ಹುಬ್ಬಳ್ಳಿ
ವಚನ ಶ್ರಾವಣದಂಗವಾಗಿ ಗಂಟಿಕೇರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ಮಕ್ಕಳಿಗೆ, ಶ್ರಾವಣ ಮಾಸದ ಇಷ್ಟಲಿಂಗ ಪೂಜೆ ಮತ್ತು ಸಹಜ ಶಿವಯೋಗದ ಎರಡನೆಯ ಪ್ರಾತ್ಯಕ್ಷಿಕೆಯನ್ನು ಶ್ರೀಗುರು ಬಸವ ಮಂಟಪದ ಅನಿತಾತಾಯಿ ಕುಬಸದ, ಶಾರದಾತಾಯಿ ಪಾಟೀಲ, ಗೌರಮ್ಮತಾಯಿ ಬುರ್ಲಬಡ್ಡಿ ಹಾಗೂ ನಿರ್ಮಲಾತಾಯಿ ಬುರ್ಲಬಡ್ಡಿ ನಡೆಸಿಕೊಟ್ಟರು.

ಈ ಸಂಧರ್ಭದಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳ, ಬಸವೇಶ್ವರ ಭಜನಾ ಮಂಡಳ, ಬಸವೇಶ್ವರ ಯುವಕ ಮಂಡಳದ ಸದಸ್ಯರು ಹಾಜರಿದ್ದರು. ಬಸವೇಶ್ವರ ದೇವಸ್ಥಾನ ಸೇವಾ ಸಮಿತಿಯವರು ಮಕ್ಕಳಿಗೆ ಪ್ರಸಾದ ದಾಸೋಹ ಏರ್ಪಡಿಸಿದ್ದರು.
