ಹಾವೇರಿ
ಪಟ್ಟಣದ ಪಿ.ಬಿ. ರಸ್ತೆಯ ವಿದ್ಯಾನಗರ ಪಶ್ಚಿಮ ಬಡಾವಣೆಯ, ಮೂರನೇ ಕ್ರಾಸ್ ನಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತವನ್ನು ಸೋಮವಾರ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಉದ್ಘಾಟಿಸಿದರು.

ನರಸೀಪುರ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ, ಹಾವೇರಿ ಅಂಬಿಗರ ಚೌಡಯ್ಯನವರ ಜನ್ಮಭೂಮಿ. ಪ್ರಮುಖ ರಸ್ತೆಯಲ್ಲಿ ಅವರ ಹೆಸರಿನ ವೃತ್ತ ಮಾಡಿದ್ದು ಸಂತೋಷವಾಗಿದೆ. ಎಂದೋ ಆಗಬೇಕಾದ ಕೆಲಸವಿದು. ಬಸವಾದಿ ಶರಣರಿಗೆ, ಸಮಾಜಕ್ಕೆ, ಚೌಡಯ್ಯನವರ ಅಭಿಮಾನಿಗಳಿಗೆ ನೀಡಿದ ಗೌರವ ಇದಾಗಿದೆ ಎಂದು ಭಾವಿಸುವೆ. ಇದಕ್ಕೆ ಸಹಕರಿಸಿದ ಶಾಸಕರು, ನಗರಸಭೆ ಅಧ್ಯಕ್ಷರು, ಉಳಿದೆಲ್ಲರಿಗೂ ಧನ್ಯವಾದಗಳು ಎಂದರು.


ಈ ಸಂದರ್ಭದಲ್ಲಿ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ, ತಾಲೂಕ ಅಧ್ಯಕ್ಷ ಬಸವರಾಜ ಕಳಸೂರ, ನಗರಸಭೆ ಸದಸ್ಯರಾದ ರೇಣುಕಾ ಪುತ್ರನ್, ಮುಖಂಡರಾದ ನಾಗರಾಜ ಬಿಷ್ಟಣ್ಣವರ, ಶಂಕ್ರಪ್ಪ ಅಂಬಿಗೇರ, ಹೊನ್ನಪ್ಪ ದಂಡಿನ, ಶಂಕರ ಸುತಾರ, ಮಂಜುನಾಥ ಪುಡುಗನಾಳ, ಎಚ್.ಕೆ. ಯೋಗರಾಜ, ಪ್ರವೀಣ ವಡ್ನಿಕೊಪ್ಪ, ಪ್ರಕಾಶ ಅಂಬಿಗೇರ, ಶಂಭು ಸಕ್ರಣ್ಣವರ, ಮುತ್ತಣ್ಣ ಅಂಬಿಗೇರ, ಚಿನ್ನಪ್ಪ ಜಾಡರ ಮತ್ತಿತರರು ಉಪಸ್ಥಿತರಿದ್ದರು.