ಕೊಡಗಿನಲ್ಲಿ ಅಂಚೆ ಕಾರ್ಡ್‌ನಲ್ಲಿ ವಚನ ಬರೆಯುವ ಸ್ಪರ್ಧೆಗೆ ಆಹ್ವಾನ

ಬಸವ ಮೀಡಿಯಾ
ಬಸವ ಮೀಡಿಯಾ

ಕುಶಾಲನಗರ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ವತಿಯಿಂದ ಅಂಚೆ ಕಾರ್ಡ್‌‌ನಲ್ಲಿ ವಚನಗಳನ್ನು ಬರೆಯುವ ಸ್ಪರ್ಧೆ ಆಯೋಜಿಸಲಾಗಿದೆ.

ಶಾಲಾ–‌ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು ಎಲ್ಲರಿಗೂ ಸ್ಪರ್ಧೆಗೆ ಮುಕ್ತ ಅವಕಾಶ ಇದೆ. ಅತಿ ಹೆಚ್ಚು ವಚನಗಳನ್ನು ಬರೆದು ಕಳಿಸಿದವರಿಗೆ ಬಹುಮಾನ ನೀಡಲಾಗುವುದು ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

12ನೇ ಶತಮಾನದ ಬಸವಾದಿ ಶರಣ- ಶರಣೆಯರು ಬರೆದ ವಚನಗಳನ್ನು ಅಂಚೆ ಕಾರ್ಡಿನಲ್ಲಿ ಬರೆದು ಕೆಳಕಂಡ ವಿಳಾಸಕ್ಕೆ ಜುಲೈ 20ರ ಒಳಗೆ ಕಳುಹಿಸಬೇಕು. ಕಳಿಸುವವರ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು.

ವಿಳಾಸ

ಕೆ.ಎಸ್.ಮೂರ್ತಿ,
ಜಿಲ್ಲಾ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ತು,
ಶ್ರೀ ಅನ್ನಪೂರ್ಣೇಶ್ವರಿ ನಿವಾಸ, ಸೋಮೇಶ್ವರ ದೇವಾಲಯದ ಬಳಿ, ಕುಶಾಲನಗರ, ಕೊಡಗು ಜಿಲ್ಲೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *