ನಾಳೆ ಬೆಂಗಳೂರಿನಲ್ಲಿ ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಮಾವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಸಂಘಟನೆ ಪುನಶ್ಚೇತನಗೊಳಿಸಲು ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸರಣಿ ಸಮಾವೇಶಗಳು

ಬೆಂಗಳೂರು

ಬಳ್ಳಾರಿ, ಚಿತ್ರದುರ್ಗ ನಂತರ ಬೆಂಗಳೂರಿನಲ್ಲಿ ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಮಾವೇಶ ನಡೆಯಲಿದೆ.

ಏಪ್ರಿಲ್ ೨೦ ರಾಜಾಜಿನಗರದ ಬಸವ ಮಂಟಪದಲ್ಲಿ ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆ, ಎಂದು ಮಾಧ್ಯಮ ಪ್ರಕಟಣೆಯೊಂದು ತಿಳಿಸಿದೆ.

ಜನವರಿಯ ಶರಣ ಮೇಳದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಲು ತಿಂಗಳಿಗೊಂದು ಜಿಲ್ಲೆಯಲ್ಲಿ ಅಧಿವೇಶನ ನಡೆಸಲು ಪೂಜ್ಯ ಮಾತಾಜಿಯವರ ಸಮ್ಮುಖದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಜನವರಿ 26ರಂದು ಬಳ್ಳಾರಿಯಲ್ಲಿ ಮೊದಲನೇ ಅಧಿವೇಶನ ನಡೆಯಿತು. ಮಾರ್ಚಿನಲ್ಲಿ ಚಿತ್ರದುರ್ಗದಲ್ಲಿ ಎರಡನೇ ಅಧಿವೇಶನ ನಡೆದಿತ್ತು.

ಬೆಂಗಳೂರು ಸಮಾವೇಶದ ರೂಪರೇಷೆಗಳು:

ಸಂಘಟನೆಯ ಅಭಿವೃದ್ಧಿ
ರಾಷ್ಟ್ರೀಯ ಬಸವ ದಳವು ಸುಮಾರು ೫ ದಶಕಗಳಿಂದ ಬಸವತತ್ವ ಪ್ರಚಾರದಲ್ಲಿ ಮುಂಚೂಣಿಯಲ್ಲಿ ಇರುವ ಬೃಹತ್ ಸಂಘಟನೆ. ಇದರ ಮೂಲ ಕರ್ತೃಗಳು ಪರಮ ಪೂಜ್ಯ ಲಿಂಗಾನಂದ ಅಪ್ಪಾಜಿ ಮಾತಾಜಿ ಮಹಾದೇವಿ ಅವರು.

ಲಿಂಗಾಯತ ಸಮಾಜ ಸಂಘಟನೆ ಮೊದಲಿಗಿಂತಲೂ ಈಗ ಬಹಳ ಅವಶ್ಯಕ ಇದೆ. ಆದ್ದರಿಂದ ರಾಷ್ಟ್ರೀಯ ಬಸವ ದಳದ ಜವಾಬ್ದಾರಿ ಈಗ ಹೆಚ್ಚಾಗಿದೆ. ಈ ಘನತರವಾದ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುವುದು ಎನ್ನುವುದರ ಬಗ್ಗೆ ಚರ್ಚಿಸಿ ಎಲ್ಲಾ ಕಾರ್ಯಕರ್ತರಿಗೆ ಈ ಜವಾಬ್ದಾರಿಗಳನ್ನು ವಿಲೇವಾರಿ ಮಾಡಲಾಗುವುದು.

ಸಂಪೂರ್ಣ ಬೆಂಗಳೂರು ಬಸವಮಯ
ಕರ್ನಾಟಕದ ಎಲ್ಲ ಊರುಗಳವರು ಬೆಂಗಳೂರಿನಲ್ಲಿ ಬಂದು ನೆಲಿಸಿದ್ದಾರೆ, ಹಾಗಾಗಿ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಚಾರದ ಅವಶ್ಯಕತೆ ಇದೆ, ಬೆಂಗಳೂರನ್ನು ಸಂಪೂರ್ಣ ಬಸವಮಯ ಮಾಡಿದರೆ ಅದರ ಪರಿಣಾಮ ಇಡೀ ಕರ್ನಾಟಕದ ಮೇಲಾಗುತ್ತದೆ.

ಲಿಂಗಾಯತ ಧರ್ಮದ ಮೇಲೆ ದಾಳಿ

ಲಿಂಗಾಯತ ಧರ್ಮದ ಆಗುತ್ತಿರುವ ದಬ್ಬಾಳಿಕೆಗೆ ಸಮರ್ಪಕ ಉತ್ತರ ನೀಡಬೇಕಾದ ಜವಬ್ದಾರಿ:

ಇತ್ತೀಚಿನ ದಿನಗಳಲ್ಲಿ ಲಿಂಗಾಯತರ ಮೇಲೆ ಸಂಪ್ರದಾಯವಾದಿಗಳು, ಮತ್ತು ನಮ್ಮವರೇ ಆದ ಧಾರ್ಮಿಕ ಅಜ್ಞಾನಿಗಳಿಂದ ಅನವಶ್ಯಕ ವೈದಿಕ ಹೇರಿಕೆಗಳು ಹಾಗು ಧರ್ಮವನ್ನು ಭ್ರಷ್ಟಗೊಳಿಸುವ ಕುತಂತ್ರಗಳು ಹೆಚ್ಚಾಗಿವೆ. ಇದನ್ನು ಸಮರ್ಪಕವಾಗಿ ಎದುರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ ಈ ಕುತಂತ್ರಗಳನ್ನ ಹೇಗೆ ಎದುರಿಸುವದು ಮತ್ತು ಬೇರು ಸಮೇತ ಅದನ್ನ ಕಿತ್ತು ಹಾಕುವ ಬಗ್ಗೆ ಚರ್ಚಿಸಲಾಗುವದು.

ಈ ಎಲ್ಲ ವಿಚಾರಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಮುಂದಿನ ನಮ್ಮ ನಡೆಗಳು ಹೇಗಿರಬೇಕೆಂದು ಹಾಗು ಎಲ್ಲಾ ಬಸವಪರ ಸಂಘಟನೆಗಳನ್ನು ಒಟ್ಟಾಗಿ ಸೇರಿಸಿಕೊಂಡು ಮುಂದಿನ ಹೋರಾಟಗಳ ಬಗ್ಗೆ ರೂಪರೇಷೆಗಳನ್ನು ಮಾಡಿ, ತತಕ್ಷಣದಿಂದ ಅನುಷ್ಠಾನಗೊಳಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು.

ಸಮಾವೇಶಕ್ಕೆ ಚಂದ್ರಮೌಳಿ ಎನ್. ಲಿಂಗಾಯತ ಪ್ರಧಾನ ಕಾರ್ಯದರ್ಶಿ ಕೇಂದ್ರ ಸಮಿತಿ ರಾಷ್ಟ್ರೀಯ ಬಸವ ದಳ ಇವರು ಸರ್ವರಿಗೂ ಭಕ್ತಿಪೂರ್ವಕವಾಗಿ ಸ್ವಾಗತ ಕೋರಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
4 Comments
    • It is essential to strengthen Basava movement and also bring awareness among lingayathas. I support.

  • ನಮ್ಮ ಬಸವತತ್ವದ ಬಗ್ಗೆ ಜನರಲ್ಲಿ ವೖದಿಕತೆಯ ವಿಷಬೀಜಗಳನ್ನು ಹರಿಯಬಿಡುವ ಸಂಘಿಗಳನ್ನು ಕುರಿತು ಎಚ್ಚ್ಚರದ ಸಂದೇಶವನ್ನು ಅವರಿಗೆ ರವಾನಿಸಬೇಕು. ಯಾವ ಲಿಂಗಾಯತರು ಆರ್ ಎಸ್ ಎಸ್ ಬಿತ್ತರಿಸುವ ಹುಸಿ ಸಂದೇಶಗಳಿಗೆ ಅವರ ಭರವಸೆಯ ಮಾತುಗಳಿಗೆ ನಂಬಬಾರದು. ಅದೊಂದು ಮನುವಾದಿಗಳ ಕುತ್ಸಿತ ಮನನನೋಸ್ತಿಯ ಕೂಟ. ಜಾಗ್ರತೆ ಎಚ್ಚರಿಕೆಯಿಂದ ಇರಿ. ವಂದನೆಗಳೊಂದಿಗೆ.

Leave a Reply

Your email address will not be published. Required fields are marked *