ತುಮಕೂರು
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5ರವರೆಗೆ ರಾಜ್ಯಾದ್ಯಂತ ನಡೆಯುವ “ಬಸವ ಸಂಸ್ಕೃತಿ ಅಭಿಯಾನ”ಕ್ಕೆ ತುಮಕೂರಿನ ಪೂಜ್ಯ ಸಿದ್ಧಗಂಗಾ ಮಠದ ಶ್ರೀಗಳನ್ನು ಆಮಂತ್ರಿಸಲಾಯಿತು.
ಒಕ್ಕೂಟದ ಪರವಾಗಿ ಶೇಗುಣಸಿ ಡಾ. ಮಹಾಂತಪ್ರಭು ಸ್ವಾಮೀಜಿ, ಅಥಣಿ ಪ್ರಭು ಚನ್ನಬಸವ ಸ್ವಾಮೀಜಿ, ಬೆಳಗಾವಿ ಅಲ್ಲಮಪ್ರಭು ಸ್ವಾಮೀಜಿ, ಭಾಲ್ಕಿ ಗುರುಬಸವ ಪಟ್ಟದ್ದೇವರು ಆಮಂತ್ರಣ ನೀಡಿದರು.