ಇಂದು ಮೈಸೂರಿನಲ್ಲಿ ಅನುಭವ ಮಂಟಪ ರಥ

ಬಸವ ಮೀಡಿಯಾ
ಬಸವ ಮೀಡಿಯಾ

ಅರಮನೆ ಕೋಟೆ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಥಕ್ಕೆ ಸ್ವಾಗತ. ಬಸವ ಭಕ್ತರು ಪಾಲ್ಗೊಳ್ಳಲು ಕರೆ

ಬೆಂಗಳೂರು

ಬಸವಣ್ಣನವರ ವಿಚಾರ ಪ್ರಚಾರ ಮಾಡಲು ರಾಜ್ಯಾದ್ಯಂತ ಸಂಚರಿಸುತ್ತಿರುವ ಅನುಭವ ಮಂಟಪ ರಥ ಇಂದು ಮೈಸೂರಿಗೆ ಬರಲಿದೆ.

ಅನುಭವ ಮಂಟಪ ರಥವು ಮೈಸೂರು ಜಿಲ್ಲೆಗೆ ಏಪ್ರಿಲ್ 18 ಬೆಳಗ್ಗೆ 11.00 ಗಂಟೆಗೆ ಆಗಮಿಸಲಿದ್ದು, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅರಮನೆ ಕೋಟೆ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರಥವನ್ನು ಸ್ವಾಗತಿಸಿ ಬೀಳ್ಕೊಡಲಾಗುವುದು.

ಈ ಸಂದರ್ಭದಲ್ಲಿ ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸರಕಾರಿ ಪ್ರಕಟಣೆಯೊಂದು ಕೋರಿದೆ.

ಬಸವ ಜಯಂತಿಯ ಅಂಗವಾಗಿ 2025 ಏಪ್ರಿಲ್ 30 ರಂದು ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಅನುಭವ ಮಂಟಪ- ಬಸವಾದಿ ಶರಣರ ವೈಭವ ಶೀರ್ಷಿಕೆಯಡಿ ಅನುಭವ ಮಂಟಪ ರಥ ರಾಜ್ಯಾದ್ಯಂತ ಸಂಚರಿಸಲಿದೆ.

ಈ ರಥಕ್ಕೆ ಕರ್ನಾಟಕ ಸರ್ಕಾರದ ಸನ್ಮಾನ ಮುಖ್ಯಮಂತ್ರಿಗಳು ಏಪ್ರಿಲ್ 17ರಂದು ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
4 Comments
  • ಅನುಭವ ಮಂಟಪ ರಥ ಯಾವ ಜಿಲ್ಲೆಗಳಿಗೆ ಎಂದು ಬರಲಿದೆ ಎಂಬ ವಿಚಾರ ತಿಳಿದವರು ಈ ಮಾಹಿತಿಯನ್ನು ಹಂಚಿಕೊಳ್ಳಿ.

  • ಬಸವ ರಥ ಬರುವಿಕೆ ಬಗ್ಗೆ ಎರಡು ದಿನ ಮುಂಚಿತವಾಗಿ ಮಾಹಿತಿ ಕೊಟ್ಟಿದ್ದರೆ ಹೆಚ್ಚು ಜನಪ್ರಿಯ ಗೊಳಿಸಬಹುದಿತ್ತು.

  • ರಥ ಬರುವ ವೇಳಾಪಟ್ಟಿ ಇದ್ದರೆ ಮಾಹಿತಿ ನೀಡಿ ಅಣ್ಣ.. ಎಲ್ಲರಿಗೂ ಪೂರ್ವಸಿದ್ಧತೆಗೆ ಅನುಕೂಲ ಆಗುತ್ತೆ

  • ರಥದ ವೇಳಾಪಟ್ಟಿಯನ್ನು ತಾವುಗಳು ಪ್ರಕಟಿಸಿ ಪೂರ್ವ ಸಿದ್ದತೆಗಾಗಿ ತಯಾರಾಗಲು ನಮಗೆಲ್ಲ ಬರಮಾಡಿಕೊಳ್ಳಲು ಸಹಾಯವಾಗುತ್ತದೆ.

Leave a Reply

Your email address will not be published. Required fields are marked *