ಮಾಚಿದೇವ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ: ಗದ್ದಿಗೌಡರ ಭರವಸೆ

ಬಾಗಲಕೋಟೆ

ಗಣಾಚಾರಿ ಶರಣ ಮಡಿವಾಳ ಮಾಚಿದೇವ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ನೀಡಲಾಗುವುದು ಎಂದು ಸಂಸದ ಪಿ.ಸಿ. ಗದ್ದಿಗೌಡರ ಭರವಸೆ ನೀಡಿದರು.

ನವನಗರದ ಸೆಕ್ಟರ್ ನಂಬರ್ 25ರಲ್ಲಿ ಸೋಮವಾರ ಶರಣ ಮಡಿವಾಳ ಮಾಚಿದೇವ ಬಾಗಲಕೋಟೆ ಜಿಲ್ಲಾ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಜರುಗಿದ ಮಡಿವಾಳ ಮಾಚಿದೇವ ಸಮುದಾಯ ಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‌‌ಸಂಸದರ ನಿಧಿಯಿಂದ ಅನುದಾನ ನೀಡುವುದಾಗಿ ಹೇಳಿದರು.

ಉತ್ತರ ಕರ್ನಾಟಕ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಹಣಮಂತ ಮಡಿವಾಳ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ನೀಡುವಲ್ಲಿ ಪಾಲಕರ ಪಾತ್ರ ಮುಖ್ಯವಾಗಿದೆ. ಕೀಳರಿಮೆ ಬೇಡ. ಸಂಘಟನೆಯಲ್ಲಿ ಮಹಾಶಕ್ತಿ ಅಡಗಿದೆ ಎಂದರು.

ಸಮಾಜದ ಜಿಲ್ಲಾ ಅಧ್ಯಕ್ಷ ಮುತ್ತಪ್ಪ ಮಡಿವಾಳ ಮಾತನಾಡಿ, ಸಮುದಾಯ ಭವನಕ್ಕಾಗಿ ಸಾಕಷ್ಟು ಶ್ರಮಪಟ್ಟು ಜಾಗ ಪಡೆಯಲಾಗಿದೆ. ಅಚ್ಚುಕಟ್ಟಾಗಿ ಸಮುದಾಯ ಭವನ ನಿರ್ಮಾಣ ಮಾಡೋಣ ಎಂದು ಹೇಳಿದರು.

ಶರಣ ಮಡಿವಾಳ ಮಾಚಿದೇವ ಸ್ವಾಮೀಜಿ ಮಾತನಾಡಿ, ಕುಟುಂಬದ ಜತೆಗೆ ಸ್ವಲ್ಪ ಸಮಯವನ್ನು ಸಮಾಜ ಸಂಘಟನೆಗೆ ನೀಡಿದರೆ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.

ಪ್ರಶಾಂತ ಮಡಿವಾಳ, ವಿಜಯಪುರ ಜಿಲ್ಲಾ ಅಧ್ಯಕ್ಷ ಮುತ್ತು ಮಡಿವಾಳರ, ನಿವೃತ್ತ ಡಿವೈಎಸ್ ಪಿ ವಿಜಯಕುಮಾರ ಮಡಿವಾಳರ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ, ಅಂಬರೀಷ ಕೊಳ್ಳಿ, ಗಿರೀಶ ‌ಭಾಂಡಗೆ, ಬಂದೇನವಾಜ್ ಜಮಖಂಡಿ, ಶಿವಾನಂದ ಕುಂಬಾರ, ದುರ್ಗೇಶ ಮಡಿವಾಳರ, ಗಂಗಾಧರ ಮಡಿವಾಳರ, ಭೀಮಸಿ ಮಡಿವಾಳರ, ನಿಂಗಪ್ಪ ಮಡಿವಾಳ ಮತ್ತಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *