ಬೈಲಹೊಂಗಲ
ತಾಯಿ ಹೃದಯವಾದರೆ ತಂದೆ ಮೆದುಳು. ಇವೆರಡರ ಸಮಸಮ ಜವಾಬ್ದಾರಿ ಹಾಗೂ ಬಾಂಧವ್ಯದಲ್ಲಿ ಮಗು ಉತ್ತಮ ನಾಗರಿಕನಾಗಿ ರೂಪಗೊಳ್ಳುತ್ತದೆ. ಆಧುನಿಕ ಜೀವನ ಶೈಲಿಯ ಶಿಕ್ಷಣ, ವಿಶ್ವವ್ಯಾಪಿ ವೈಟ್ ಕಾಲರ್ ಉದ್ಯೋಗದಿಂದ ತಾಯಿ ಮಕ್ಕಳ ಬಾಂಧವ್ಯ, ಸಂಸ್ಕೃತಿ ಕ್ಷೀಣಿಸಿ, ವೃದ್ಧಾಶ್ರಮಗಳ ಸೃಷ್ಟಿ ಆಗುತ್ತಿರುವುದು ವಿಷಾದನೀಯ ಎಂದು ಖಾನಾಪುರ ತಾಲೂಕ ಕದಳಿ ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ ಗಣಾಚಾರಿ ನುಡಿದರು.
ಸ್ಥಳೀಯ ಪತ್ರಿ ಬಸವೇಶ್ವರ ನಗರ ಅಭಿವೃದ್ಧಿ ಸಂಘ, ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ ಏರ್ಪಡಿಸಿದ 30ನೇ ಮಾಸಿಕ ಅನುಭಾವ ಗೋಷ್ಟಿಯಲ್ಲಿ ವಿಶ್ವ ತಾಯಂದಿರ ದಿನಾಚರಣೆ ಕುರಿತು ಅವರು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ವಿಶ್ವವಿಖ್ಯಾತ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಹಾಗೂ ದೀಪಾ ಬಸ್ತಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕಾಡಪ್ಪ ರಾಮಗುಂಡಿ, ರಾಮಲಿಂಗ ಕಾಡನ್ನವರ, ಪತ್ರಯ್ಯ ಕುಲಕರ್ಣಿ, ಅಶೋಕ ಸಾಲಿ, ವೀರಪ್ಪ ಹವಳಪ್ಪನವರ, ನಾಗನಗೌಡ ಪಾಟೀಲ, ಶ್ರೀಶೈಲ ಶರಣಪ್ಪನವರ, ಗೀತಾ ಅರಳಿಕಟ್ಟಿ, ಮಹಾದೇವಿ ಗಣಾಚಾರಿ, ಗೀತಾ ಮುದುಕನಗೌಡರ, ಗೀತಾ ಬೇವಿನಗಿಡದ, ರಾಜೇಶ್ವರಿ ದ್ಯಾಮನಗೌಡರ ಪಟ್ಟಣದ ನೂರಾರು ಮಕ್ಕಳು, ಶರಣರ ಶರಣೆಯರು ಉಪಸ್ಥಿತರಿದ್ದರು.
ದುಂಡಯ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು . ಸುಹಾಸಿನಿ ಸಿಳ್ಳಿ ಪ್ರಸ್ತಾವಿಕ ನುಡಿದರು. ಕಲಾವತಿ ಕಡಕೋಳ ಸ್ವಾಗತಿಸಿದರು ಸಂತೋಷ್ ಕೊಳವಿ ವಂದಿಸಿದರು ಸುವರ್ಣ ಬಿಜುಗುಪ್ಪಿ ನಿರೂಪಿಸಿದರು. ಪತ್ರಿ ಬಸವೇಶ್ವರ ನಗರ ಅಭಿವೃದ್ಧಿ ಸಂಘದಿಂದ ದಾಸೋಹ ಸೇವೆ ನೆರವೇರಿತು.
The responsibility is to be shared by both father and mother on equality principle. Family’ management is not mother’s only duty. Father has the duty to manage the family.n. This is Guru Basava philosophy.