ಬಸವ ಜಯಂತಿ: ಮುರುಘಾ ಮಠದ ವತಿಯಿಂದ ವಿವಿಧ ಸ್ಪರ್ಧೆಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಬಸವೇಶ್ವರರ ಜಯಂತಿ ಪ್ರಯುಕ್ತ ಮೂರು ದಿನಗಳ ಅಂದರೆ 2025ರ ಏಪ್ರಿಲ್ 28 , 29 ಹಾಗೂ 30ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅದರಲ್ಲಿ 28ನೇ ಸೋಮವಾರ ಬೆಳಗ್ಗೆ 10ಗಂಟೆಯಿಂದ ಶ್ರೀಮಠದ ಅನುಭವ ಮಂಟಪದಲ್ಲಿ ವಚನ ಕಂಠಪಾಠ ಸ್ಪರ್ಧೆ, ಅದೇ ಸಮಯದಲ್ಲಿ ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ ಹಾಗೂ ಶ್ರೀಮಠದ ಆವರಣದಲ್ಲಿ ರಂಗೋಲಿ ಸ್ಪರ್ಧೆ, ಇದರಲ್ಲಿ ಬಸವಾದಿ ಶಿವಶರಣರ ಚಿತ್ರಗಳನ್ನೂ ಬಿಡಿಸಬಹುದಾಗಿದೆ.

29ರ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ 18 ವರ್ಷ ಮೇಲ್ಪಟ್ಟವರಿಗೆ 1 ಗಂಟೆ ಕಾಲಾವಧಿಯಲ್ಲಿ “ಸರ್ವಶರಣರ ದೃಷ್ಟಿಯಲ್ಲಿ ಬಸವಣ್ಣ”ನವರು ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಅನುಭವ ಮಂಟಪದಲ್ಲಿ ಏರ್ಪಡಿಸಲಾಗಿದೆ.

ಅದೇ ದಿನ ಪಿಯುಸಿ, ಪದವಿ ಹಾಗೂ ಪದವೀಧರರಿಗೆ 7 ನಿಮಿಷಗಳ ಕಾಲಾವಧಿಯಲ್ಲಿ “ಸಾಂಸ್ಕೃತಿಕ ನಾಯಕ ಬಸವಣ್ಣ” ವಿಷಯ ಕುರಿತಾಗಿ ಭಾಷಣ ಸ್ಪರ್ಧೆಯನ್ನು ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಆಯಾ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ 5 ಸಾವಿರ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ ರೂಪಾಯಿ ಬಹುಮಾನ ನಿಗದಿ ಮಾಡಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು.

ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದ್ದು. ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ದಿನಾಂಕ; 24-4-2025ರ ಗುರುವಾರ ಕಡೆ ದಿನವಾಗಿರುತ್ತದೆ.

ಸ್ವ-ವಿವರವುಳ್ಳ ಮಾಹಿತಿಯನ್ನು ಈ ಕೆಳಕಂಡ ಹಾಗೂ ಕರಪತ್ರದಲ್ಲಿ ನಮೂದಿಸಿರುವ ಮೊಬೈಲ್ ನಂಬರಗಳಿಗೆ ಸಂಪರ್ಕಿಸಿ, ಖುದ್ದಾಗಿ ಇಲ್ಲವೆ, ಫೋನಿನಲ್ಲಿ ಮಾಹಿತಿಯನ್ನು ನೀಡಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
94482 95901, 94499 74004, 9902929701, 97400 37176, 944864932, 9886840737,

ಬಸವಾಭಿಮಾನಿಗಳು, ಶ್ರೀಮಠದ ಭಕ್ತರು, ಬಸವ ಸಂಘಟನೆಗಳು, ಬಸವ ಕೇಂದ್ರಗಳು ಹಾಗೂ ಸರ್ವ ಸಮಾಜಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಂತಿಸಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
Leave a comment

Leave a Reply

Your email address will not be published. Required fields are marked *