ಗದಗಿನಲ್ಲಿ 20 ಏಪ್ರಿಲ್ ಮಿಥ್ಯ ವರ್ಸಸ್ ಸತ್ಯ’ ಗ್ರಂಥ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ನಗರದಲ್ಲಿ ‘ವಚನ ದರ್ಶನ ಮಿಥ್ಯ ವರ್ಸಸ್ ಸತ್ಯ’ ಗ್ರಂಥ ಬಿಡುಗಡೆ ಸಮಾರಂಭ 20 ಏಪ್ರಿಲ್ 2025 ರವಿವಾರ ಬೆಳಗ್ಗೆ 11 ಗಂಟೆಗೆ, ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ನಡೆಯಲಿದೆ.

ಡಾ. ತೋಂಟದ ಸಿದ್ದರಾಮ ಸ್ವಾಮಿಗಳು, ಜ. ತೋಂಟದಾರ್ಯಮಠ, ಗದಗ ಇವರು ದಿವ್ಯ ಸಾನಿಧ್ಯ ವಹಿಸುವರು. ಪೂಜ್ಯ ಅಭಿನವ ಶಿವಾನಂದ ಮಹಾಸ್ವಾಮಿಗಳು ಶಿವಾನಂದ ಮಠ ಗದಗ ಇವರು ಷಟಸ್ಥಲ ಧ್ವಜಾರೋಹಣ ಮಾಡುವರು.

ಸಾನಿಧ್ಯವನ್ನು ಪೂಜ್ಯ ಗುರುಪಾದ ಮಹಾಸ್ವಾಮಿಗಳು ರೋಣ, ಪೂಜ್ಯ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ಬೆಟಗೇರಿ, ಪೂಜ್ಯ ಅಭಿನವ ಚನ್ನಬಸವ ಮಹಾಸ್ವಾಮಿಗಳು ನಿಡುಗುಂದಿಕೊಪ್ಪ, ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಬೈರನಟ್ಟಿ-ಶಿರೋಳ, ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಕಪ್ಪತಗುಡ್ಡ ಇವರು ವಹಿಸುವರು.

ಉದ್ಘಾಟನೆಯನ್ನು ಪೂಜ್ಯ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಹುಬ್ಬಳ್ಳಿ ಮಾಡುವರು. ಜಾಗತಿಕ ಲಿಂಗಾಯತ ಮಹಾಸಭಾದ ಡಾ. ಶಿವಾನಂದ ಜಾಮದಾರ ಇವರು ಗ್ರಂಥ ಪರಿಚಯಿಸುವರು.

ಮುಖ್ಯ ಅತಿಥಿಗಳಾಗಿ ಮಹಾಂತೇಶ ಪಾಟೀಲ, ಶರಣಬಸಪ್ಪ ಗುಡಿಮನಿ, ಡಾ. ಗಣೇಶ ದೇಸಾಯಿ, ಬಾಲಚಂದ್ರ ಭರಮಗೌಡರ, ವಿ.ಕೆ. ಕರೇಗೌಡ್ರ, ಕೆ. ಎಸ್. ಚೆಟ್ಟಿ, ವಿಜಯಲಕ್ಷ್ಮಿ ಮಾನ್ವಿ, ಶ್ರೀದೇವಿ ಶೆಟ್ಟರ, ಶೇಖಣ್ಣ ಕವಳಿಕಾಯಿ ಭಾಗವಹಿಸುತ್ತಾರೆ. ಅನೇಕ ಸಮಾಜದ ಮುಖ್ಯಸ್ಥರು ಉಪಸ್ಥಿತರಿರುತ್ತಾರೆ.

ಜಿಲ್ಲಾ ಘಟಕಗಳಾದ ಜಾಗತಿಕ ಲಿಂಗಾಯತ ಮಹಾಸಭಾ, ಅ.ಭಾ.ವೀರಶೈವ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಕಾಯಕ ಶರಣರ ಸಮುದಾಯ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಬಸವದಳ, ಬಸವ ಕೇಂದ್ರ, ಬುದ್ಧ ಬಸವ ಅಂಬೇಡ್ಕರ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಸಮಾರಂಭ ಆಯೋಜಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *