ಬೆಳಗಾವಿ
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ಸಾಮೂಹಿಕ ಪ್ರಾಥ೯ನೆ ಮತ್ತು ವಚನ ವಿಶ್ಲೇಷನೆ ಕಾಯ೯ಕ್ರಮ ಜರುಗಿತು.
ಶರಣ ಮಹಾಂತೇಶ ತೋರಣಗಟ್ಟಿ ಮಾತನಾಡಿ, ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಇಚ್ಛಾಶಕ್ತಿ ಬೇಕು. ಅಂತಹ ಇಚ್ಛಾಶಕ್ತಿ ಬಸವತತ್ವದ ಮೂಲಕ ತಮಗೆ ಬಂದಿದೆ ಎಂದು ತಿಳಿಸಿದರು.
ನಿಜವಾದ ಬಸವತತ್ವ ಆಚರಿಸುವ ಒಬ್ಬ ಲಿಂಗಾಯತ ಲಕ್ಷ ಲಿಂಗಾಯತರಿಗೆ ಸಮನಾಗಿದ್ದು, ಪ್ರತಿ ಗ್ರಾಮದಲ್ಲಿ ಬಸವ ಬಳಗ ಸಂಘಟನೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಬೆಳಗಾವಿ ಲಿಂಗಾಯತ ಸಂಘಟನೆಯ ಪಾತ್ರದ ಮಹತ್ವವನ್ನು ಶ್ಲಾಘಿಸಿದರು.

ಶರಣ ಸುನೀಲ ಸಾಣಿಕೊಪ್ಪ ನ್ಯಾಯವಾದಿ ಮಾತನಾಡುತ್ತಾ, ಅಂಬಿಗರ ಚೌಡಯ್ಯ ಅವರ ವಚನದಲ್ಲಿ ಪಾಪ-ಪುಣ್ಯಗಳ ವೈಚಾರಿಕ ಅಂಶಗಳನ್ನು ತಿಳಿಸಿ, ಬಸವಣ್ಣನವರ ಪ್ರಕಾರ ಧರ್ಮವೆಂದರೆ ನಮ್ಮ ಕಾಯಕ ನಿಷ್ಠೆಯಾಗಿದೆ ಮತ್ತು ಪತಿತರನ್ನು, ನೊಂದವರನ್ನು, ಶೋಷಿತರನ್ನು, ದಲಿತರನ್ನು ಮೇಲಕ್ಕೆತ್ತುವುದೇ ಧರ್ಮದ ಮೂಲಭೂತ ಕರ್ತವ್ಯ ಎಂದು ತಿಳಿಸಿದರು.
ಸುರೇಶ ನರಗುಂದ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಜಯಶ್ರೀ ಚಾವಲಗಿ, ಬಿ.ಪಿ. ಜವನಿ, ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಮಹದೇವ ಕೆಂಪಿಗೌಡರ, ಶಂಕರ ಗುಡಸ, ವಚನ ವಿಶ್ಲೇಷಣೆ ಮಾಡಿದರು.
ಅಧ್ಯಕ್ಷತೆಯನ್ನು ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣಾ ದೇಯಣ್ಣವರ ವಹಿಸಿದ್ದರು. ಶಾಂತಾ ಕಂಬಿ ದಾಸೋಹ ಸೇವೆಗೈದರು.

ಅಕ್ಕಮಹಾದೇವಿ ತೆಗ್ಗಿ, ಗಂಗಪ್ಪ ಉಣಕಲ್, ಮಹಾನಂದಾ ಅರವಿಂದ ಪರುಶೆಟ್ಟಿ ದಂಪತಿಗಳು, ಶೋಭಾ ದೇಯನ್ನವರ, ಅನಸೂಯಾ ಬಶೆಟ್ಟಿ, ರತ್ನಾ ಬೆಣಚನಮರಡಿ, ಶೇಖರ ವಾಲಿಇಟಗಿ, ಮಹಾಂತೇಶ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಅನಿಲ ರಘಶೆಟ್ಟಿ, ಬಸವರಾಜ ಕರಡಿಮಠ, ಮ.ಬಿ. ಕಾಡೆ, ಲಕ್ಷ್ಮಣ ಕುಂಬಾರ, ಬಸವರಾಜ ಮತ್ತಿಕೊಪ್ಪ, ಈರಪ್ಪ ಕಮ್ಮಾರ, ಗುರುಸಿದ್ದಪ್ಪ ರೇವಣ್ಣವರ, ಗದಿಗೆಪ್ಪ ತಿಗಡಿ, ಸೋಮಶೇಖರ ಕತ್ತಿ, ಶಿವಾನಂದ ತಲ್ಲೂರ, ಬಸವರಾಜ ಬಿಜ್ಜರಗಿ, ಶಿವಾನಂದ ನಾಯಕ, ಮತ್ತಿತರ ಶರಣ ಶರಣೆಯರು ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.