ಬೆಳಗಾವಿಯಲ್ಲಿ ಹಳಕಟ್ಟಿ ಸಂಸ್ಮರಣೆ ವಚನ ಕಂಠಪಾಠ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಡಾ. ಫ ಗು.ಹಳಕಟ್ಟಿ ಅವರ ಸಂಸ್ಮರಣೆಯ ನಿಮಿತ್ತವಾಗಿ ಪರಮಪೂಜ್ಯ ವಾಗ್ದೇವಿತಾಯಿ ಮತ್ತು ಕುಮುದಿನಿ ತಾಯಿಯವರ ಆಶಯದಂತೆ ಗುರು ಬಸವ ಬಳಗ ಬೆಳಗಾವಿ ಇವರ ನೇತೃತ್ವದಲ್ಲಿ ರವಿವಾರ 12ನೇ ಶತಮಾನದ ಬಸವಾದಿ ಶರಣರ ವಚನ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಬೆಳಗಾವಿಯ ಮಹಾಂತೇಶ ನಗರದ ಲಿಂಗಾಯತ ಸಂಘಟನೆಯ ಡಾ. ಫ ಗು ಹಳಕಟ್ಟಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಿ ಬಸಮ್ಮ ಮಠದ (ಅಂಧ ವಿದ್ಯಾರ್ಥಿನಿ) ಒಂದು ಗಂಟೆಯಲ್ಲಿ 366 ವಚನಗಳನ್ನು ಹೇಳಿ ಪ್ರಥಮ ಪಡೆದರು. ಕುಮಾರಿ ವಿದ್ಯಾ ಸುರೇಶ ಕಾರಜೋಳ 225 ವಚನ ಹೇಳಿ ದ್ವಿತೀಯ, ಕುಮಾರಿ ಪ್ರಯುಕ್ತಾ ಜಗದೀಶ ಯಮಕನಮರಡಿ 200 ವಚನ ಹೇಳಿ ತೃತೀಯ ಹಾಗೂ ಶ್ರೀಮತಿ ವಿದ್ಯಾ ಜಿ. ಗೌಡರ 193 ವಚನ ಹೇಳಿ ಚತುರ್ಥ ಸ್ಥಾನವನ್ನು ಪಡೆದರು.

ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ಗುರು ಬಸವಣ್ಣನವರ ವಚನ ಗ್ರಂಥವನ್ನು ಪರಮಪೂಜ್ಯ ಮಾತಾಜಿಯವರಿಂದ ವಿತರಿಸಲಾಯಿತು. ಒಟ್ಟು 42 ಜನ ವಚನ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಪ್ರಶಸ್ತಿ ಪತ್ರ ವಿತರಿಸಿ ಪರಮಪೂಜ್ಯ ವಾಗ್ದೇವಿ ಮಾತಾಜಿಯವರು “ವಚನಗಳು ಕೇವಲ ಕಂಠಸ್ಥ ಆಗದೆ ಅವು ಹೃದಯಸ್ಥ ಆಗಬೇಕು ನಂತರ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ” ಎಂದರು. ಪೂಜ್ಯ ಕುಮುದಿನಿ ಮಾತಾಜಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಂತೇಶ ತೋರಣಗಟ್ಟಿ ಅವರು ” ವಚನ ಕಂಠಪಾಠ ಸ್ಪರ್ಧೆಯು ವ್ಯಕ್ತಿಯ ಜೀವನವನ್ನು ಬದಲಾಯಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಲಿಂಗಾಯತ ಸಂಘಟನೆಯ ಕಾರ್ಯದರ್ಶಿಗಳಾದ ಸುರೇಶ ನರಗುಂದ ಅವರು ವಹಿಸಿದ್ದರು. ಸಿ.ಎಂ. ಬೂದಿಹಾಳ ಅವರು ಬಹುಮಾನ ವಿತರಣೆಯನ್ನು ನೆರವೇರಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಪ್ರಾಧ್ಯಾಪಕರಾದ ಅ. ಬ. ಇಟಗಿ ಮಾಡಿದರೆ, ಶರಣು ಸಮರ್ಪಣೆಯನ್ನು ಪಿ.ಎ. ರೊಟ್ಟಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದಯಣ್ಣವರ ಹಾಗೂ ಸಂಘಟಕರಾದ ಸಂಗಮೇಶ ಅರಳಿ, ಶಂಕರ ಗುಡಸ ಮತ್ತು ಸರ್ವ ಸದಸ್ಯರು ಹಾಗೂ ಗುರು ಬಸವ ಬಳಗದ ಈರಣ್ಣ ಕೊಪ್ಪದ, ರಾಜು ಕುಂದಗೋಳ, ಬಿ.ಪಿ. ಜೇವಣಿ, ಶಿವಾನಂದ ಲಾಳಸಿಂಗಿ, ಕೆಂಪಣ್ಣ ರಾಮಾಪುರಿ, ಚಂದ್ರಶೇಖರ ಹುಬ್ಬಳ್ಳಿ, ಸಂಜು ಪಾಟೀಲ, ಇಬ್ರಾಹಿಂ ಮುಲ್ಲಾ, ಮಹಾನಂದಾ ಪರುಶೆಟ್ಟಿ, ರುದ್ರಪ್ಪ ವಾಲಿಶೆಟ್ಟಿ , ಬಸವರಾಜ ಹಿರೇಹೊಳಿ, ಮಲ್ಲಿಕಾರ್ಜುನ ಮಾಳಗಿ, ಡಾ.ರಾಜು ಪಾಟೀಲ ಹಾಗೂ ಗುರು ಬಸವ ಬಳಗದ ಸರ್ವ ಸದಸ್ಯರು ಮತ್ತು ಅಪಾರ ಶರಣ ಬಂಧುಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FgE69G06eauFQg8Bv3ecgq

Share This Article
Leave a comment

Leave a Reply

Your email address will not be published. Required fields are marked *