ಬೆಳಗಾವಿ
ವಚನ ದರ್ಶನ ಮಿಥ್ಯ vs ಸತ್ಯ ಗ್ರಂಥದ ಲೋಕಾರ್ಪಣಾ ಸಮಾರಂಭವು ಮಂಗಳವಾರ
ಎಪ್ರಿಲ್ 22, 2025 ರಂದು ಮುಂಜಾನೆ 10: 30 ಗಂಟೆಗೆ ಶಿವಬಸವ ನಗರದ ಎಸ್.ಜಿ.ಬಿ.ಐ.ಟಿ.( SGBIT) ಮಹಾವಿದ್ಯಾಲಯದ ಸಭಾಂಗಣದಲ್ಲಿ ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ-ಗದಗ ಅವರ ಸಾನಿಧ್ಯದಲ್ಲಿ, ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು
ಶ್ರೀ ರುದ್ರಾಕ್ಕಿಮಠ ನಾಗನೂರ ಬೆಳಗಾವಿ ಹಾಗೂ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಸಿದ್ದೇಶ್ವರ ಮಠ ಹಂದಿಗುಂದ ಅವರ ಸಮ್ಮುಖದಲ್ಲಿ ಜರುಗಲಿದೆ.
ಡಾ. ಶಿವಾನಂದ ಜಾಮದಾರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಬಸವರಾಜ ರೊಟ್ಟಿ ಜಿಲ್ಲಾಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಎಸ್. ಕೌಜಲಗಿ ನಿವೃತ್ತ ಕನ್ನಡ ಪ್ರಾಧ್ಯಾಪಕರು ಹುಬ್ಬಳ್ಳಿ ಗ್ರಂಥ ಪರಿಚಯ ಮಾಡಲಿದ್ದಾರೆ.
ಸಮಾರಂಭದಲ್ಲಿ ಪ್ರಮುಖ ಮಠಾಧೀಶರು, ಸಾಹಿತಿಗಳು, ಎಲ್ಲ ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಂಘಟನೆಗಳು, ಭಾಗವಹಿಸಲಿವೆ.
ಸರ್ವರೂ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

