ಯಲಬುರ್ಗಾ
ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗೂ ರಾಷ್ಟ್ರೀಯ ಬಸವದಳ ಯುವ ಘಟಕದ ವತಿಯಿಂದ ವಿಶ್ವಗುರು ಬಸವ ಮಂಟಪದಲ್ಲಿ ಪೂಜ್ಯ ಲಿಂಗಾನಂದ ಸ್ವಾಮೀಜಿ ಅವರ 30 ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶರಣ ಬಸವನಗೌಡ ಪೋಲಿಸಪಾಟೀಲ ಅವರು ಅನುಭಾವ ನೀಡಿ, 12 ನೇ ಶತಮಾನದಲ್ಲಿ ಗುರು ಬಸವಣ್ಣನವರು ಪ್ರಥಮದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಿ, ಅಂದಿನ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ, ಪುರುಷರಷ್ಟೇ ಸ್ತ್ರೀಯರಿಗು ಸಮಾನ ಸ್ವಾತಂತ್ರ್ಯದ ಹಕ್ಕು ಕೊಟ್ಟರು.
ಅಂದಿನ ಸ್ತ್ರೀ ಸ್ವಾತಂತ್ರ್ಯವನ್ನು 21ನೇ ಶತಮಾನದಲ್ಲಿ ಪೂಜ್ಯ ಲಿಂ. ಲಿಂಗಾನಂದ ಸ್ವಾಮಿಗಳು, ಧಾರವಾಡದಲ್ಲಿ 1970 ರಂದು ಅಕ್ಕಮಹಾದೇವಿ ಅನುಭಾವ ಪೀಠ ರಚಿಸಿ ಪೂಜ್ಯ ಡಾ. ಮಾತೆ ಮಹಾದೇವಿಯವರನ್ನು ಪೀಠಕ್ಕೇರಿಸಿದರು. ಸ್ತ್ರೀ ಸ್ವಾತಂತ್ರ್ಯಕ್ಕೆ ಮರುಜೀವ ತುಂಬಿದ ಕೀರ್ತಿ ಲಿಂಗಾನಂದ ಸ್ವಾಮಿಗಳಿಗೆ ಸಲ್ಲುತ್ತದೆ. ಬಸವ ತತ್ವವನ್ನ ಬಿತ್ತರಿಸುವಲ್ಲಿ ಲಿಂಗಾನಂದ ಸ್ವಾಮಿಗಳು ಶ್ರೀಗಂಧದ ಕಡ್ಡಿಯಂತೆ ತಮ್ಮ ಜೀವನವನ್ನೇ ಸವೆಸಿದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಬಸವರಾಜ ಹೂಗಾರ, ಪೂಜ್ಯ ಲಿಂ. ಲಿಂಗಾನಂದ ಸ್ವಾಮಿಗಳು ಜಗತ್ತಿನ ಅತ್ಯಂತ ಶ್ರೇಷ್ಠ ಸ್ವಾಮಿಗಳಲ್ಲಿ ಒಬ್ಬರಾಗಿದ್ದರು. 12 ನೇ ಶತಮಾನದ ಬಸವಾದಿ ಶಿವಶರಣರು, ತಾಡೋಲೆಯಲ್ಲಿ ರಚಿಸಿದ ವಚನ ಸಾಹಿತ್ಯವನ್ನು ಪಚನ ಮಾಡಿಕೊಂಡು ಪ್ರವಚನದ ಮೂಲಕ ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿಯಂತೆ ನಾಡಿನ ತುಂಬೆಲ್ಲಾ ತಿರುಗಿ ವಚನ ಸಾಹಿತ್ಯದ ತಿರುಳನ್ನು ತಿಳಿಸಿಕೊಟ್ಟಂತ ಕೀರ್ತಿ ಪೂಜ್ಯ ಲಿಂಗಾನಂದ ಸ್ವಾಮಿಗಳಿಗೆ ಸಲ್ಲುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ವನಜಬಾವಿ ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಶರಣ ದೇವಪ್ಪ ಕೋಳೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು ಶರಣ ಅಮರೇಶಪ್ಪ ಗಡಿಹಳ್ಳಿ, ಅಮರೇಶಪ್ಪ ಬಳ್ಳಾರಿ ಮಾತನಾಡಿದರು.
ನಾಗನಗೌಡ ಜಾಲಿಹಾಳ, ಶಿವಾನಂದಪ್ಪ ಬೇವೂರು, ಸಂಗನಗೌಡ ಮನ್ನಾಪುರ, ಯಮನೂರಪ್ಪ ಬೇವೂರು, ಗಿರಿಮಲ್ಲಪ್ಪ ಪರಂಗಿ, ಹನಮೇಶ್ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ದೇವೇಂದ್ರಪ್ಪ ಕೋಳೂರು, ಶಿವಪುತ್ರಪ್ಪ ಮಂತ್ರಿ, ಶರಣಪ್ಪ ಮಲ್ಲಿಕಾರ್ಜುನ ಪ್ರಶಾಂತ್ ಕುಮಾರ್ ಹಾಗೂ ಯುವ ಘಟಕದ ಅಧ್ಯಕ್ಷ ಶಿವಕುಮಾರ ಹೊಸಳ್ಳಿ, ಶರಣಪ್ಪ ಮೇಟಿ, ಮಲ್ಲಿಕಾರ್ಜುನ, ಹನಮಂತಪಜ್ಜ, ಜಗದೀಶ ಎಸ್ ಮಂತ್ರಿ, ಪ್ರಕಾಶ ಮಂತ್ರಿ ಜಗದೀಶ್ ಮೇಟಿ, ಅಕ್ಕನ ಬಳಗದ ಶರಣೆ ಸಾವಿತ್ರಮ್ಮ ಆವಾರಿ, ಶಂಕ್ರಮ್ಮ ಹೊಸಳ್ಳಿ ಬಸವ ಹೂಗಾರ, ಶರಣಮ್ಮ ದ್ರಾಕ್ಷಾಯಣಮ್ಮ ಹೊಸಳ್ಳಿ, ವಿಶಾಲಾಕ್ಷಿ ಕೋಳೂರು, ಮಲ್ಲಮ್ಮ ಜಾಲಿಹಾಳ, ನಿಂಗಮ್ಮ ಕೋಳೂರು ಸೇರಿದಂತೆ, ಸುತ್ತು ಹತ್ತಾರು ಹಳ್ಳಿಗಳಾದ ಹೀರೇಬೊಮ್ಮನಾಳ, ತಾಳಕೇರಿ, ಚವಡಾಪುರ, ಮುಸಲಾಪುರ ವಣಗೇರಿ, ಮದ್ಲೂರು, ಮರಕಟ್ಟ ಸೋಮಸಾಗರ, ಕಲಭಾವಿ ಮಾಟಲದಿನ್ನಿ, ಯಡ್ಡೋಣಿ, ಚಿಕ್ಕಮನ್ನಾಪುರ, ವನಜಭಾವಿ ಗ್ರಾಮಗಳಿಂದ ಶರಣ ಸದ್ಭಕ್ತರು ಪಾಲ್ಗೊಂಡಿದ್ದರು.
ದಾಸೋಹ ಸೇವೆ ಶರಣೆ ಶಂಕ್ರಮ್ಮ ಹನಮೇಶ ಹೊಸಳ್ಳಿ ಇವರು ಚಿರಂಜೀವಿಯ ಜನ್ಮ ದಿನದ ಪ್ರಯುಕ್ತ ಪ್ರಸಾದ ಸೇವೆ ಮಾಡಿದರು. ಶರಣ ಶರಣಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು.