ಬೆಳಗಾವಿ
ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ “ಬಸವ ಪಂಚಮಿ” ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿ ಮಾತನಾಡಿದರು. ಕೆಪಿಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

350 ಮಕ್ಕಳಿಗೆ ಸಿಹಿ ವಿತರಿಸಿ ಹಾಲು ಕುಡಿಸುವುದರೊಂದಿಗೆ ಮಾನವ ಬಂಧುತ್ವ ವೇದಿಕೆ, ಬಸವಪರ, ಜನಪರ, ಕನ್ನಡಪರ, ದಲಿತಪರ ಸಂಘಟನೆಗಳು ಕಾರ್ಯಕ್ರಮ ನಡೆಸಿದವು.

ಬಸವರಾಜ ರೊಟ್ಟಿ, ಭರಮಣ್ಣ ತೊಳಿ, ಸಂತೋಷ ಗುಡಸ, ಪ್ರಶಾಂತ ಪೂಜಾರಿ, ಆಕಾಶ ಬೇವಿನಕಟ್ಟಿ, ದೀಪಕ್ ಗುಡಗನಟ್ಟಿ, ಮಹದೇವ ತಳವಾರ, ಮಹಾಂತೇಶ ಗುಡಸ, ಸೂರ್ಯಕಾಂತ ಭಾವಿ, ಯುವರಾಜ ತಳವಾರ, ಪ್ರಕಾಶ ಬೆಳಗಾವಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.