಾಡದಲ್ಲಿ 130 ಮಕ್ಕಳಿಂದ ಅಕ್ಕನ ವಚನಗಳ ನೃತ್ಯ ಸಂಗಮ

ಬಸವ ಮೀಡಿಯಾ
ಬಸವ ಮೀಡಿಯಾ

ಧಾರವಾಡ

ನಗರದ ರತಿಕಾ ನೃತ್ಯ ನಿಕೇತನದ 130 ಮಕ್ಕಳು ಅಕ್ಕನ ವಚನಗಳಿಗೆ ಹೆಜ್ಜೆ ಹಾಕಿ ಒಂದು ವಿನೂತನವಾದ ಸಮೂಹ ನೃತ್ಯ ಪ್ರದರ್ಶನದೊಂದಿಗೆ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಆಚರಿಸಿದರು.

ಅಕ್ಕ ಮನುಕುಲದ ಅಕ್ಕರೆ ಎನ್ನುವ ಆಶಯದೊಂದಿಗೆ ಈ ವಚನ ನೃತ್ಯ ಸಂಗಮ ನೆರವೇರಿತು. ಸುಮಾರು 2 ಗಂಟೆಗಳ ಕಾಲ ಅದ್ಧೂರಿ ಮತ್ತು ಅರ್ಥಪೂರ್ಣ ಕಾರ್ಯಕ್ರಮ ಈಚೆಗೆ ಸುಜನ ರಂಗಮಂದಿರದಲ್ಲಿ ಮೂಡಿಬಂದಿತು.

ನಾಡಿನ ಹಿರಿಯ ವಿದ್ವಾಂಸರಾದ ಗೊ.ರು. ಚನ್ನಬಸಪ್ಪ ಅವರು ಸಮಾರಂಭ ಉದ್ಘಾಟಿಸಿದರು. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿ ಮೋಟಿಗೆ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಹಿರಿಯ ಶರಣ ಚಂದ್ರಕಾಂತ ಬೆಲ್ಲದ ಅವರು ಮತ್ತು ಧಾರವಾಡದ ಶರಣ-ಶರಣೆಯರು ಸಮಾವೇಶಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
Leave a comment

Leave a Reply

Your email address will not be published. Required fields are marked *