ಸವದತ್ತಿ
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಸ್ಮರಣಾರ್ಥವಾಗಿ ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ 2025 ಜುಲೈ 12 ರಿಂದ 14ರ ಮೂರು ದಿನಗಳವರೆಗೆ “ಶಿವಯೋಗ ಸಾಧನಾಪಥ ಕಮ್ಮಟ”ವನ್ನು ಊಟ, ವಸತಿ ಸಮೇತ ಹಮ್ಮಿಕೊಳ್ಳಲಾಗಿದೆ.
12ರಂದು ಬೆಳಗ್ಗೆ 10 ಗಂಟೆಗೆ ಷಟಸ್ಥಲ ಧ್ವಜಾರೋಹಣ, ಉದ್ಘಾಟನೆ ನಡೆಯಲಿದೆ.
ನಂತರ ಮೂರೂ ದಿನ ವಿಷಯಗಳ ಕುರಿತು ಅನುಭಾವ, ಚರ್ಚೆ ನಡೆಯಲಿದೆ.
12ರಂದು,
ಸೃಷ್ಟಿಯ ರಚನೆ – ಭಾರತೀತಾಯಿ ಬೆಂಗಳೂರು, ದೇವನ ನಿಜದ ನೆಲೆ-ಪಿ. ರುದ್ರಪ್ಪ ಸಿಂಧನೂರು, ಯೋಗ ಪರಂಪರೆ ಶಿವಯೋಗದ ಆಯಾಮಗಳು-ಡಾ ದಯಾನಂದ ನೂಲಿ ಚಿಕ್ಕೋಡಿ, ಶರಣರು ಕಂಡ ಶಿವಯೋಗ-ಬಸವಕಿರಣ ಹೊಸಪೇಟೆ, ಭಕ್ತಿ ಪರಂಪರೆ ಮತ್ತು ಶರಣರ ಭಕ್ತಿ-ಪಿ. ರುದ್ರಪ್ಪ ಸಿಂಧನೂರು
13ರಂದು,
ಶಿವಯೋಗ ಪ್ರಾತ್ಯಕ್ಷಿಕೆ-ಪಿ. ರುದ್ರಪ್ಪ ಸಿಂಧನೂರು, ಲಿಂಗಾನುಸಂಧಾನ ಕ್ರಮ-ಡಾ. ದಯಾನಂದ ನೂಲಿ ಚಿಕ್ಕೋಡಿ, ನೂರೊಂದು ಸ್ಥಲ-ಭಾರತೀತಾಯಿ ಬೆಂಗಳೂರು, ಆದಿ ಅನಾದಿ ಸಂಬಂಧ-ಶಿವಾನಂದ ಅರಭಾವಿ ಬೈಲಹೊಂಗಲ, ಇಷ್ಟಲಿಂಗದ ಸ್ವರೂಪ ಮಂಜುನಾಥ ಮಡಿವಾಳರ ನೇಗಿನಹಾಳ, ಲಿಂಗಾಂಗಯೋಗದಲ್ಲಿ ನೋಟ ಕೂಟ-ಪಿ. ರುದ್ರಪ್ಪ ಸಿಂಧನೂರು
14ರಂದು,
ಶಿವಯೋಗ ಪ್ರಾತ್ಯಕ್ಷಿಕೆ-ಪಿ. ರುದ್ರಪ್ಪ ಸಿಂಧನೂರು, ಸಕೀಲಗಳ ಸಂಬಂಧ-ಭಾರತೀತಾಯಿ ಬೆಂಗಳೂರು, ಮಂತ್ರದ ಸ್ವರೂಪ-ಪಿ. ರುದ್ರಪ್ಪ ಸಿಂಧನೂರು, ವಚನಗಳಲ್ಲಿ ಶಿವಯೋಗ-ರಾಯಪ್ಪ ಸಣ್ಣಮನಿ ಮಲ್ಲೂರು, ಲಿಂಗಾಯತ ಧರ್ಮದ ಇತಿಹಾಸ ಮತ್ತು ಸಂಘಟನೆ-ಎಂ.ಎಂ. ಸಂಗೊಳ್ಳಿ ಬೈಲಹೊಂಗಲ.
ಆಸಕ್ತರು ವಿವರಗಳಿಗಾಗಿ 97416 45224, 99727 12798 ಮೊಬೈಲ್ ಸಂಖ್ಯೆಯಲ್ಲಿ ಸಂಘಟಕರನ್ನು ಸಂಪರ್ಕಿಸುವುದು, ಸೂಚನೆಗಳನ್ನು ಪಾಲಿಸಿಕೊಂಡು ಬಂದು ಕಮ್ಮಟದಲ್ಲಿ ಭಾಗವಹಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
