ಹುಕ್ಕೇರಿ
ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಮಾಸಿಕ ಶಿವಾನುಭವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನಿದ್ಯವನ್ನು ಹುಕ್ಕೇರಿ ವಿರಕ್ತಮಠದ ಪೂಜ್ಯ ಶಿವಬಸವ ಮಹಾಸ್ವಾಮಿಗಳು ವಹಿಸಿ ಮಾತನಾಡುತ್ತ, ಕಲ್ಲು ಕಟ್ಟಿಗೆ ಮಣ್ಣಿನಲ್ಲಿ ದೇವರಿಲ್ಲ. ನಮ್ಮೊಳಗಿದ್ದು, ಶಿವಯೋಗದ ಮುಖಾಂತರ ತನ್ನೊಳಗಿರುವ ದೇವರನ್ನು ಕಂಡುಕೊಳ್ಳಬಹುದೆಂದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ನಮ್ಮ ಧರ್ಮದ ಆಚಾರಗಳನ್ನು ರೂಢಿಗತ ಮಾಡಿಕೊಡಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ನೇತೃತ್ವವನ್ನು ಕ್ರಿಯಾ ಮೂರ್ತಿಗಳಾದ ಯೋಗಿನಾಥ ಶರಣರು ವಹಿಸಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸತ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸವ ಶ್ರೀ ಕಮಿಟಿಯ ಬಸವರಾಜ ನಿಲಜಿ, ಮಹೇಶ್ ಕಾಡಗಿ, ರಮೇಶ ಗುಂಡಿ, ಸುರೇಶ ಕಂಕಣವಾಡಿ, ಮಹದೇವ ಗವನಾಳಿ, ಆನಂದ ತೋಳಿ, ಮಲ್ಲಪ್ಪ ಚೌಗಲಾ, ಶಿವಪ್ರಕಾಶ್ ಕೋಟಿವಾಲೆ ಮಹಾಂತೇಶ ಚೌಗಲಾ ಹಾಗೂ ಅಕ್ಕನ ಬಳಗದ ಶರಣೆಯರು ಸೇರಿದಂತೆ ಗ್ರಾಮದ ನೂರಾರು ಜನ ಶರಣ ಶರಣೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮನ್ನು ಪ್ರವೀಣ ತೋಳಿ ನಿರೂಪಿಸಿ ವಂದಿಸಿದರು. ಬಿ.ಎಸ್. ಚೌಗಲಾ ಸ್ವಾಗತಿಸಿದರು.