ರಾಜ್ಯಾದ್ಯಂತ ಸಂಚರಿಸುತ್ತಿರುವ ಅನುಭವ ಮಂಟಪ ರಥಯಾತ್ರೆಯ ವೇಳಾಪಟ್ಟಿ

ಕೂಡಲಸಂಗಮಕ್ಕೆ ಹೊರಟಿರುವ ಅನುಭವ ಮಂಟಪ ಉತ್ಸವದ ರಥ – ಯಾವ ಯಾವ ಜಿಲ್ಲೆಗಳಲ್ಲಿ ಎಂದೆಂದು ಬರಲಿದೆ

ಕೂಡಲಸಂಗಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಸವ ಜಯಂತಿ ನಿಮಿತ್ಯ ಬಸವಣ್ಣನವರ ವಿದ್ಯಾಭೂಮಿ, ಐಕ್ಯಸ್ಥಳ ಕೂಡಲಸಂಗಮದಲ್ಲಿ ಎಪ್ರಿಲ್ ೨೯, ೩೦ ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಅನುಭವ ಮಂಟಪ ಬಸವಾದಿ ಶರಣರ ವೈಭವ ಬೃಹತ್ ಕಾರ್ಯಕ್ರಮ ಪ್ರಚಾರಕ್ಕಾಗಿ ಎರಡು ಸ್ತಬ್ದ ಚಿತ್ರಗಳ ರಥಯಾತ್ರೆಯನ್ನು ಹಮ್ಮಿಕೊಂಡಿದೆ.

ಸ್ತಬ್ಧಚಿತ್ರ ರಥಯಾತ್ರೆ ೧

ಎಪ್ರಿಲ್ ೧೭ ರಂದು ಬೆಂಗಳೂರಿನ ವಿಧಾನಸೌಧದ ಎದುರು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ತಬ್ದಚಿತ್ರ ೧ ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ಎಪ್ರಿಲ್ ೨೮ ರಂದು ಕೂಡಲಸಂಗಮ ತಲುಪುವುದು. ೧೨ ದಿನದಲ್ಲಿ ಬೆಂಗಳೂರು ಸೇರಿದಂತೆ ೧೬ ಜಿಲ್ಲೆಯಲ್ಲಿ ೧೮೨೪ ಕಿ. ಮೀ. ರಥಯಾತ್ರೆ ಸಂಚರಿಸುವುದು.

ರಥದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಅವರೊಂದಿಗೆ ಬಿ.ಆರ್. ಅಂಬೇಡ್ಕರ, ಭಗವಾನ್ ಬುದ್ಧ, ಅಕ್ಕಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ್, ಭಗವಾನ್ ಮಹಾವೀರ, ನಾರಾಯಣಗುರು, ಯೇಸು ಕ್ರಿಸ್ತರ ಪ್ರತಿಮೆಗಳು ಇವೆ.

(ಇದು ಅಧಿಕೃತ ವೇಳಾಪಟ್ಟಿ. ರಥದ ಸಂಚಾರದಲ್ಲಿ ವ್ಯತ್ಯಯ ಕಾಣಬಹುದು. ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಸ್ಪಷ್ಟ ಮಾಹಿತಿ ಸಿಗಬಹುದು. )

ಏಪ್ರಿಲ್ ೧೭

ಬೆಂಗಳೂರಿನಿಂದ ಹೊರಟ ರಥ ಯಾತ್ರೆ ಮಂಡ್ಯದಲ್ಲಿ ರಾತ್ರಿ ವಾಸ್ತವ್ಯ ಮಾಡಿದೆ.

ಏಪ್ರಿಲ್ ೧೮

ಮಂಡ್ಯದಲ್ಲಿ ಸಂಚರಿಸಿ ಮೈಸೂರಿನಲ್ಲಿ ವಾಸ್ತವ್ಯ ಮಾಡಿದೆ.

ಏಪ್ರಿಲ್ ೧೯

ಮೈಸೂರು, ತುಮಕೂರಿನಲ್ಲಿ ಸಂಚರಿಸಿ ಚಿತ್ರದುರ್ಗದಲ್ಲಿ ವಾಸ್ತವ್ಯ ಮಾಡಿದೆ.

ಏಪ್ರಿಲ್ ೨೦
ಚಿತ್ರದುರ್ಗದಲ್ಲಿ ಸಂಚರಿಸಿ ದಾವಣಗೇರಿಯಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೧
ದಾವಣಗೆರೆಯಲ್ಲಿ ಸಂಚರಿಸಿ ಬಳ್ಳಾರಿಯಲ್ಲಿ ವಾಸ್ಯವ್ಯ ಮಾಡುವುದು.

ಏಪ್ರಿಲ್ ೨೨

ಬಳ್ಳಾರಿಯಲ್ಲಿ ಸಂಚರಿಸಿ ರಾಯಚೂರಿನಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೩

ರಾಯಚೂರಿನಲ್ಲಿ ಸಂಚರಿಸಿ ಬೀದರದಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೪

ಬೀದರದಲ್ಲಿ ಸಂಚರಿಸಿ ಕಲಬುರ್ಗಿಯಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೫

ಕಲಬುರ್ಗಿಯಲ್ಲಿ ಸಂಚರಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೬
ವಿಜಯಪುರ, ಬೆಳಗಾವಿಯಲ್ಲಿ ಸಂಚರಿಸಿ ಧಾರವಾಡದಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೭
ಧಾರವಾಡದಲ್ಲಿ ಸಂಚರಿಸಿ ಗದಗದಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೮
ಗದಗದಲ್ಲಿ ಸಂಚರಿಸಿ ಬಾಗಲಕೋಟೆಯ ಮೂಲಕ ರಾತ್ರಿ ಕೂಡಲಸಂಗಮಕ್ಕೆ ತಲುಪುವುದು.

ಸ್ತಬ್ದ ಚಿತ್ರ ರಥಯಾತ್ರೆ ೨

ಬಾಗಲಕೋಟೆ ಜಿಲ್ಲೆಯಲ್ಲಿ ಸಂಚರಿಸುವುದು. ಎಪ್ರಿಲ್ ೨೩ರಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಚಾಲನೆ ನೀಡುವರು. ೭ ದಿನಗಳ ಕಾಲ ೩೭೩ ಕಿ.ಮೀ ಸಂಚರಿಸುವ ಈ ರಥ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸಿ ೨೯ ರಂದು ಕೂಡಲಸಂಗಮಕ್ಕೆ ಬರುವುದು.

ಏಪ್ರಿಲ್ ೨೩
ಬಾದಾಮಿಯಿಂದ ಆರಂಭವಾಗುವ ರಥಯಾತ್ರೆ ಇಲಕಲ್ಲದಲ್ಲಿ ರಾತ್ರಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೪
ಇಲಕಲ್ಲ ತಾಲೂಕಿನಲ್ಲಿ ಸಂಚರಿಸಿ ಹುನಗುಂದಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೫
ಹುನಗುಂದ ತಾಲೂಕಿನಲ್ಲಿ ಸಂಚರಿಸಿ ಬಾಗಲಕೋಟೆಯಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೬
ಬಾಗಲಕೋಟೆ ತಾಲೂಕಿನಲ್ಲಿ ಸಂಚರಿಸಿ ಮುಧೋಳದಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೭
ಮುಧೋಳ, ತೇರದಾಳ ತಾಲೂಕಿನಲ್ಲಿ ಸಂಚರಿಸಿ ರಬಕವಿ ಬನಹಟ್ಟಿಯಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೮
ರಬಕವಿ ಬನಹಟ್ಟಿ ತಾಲೂಕಿನಲ್ಲಿ ಸಂಚರಿಸಿ ಬೀಳಗಿಯಲ್ಲಿ ವಾಸ್ತವ್ಯ ಮಾಡುವುದು.

ಏಪ್ರಿಲ್ ೨೯
ಬೀಳಗಿಯಿಂದ ಕೂಡಲಸಂಗಮಕ್ಕೆ ಬರುವುದು.

ರಥಯಾತ್ರೆಯ ಉದ್ದೇಶಗಳು

೧. ಬಸವಾದಿ ಶರಣರ ವಚನಸಾರವನ್ನು ಪ್ರಸಾರ ಮಾಡುವುದು
೨. ಸಮಸಮಾಜ ನಿರ್ಮಾಣ
೩. ಕಾಯಕದ ಪರಿಕಲ್ಪನೆ ಕುರಿತು ಅರಿವು ಮೂಡಿಸುವುದು
೪. ಶಾಂತಿ ಮತ್ತು ಸಾಮರಸ್ಯವನ್ನು ಉಂಟು ಮಾಡುವುದು
೫. ಬಹುತ್ವ ತತ್ವದರ್ಶನ
೬. ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳ ಸಾರ
೭. ಯುವಜನತೆ ಮತ್ತು ಶಿಕ್ಷಣ
೮. ಸಾಮಾಜಿಕ ಸೇವೆ ಮತ್ತು ಸಮುದಾಯ ಅಭಿವೃದ್ಧಿ
೯. ಸಾಮಾಜಿಕ ಅರಿವು ಮತ್ತು ಮಾಧ್ಯಮ ಸಂಪರ್ಕ
೧೦. ಪರಿಸರ ಸಂರಕ್ಷಣೆ
೧೧. ಸರ್ವಧರ್ಮಗಳ ಸಾರ ಸಮಾಜದ ಒಳಿತು ಮತ್ತು ಸಾಮರಸ್ಯಕ್ಕಾಗಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
4 Comments
  • ಬಸವಣ್ಣನವರ ವಿಚಾರಗಳನ್ನು ಮನೆ ಮನಕ್ಕೆ ತಲುಪುವ ಸರಕಾರದ ಕಾರ್ಯಕ್ರಮಕ್ಕೆ ಅಭಿನಂದನೆಗಳು

  • ಬಸವಣ್ಣ ನವರನ್ನು ಜನರ ಮನಸ್ಸಿಗೆ ತಲುಪುವ ಹಾಗೆ ಅನುಭವ ಮಂಟಪದ ಯಾತ್ರೆ ಸಂಚಾರ ಯಶಸ್ವೀ ಯಾಗಲಿ ಎಲ್ಲಾ ಬಸವ ಭಕ್ತಾದಿಗಳು ಸಕ್ರಿಯವಾಗಿ ಪಾಲ್ಗೊಂಡು ಅನುಭವ ಮಂಟಪ ಯಾತ್ರೆ ಯನ್ನು ಸಾಕಾರ ಗೊಳಿಸಬೇಕು
    🙏🙏

Leave a Reply

Your email address will not be published. Required fields are marked *