ಬಸವಣ್ಣನವರನ್ನು ಒಪ್ಪದಿದ್ದರೆ ಪಂಚಾಚಾರ್ಯರು ನಶಿಸಿ ಹೋಗುತ್ತಾರೆ: ಶರಣಬಸವ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ

ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 25ನೇ ದಿನದಂದು ಬೆಳಗಾವಿಯ ಬಸವ ಬೆಳವಿಯ ಚರಂತೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ, ಘನ ಮಠದ ಶಿವಯೋಗಿಗಳು ಹೇಳುವಂತೆ ಬಸವಣ್ಣ ಕಾಲತೀತನಾಗಿದ್ದಾರೆ.

ಬಸವಣ್ಣನವರ ಪ್ರಭಾವದಿಂದ ಎಲ್ಲಾ ಜಾತಿ ಮತ ಪಂಥದವರು ಲಿಂಗವಂತ ಧರ್ಮ ಸ್ವೀಕರಿಸಿದ್ದಾರೆ. ಅವರಿಗೆ ಲಿಂಗವಂತ ಧರ್ಮ ಸಂಸ್ಕಾರ ತಿಳಿಸಿಕೊಡಲು, ದೀಕ್ಷೆ ನೀಡಲು ಮುಂದಾಳತ್ವ ವಹಿಸಿದವರು ಹಿರೇಮಠದವರಾದರು. ಇವರು ಲಿಂಗವಂತ ಧಾರ್ಮಿಕ ಹಿರೇತನ ವಹಿಸುತ್ತಿದ್ದರು. ಶಿಕ್ಷಣ ನೀಡುವವರು ಸಾಲಿಮಠದವರಾದರು, ವಿಭೂತಿ ಮಾಡುವವರು ವಿಭೂತಿಮಠದವರಾದರು, ಲಿಂಗದ ಕಂತಿ ಕೊಡುವವರು ಕಂತಿಮಠದವರಾದರು. ಪಂಚಾಚಾರ್ಯರು ಬಸವಣ್ಣನವರು ಸ್ಥಾಪಿಸಿದ ಮಠಗಳಾಗಿವೆ, ಬಸವ ಪೂರ್ವದಲ್ಲಿ ಪಂಚಾಚಾರ್ಯರು ಇರಲಿಲ್ಲ.

ವಿರಕ್ತರು ಅಲ್ಲಮಪ್ರಭು ಸಂಪ್ರದಾಯದವರಾಗಿದ್ದಾರೆ. ಪಂಚಾಚಾರ್ಯರಿಗಿಂತ ವಿರಕ್ತರೇ ಶ್ರೇಷ್ಠರು. ಪಂಚಾಚಾರ್ಯರು ಲಿಂಗಾಯತ ಧರ್ಮವನ್ನು ಹಾಳು ಮಾಡುವವರಾಗಿದ್ದಾರೆ. ಪಂಚಾಚಾರ್ಯರು ಕಪೋಲ ಕಲ್ಪಿತರಾಗಿದ್ದಾರೆ. ಇವರು ಬಸವಣ್ಣನವರನ್ನು ಒಪ್ಪಲಿಲ್ಲವೆಂದರೆ ಅವರು ನಶಿಸಿ ಹೋಗುತ್ತಾರೆ.

ಜಂಗಮರನ್ನು ಬಸವಣ್ಣನವರೇ ಹುಟ್ಟು ಹಾಕಿದವರಾಗಿದ್ದಾರೆ.ಆದರೆ ಜಂಗಮರು ಹಣದಾಸೆಗೆ ಲಿಂಗವಂತ ಸಂಸ್ಕಾರ ಬಿಟ್ಟು ಬ್ರಾಹ್ಮಣರ ಜ್ಯೋತಿಷ್ಯ ಜಾತಕಗಳಿಗೆ ಗಂಟು ಬಿದ್ದರು. ಜಂಗಮರು ಬಸವಪೂರ್ವದವರಲ್ಲ, 12ನೇ ಶತಮಾನದಿಂದಲೇ ಜಂಗಮರು ಬಂದದ್ದರಿಂದ ಜಂಗಮರ ಮನೆತನದ ಹೆಸರುಗಳು ಬಸಯ್ಯ, ಮಡಿವಾಳಯ್ಯ, ಮಾದಯ್ಯನೆಂದು ಇವೆ. ಲಿಂಗಾಯುತರು 12ನೇ ಶತಮಾನದಲ್ಲಿ ಸೂತ್ರರಾಗಿದ್ದರು. ಇವರ ಮನೆಗೆ ಬ್ರಾಹ್ಮಣರು ಬರುತ್ತಿರಲಿಲ್ಲ. ಆದ್ದರಿಂದ ಬಸವಣ್ಣನವರು ಅವರಿಗೆಲ್ಲ ಧಾರ್ಮಿಕ ಸಂಸ್ಕಾರ ನೀಡಲು ಜಂಗಮರನ್ನು ಹುಟ್ಟು ಹಾಕಿದರು.

ಸ್ವಾಮಿಗಳನ್ನು ವಿದ್ವತ್ತಿನಿಂದ ಗುರುತಿಸಬಾರದು, ಅವರ ಆಚಾರ ವಿಚಾರದಿಂದ ಗುರುತಿಸಬೇಕು. ಸ್ವಾಮಿಗಳಿಗೆ ಕಾಶಿಯ ಸಂಸ್ಕೃತ ಅಧ್ಯಯನ ಬೇಕಾಗಿಲ್ಲ, ವಚನ ಅಧ್ಯಯನ ಬೇಕು. ಸ್ವಾಮಿಯಾದವರು ಹೊರಗಡೆ ಯೋಗಿ ಒಳಗಡೆ ಭೋಗಿಯಾಗಿರಬಾರದು. ಜಂಗಮರು ಬಸವಣ್ಣನವರ ತತ್ವ ಹೇಳಿದರೆ ಹಣ ದೊರಕುವುದಿಲ್ಲವೆಂದು ಹೊಟ್ಟೆಪಾಡಿಗೆ ವೇದ, ಆಗಮ ಸಂಪ್ರದಾಯಗಳನ್ನು ಹೇಳಲು ಸತ್ಯನಾರಾಯಣನ ಕಥೆ ಹೇಳಲು ಆರಂಭಿಸಿದರು.

ಜೈನರಲ್ಲಿ, ಲಿಂಗಾಯತರಲ್ಲಿ ಯುವಕರು ಧರ್ಮದ ಕಡೆಗೆ ಹೆಚ್ಚು ವಾಲುತ್ತಿಲ್ಲ. ಬರೀ ವಯಸ್ಸಾದವರು ಮಾತ್ರ ಧರ್ಮದ ಸತ್ಸಂಗಕ್ಕೆ ಬರುತ್ತಿದ್ದಾರೆ. ಇಂದಿನ ಆದಿ ಬಣಜಿಗರು ಹಿಂದಿನ ಶೈವರಾಗಿದ್ದಾರೆ. ದೀಕ್ಷ ಬಣಜಿಗರು ಜೈನರಾಗಿದ್ದಾರೆ. ಬಸವಣ್ಣನವರು ಜೈನ, ಬ್ರಾಹ್ಮಣ, ಶೂದ್ರ, ರೆಡ್ಡಿ, ಕಂಬಾರ, ಕುಂಬಾರ, ಹಡಪದ, ಕುರುಬ ಮುಂತಾದವರನ್ನೆಲ್ಲಾ ಒಂದೆಡೆಗೆ ಸೇರಿಸಿ ಲಿಂಗಾಯಿತ ಧರ್ಮ ಕಟ್ಟಿದರು ಎಂದು ಹೇಳಿದರು.

ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ . ಕೆ.ಎಸ್. ವಾಲಿ, ಬಂಡಪ್ಪ ಕೇಸುರ, ನೀಲಕಂಠ ಪಾಟೀಲ, ಅಣ್ಣಪ್ಪ ಜಾಧವ , ಡಾ. ಬಿ.ಎ. ರುದ್ರವಾಡಿ, ಹನುಮಂತ ಬಿರಾದಾರ, ಚೆನ್ನಮ್ಮ ಬಿರಾದಾರ ಮತ್ತಿತರರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
1 Comment
  • Adi ಅಂದರೆ ಶಕ್ತಿ, ಅನಾದಿ ಅಂದರೆ ಶಿವ, ಅವರು ಜಗತ್ತಿನ ಮೊದಲ ದಂಪತಿಗಳು. ಅವರಿಂದ ಮಾನವ ಸಂಪನ್ಮೂಲ ಸೃಷ್ಠಿ ಮತ್ತು ಅರಮನೆ, ಗುರುಮಾನೆ ರಚನೆಯಾದವು. ರಾಜಾ ಸಾಕ್ಷಾತ ದೇವತಾ, ಗುರು ಮಾರ್ಗದರ್ಶಿ ಮತ್ತು ದೇವರ ದೂತ ನಾಗಿ ಬಂದು, ಜನರಿಗೆ ನಿತ್ಯ ಕರ್ಮ ಮಾಡಲು ಕಲಿಸಿ, ಸದಾಚಾರ ಮತ್ತು ಮಹಿಳೆಯರು ಸನ್ಮಾರ್ಗ ತೋರಿಸಿ ಮುನ್ನಡೆಸಲು ಬಂದರು. ಆದರೆ ಅದು ಮುಂದೆ ವಿವಿಧ ರೀತಿಯಲ್ಲಿ: ವರ್ಗ ಭೇದ, ವರ್ಣ ಭೇದ, ಲಿಂಗ ಭೇದ, ಜಾತಿ ಭೇದ, ಕುಲ ಭೇದ, ಇತ್ಯಾದಿ ಭೇದಗಳನ್ನು ಸೃಷ್ಟಿಸಿ ಮಾಡಿದರು. ಕೇವಲ, ಅರಮನೆ ಗುರುಮಾನೆ ಸೇವೆಗಾಗಿ ಮಾತ್ರ ೧) ರಾಜ ಭಟರು ೨) ಪೂಜಾರಿಗಳು ೩) ವ್ಯಾಪಾರಿ ವರ್ಗ ೪) ಶೂದ್ರರು ಅಂದರೆ ಅಡಿಗೆ, ಬಟ್ಟೆ, ವೈದ್ಯಕೀಯ ಸೇವೆ ಇತ್ಯಾದಿ ೫)ಪಂಚಮರು ಅಂದರೆ ಹೊಲದಲ್ಲಿ ಕಬ್ಬು, ಅಡಿಕೆ, ತೆಂಗು, ಕೃಷಿ ಮಾಡಿ, ಕಾಳು, ಬೆಲ್ಲ, ಜೇನು, ಬೆಳೆದು ಮೇಲ್ವರ್ಗಕ್ಕೆ ಕೊಡುವವರು. ಇದನ್ನು ನೋಡಿ ಮಾನವರ ಶೋಷಣೆ ತಪ್ಪಿಸಲು ಅಪ್ಪ ಬಸವಣ್ಣನವರು, ಆರ್ಥಿಕ ಸಮಾನತೆ,ಲಿಂಗ ಸಮಾನತೆ, ಜಾತಿ ಸಮಾನತೆ ತರಲು ಬಹಳ ಶ್ರಮಿಸಿದರು. ೨೩ ನೇ ವಯಸ್ಸಿನಲ್ಲಿ, ತಮ್ಮ ಮನದ ಕೊನೆಯ ಮೊನೆಯ ಮೇಲೆ ಪರಮ ಜ್ಯೋತಿಯ ಕಂಡು, ಅನುಭವಿಸಲು ಇನ್ನೊಬ್ಬರ ಗುಲಾಮರಾಗಿ ಕೀಳಾಗಿ ಜೀವನ ನಡೆಸದೆ. ಸ್ವತಂತ್ರವಾಗಿ ಬದುಕಲು ಕಲಿಸಿದ ಮಹಾ ಮಾನವತಾವಾದಿ ಅಪ್ಪ ಬಸವಣ್ಣನವರು. ಅವರ ವಚನಗಳನ್ನು ಉಳಿಸಿದ ಫ. ಗು. ಹಳಕಟ್ಟಿ ಶರಣರು, ಬಸವ ವಿರೋಧಿಗಳಿಂದ ಕೊಲೆಯಾದ ಕಲಬುರಗಿ ಶರಣರು ನಿಜವಾಗಿ ವಚನ ಕ್ರಾಂತಿ ಮಾಡಿದ್ದಾರೆಂದು ಹೇಳಲು ಹೆಮ್ಮೆಯಾಗುತ್ತದೆ. ಅವರಿಗೆ ಶುಭಾವಗಲೆಂದೂ ಬಸವನಲ್ಲಿ ಪ್ರೀತಿಸಿ. ಶರಣು ಶರಣಾರ್ಥಿ.

Leave a Reply

Your email address will not be published. Required fields are marked *