ಅನುಭವ ಮಂಟಪ ಉತ್ಸವ ರಥಕ್ಕೆ ಮಂಡ್ಯದಲ್ಲಿ ಸಂಭ್ರಮದ ಸ್ವಾಗತ

ಬಸವ ಮೀಡಿಯಾ
ಬಸವ ಮೀಡಿಯಾ

ಮಂಡ್ಯ

ಬಸವ ಜಯಂತಿ ನಿಮಿತ್ತ ಅನುಭವ ಮಂಟಪ, ಬಸವಾದಿ ಶರಣರ ವೈಭವ ಹೆಸರಿನ, ಇದೇ ತಿಂಗಳು 29, 30ರಂದು ಎರಡು ದಿನಗಳು ಬಸವಣ್ಣನವರ ಐಕ್ಯಸ್ಥಳವಾದ ಕೂಡಲಸಂಗಮದಲ್ಲಿ ರಾಜ್ಯ ಸರ್ಕಾರದ ವತಿಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಿರುವ ಹಿನ್ನೆಲೆಯಲ್ಲಿ

ರಾಜ್ಯಾದ್ಯಂತ ಸಂಚರಿಸುತ್ತಿರುವ ರಥಕ್ಕೆ ಮಂಡ್ಯ ನಗರದಲ್ಲಿ ಅದ್ದೂರಿ ಸ್ವಾಗತ ದೊರೆಯಿತು.

ಜಿಲ್ಲಾಧಿಕಾರಿ ಡಾ. ಕುಮಾರ್, ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ಲಿಂಗಾಯತ ಮಹಾಸಭಾ, ಕನ್ನಡ ಸಾಹಿತ್ಯ ಪರಿಷತ್, ಕಾಯಕಯೋಗಿ ಫೌಂಡೇಶನ್, ರಾಷ್ಟ್ರೀಯ ಬಸವದಳ, ಹಿಂದುಳಿದ ವರ್ಗಗಳ ಸಂಘಟನೆ, ಕನ್ನಡಸೇನೆ, ಜಯ ಕರ್ನಾಟಕ, ಬಸವಪರ ಸಂಘಟನೆಗಳ ಮುಖಂಡರು ರಥಕ್ಕೆ ಹೂವಿನ ಹಾರ ಪುಷ್ಪಾರ್ಚನೆ ಮಾಡಿ ಜೈಕಾರವನ್ನು ಕೂಗಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ರಥಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿಗಳು 12ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನವರು ಸಮಸಮಾಜಕ್ಕಾಗಿ ಶ್ರಮಿಸಿದವರು. 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದವರು. ಜಾತಿ ವರ್ಣ ವರ್ಗರಹಿತವಾಗಿ ಎಲ್ಲರನ್ನು ಒಳಗೊಂಡಂತೆ ಸಮಾಜವನ್ನು ನಿರ್ಮಿಸಿ, 770 ಶರಣರು ಒಳಗೊಂಡ ಅನುಭವ ಮಂಟಪದಲ್ಲಿ ಮುಕ್ತವಾಗಿ ಚರ್ಚಿಸಲ್ಪಟ್ಟ ಆಗಿನ ಪ್ರಪ್ರಥಮ ಪಾರ್ಲಿಮೆಂಟ್ ಅದಾಗಿತ್ತು. ಬಸವಾದಿ ಶರಣರ ತತ್ವ ಆದರ್ಶಗಳನ್ನು, ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ತಿಳಿಯುವಂತಾಗಬೇಕು ಎಂದರು.

ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ. ಬೆಟ್ಟಹಳ್ಳಿ ಮಂಜುನಾಥ ಮಾತನಾಡಿ 12ನೇ ಶತಮಾನದಲ್ಲೇ ತುಳಿತಕ್ಕೆ ಒಳಗಾದ ಅಸ್ಪೃಶ್ಯರನ್ನು, ದೀನದಲಿತರನ್ನು ಎಲ್ಲ ನಮ್ಮವರು ಎಂದು ಅಪ್ಪಿ ಒಪ್ಪಿದ ಬಸವಣ್ಣ ಎಲ್ಲರಿಗೂ ಆದರ್ಶ.

ರಾಜ್ಯ ಸರ್ಕಾರ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಅವರ ತತ್ವ ಆದರ್ಶಗಳನ್ನು ಎಲ್ಲೆಡೆ ಮುಟ್ಟಿಸುವಂತಹ ವಚನ ಸಾಹಿತ್ಯವನ್ನು ತಿಳಿಸುವಂತಹ ಅಮೋಘ ಕೆಲಸವನ್ನು ಸರ್ಕಾರದಿಂದ ಮಾಡಲಾಗುತ್ತಿದೆ. ಇದೀಗ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಮಾಡುತ್ತಿರುವುದು ಬಸವಣ್ಣನವರ ಅನುಯಾಯಿಗಳಾದ ನಾವುಗಳು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ವಚನ ಸಂಪುಟ ಗ್ರಂಥದಲ್ಲಿ ಬಸವಾದಿ ಶರಣರ ವಚನಗಳು ಮುದ್ರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ನೀಡುತ್ತಿರುವುದು ಎಲ್ಲಾ ಕಡೆ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಆದೇಶಿಸಿರುವುದು ಶ್ಲಾಘನೀಯವಾದದ್ದು ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ ಬಿರಾದರ, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ನಂದೀಶ, ಕನ್ನಡ ಸೇನೆ ಎಚ್.ಸಿ. ಮಂಜುನಾಥ, ಲಿಂಗಾಯತ ಮಹಾಸಭಾ ಮೀರಾ ಶಿವಲಿಂಗಯ್ಯ, ಜಯ ಕರ್ನಾಟಕದ ನಾರಾಯಣ ಸಂದೇಶ್, ಮಲ್ಲಿಕಾರ್ಜುನಪ್ಪ, ಬಸವದಳದ ಗುರುಪ್ರಸಾದ್, ಶಿವರುದ್ರಸ್ವಾಮಿ, ರುದ್ರಸ್ವಾಮಿ, ಬಸವಕೇಂದ್ರದ ನಾಗರಾಜ್, ಕೆಂಪಯ್ಯ, ಶಿವಲಿಂಗಪ್ಪ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
2 Comments

Leave a Reply

Your email address will not be published. Required fields are marked *