ಹರಿಹರ
ವಚನ ಸಂರಕ್ಷಣಾ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಜಯಂತಿ ಹಾಗೂ ಪರಿಸರ ದಿನಾಚರಣೆ ಕದಳಿ ಮಹಿಳಾ ವೇದಿಕೆ ವತಿಯಿಂದ ನಡೆಯಿತು.
ಸಿಟಿ ಫ್ಯಾಮಿಲಿ ಸೆಂಟರ್ ಆವರಣದಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶರಣ ಹಳಕಟ್ಟಿ ಅವರ ಭಾವಚಿತ್ರಕ್ಕೆ ಹರಿಹರ ನಗರಸಭೆ ಸದಸ್ಯರು, ಗಣ್ಯವರ್ತಕರಾದ ಡಿ. ಹೇಮಂತರಾಜ್ ಅವರು ಪುಷ್ಪಾರ್ಪಣೆ ಮಾಡುವುದರ ಮೂಲಕ ಉದ್ಘಾಟಿಸಿದರು.

ಶರಣರ ಕುರಿತು ಅನುಭಾವವನ್ನು ಪ್ರವಚನಕಾರ ಪಿ. ಸಿದ್ದಪ್ಪ ಅವರು ಮಾಡಿದರು. ಹಳಕಟ್ಟಿ ಅವರ ಕುರಿತು ತುಂಗಾ ಮುನಿಯಪ್ಪ ಸಹ ಮಾತನಾಡಿದರು.
ಅಧ್ಯಕ್ಷತೆಯನ್ನು ಕದಳಿ ವೇದಿಕೆ ಅಧ್ಯಕ್ಷೆ ರೂಪಾ ಎನ್. ಕುರವತ್ತಿ ವಹಿಸಿದ್ದರು.

ಕದಳಿ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು. ರುದ್ರಮ್ಮ ನೀಲಕಂಠಪ್ಪನವರು ಪ್ರಸಾದ ದಾಸೋಹ ಸೇವೆ ಮಾಡಿದರು. ಎಪಿಎಂಸಿ ವಾಯುವಿಹಾರ ಬಳಗದ ಸದಸ್ಯರು, ವೇದಿಕೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವೀರಮ್ಮ, ವಿಜಯಮ್ಮ ಪ್ರಾರ್ಥನೆ, ಸುನಿತಾ ಹೆಚ್.ಎಂ. ಸ್ವಾಗತ, ಮಮತಾ ಹುಲ್ಮನಿ ನಿರೂಪಣೆ, ಕುಸುಮ ನಾಗರಾಜ ಶರಣು ಸಮರ್ಪಣೆ ಮಾಡಿದರು.