ಬೀದರ್
‘ಲಿಂಗಾಯತ’ ಧರ್ಮದಲ್ಲಿ ಹುಟ್ಟಿದವರು ಮಾತ್ರ ಲಿಂಗಾಯತ ಮಠಾಧೀಶರು ಆಗಬೇಕೆಂಬ ನಿಯಮ ಏನಿಲ್ಲ.
ಪೂರ್ವಾಶ್ರಮದಲ್ಲಿ ‘ಮುಸ್ಲಿಂ’ ಇರುವ ವ್ಯಕ್ತಿಯೊಬ್ಬರು ಬಸವತತ್ವ ಅಪ್ಪಿಕೊಂಡು ‘ಲಿಂಗಾಯತ’ ಆದ ಬಳಿಕ ಅವನೊಳಗೆ ರಕ್ತ ಸಂಬಂಧ ಎಂಬುದು ಕಳಚಿ ಆತ ಸ್ವೀಕರಿಸಿದ ಧರ್ಮ ಮಾತ್ರ ಉಳಿಯುತ್ತದೆ.
‘ಲಿಂಗಾಯತ’ ಧರ್ಮದಲ್ಲಿ ಹುಟ್ಟಿದವರು ಮಾತ್ರ ಲಿಂಗಾಯತ ಮಠಾಧೀಶರು ಆಗಬೇಕೆಂಬ ನಿಯಮ ಏನಿಲ್ಲ. ‘ದಯವೇ ಧರ್ಮದ ಮೂಲ’ ಎಂಬುದು ಬಸವತತ್ವ. ಸಿದ್ಧಾಂತ ಒಪ್ಪಿ ಬರುವವರನ್ನು ಅಪ್ಪಿಕೊಳ್ಳುವ ತತ್ವ.
ಶರಣ ಚಳುವಳಿಯಲ್ಲಿ ಎಲ್ಲ ಜಾತಿ ಸಮುದಾಯದವರು ಕಲ್ಯಾಣ ಕ್ರಾಂತಿಯಲ್ಲಿ ಭಾಗವಹಿಸಿದ್ದು ಇತಿಹಾಸ. ಈಗ ಶರಣ ಚಳುವಳಿ ಆಶಯಗಳನ್ನು ಒಪ್ಪದ ಸಮಾಜದಿಂದ ಜಾತ್ಯತೀತ ನಿರೀಕ್ಷಿಸುವುದು ಸಾಧ್ಯ ಇಲ್ಲ.
‘ಇವನಾರವ ಇವನಾರವ ಎನ್ನದೇ ಇವನಮ್ಮವ’ ಎನ್ನುವ ಸಾಲು ಬಹುಶಃ ಅರ್ಥವಾಗದೆ ಒಬ್ಬ ವ್ಯಕ್ತಿಯನ್ನು ಜಾತಿ, ಧರ್ಮದ ನೆಲೆಯಲ್ಲಿ ನೋಡುವವರು ಯಾರೂ ಲಿಂಗಾಯತ ಎಂದು ಹೇಳಿಕೊಳ್ಳಲು ಅರ್ಹರಲ್ಲ.
ಈಗಲೂ ನಾವೆಷ್ಟೇ ‘ತತ್ವ ಅಪ್ಪಿಕೊಂಡರೂ’ ಕೆಲವು ಸಂದರ್ಭಗಳಲ್ಲಿ ನಮ್ಮನ್ನು ಒಪ್ಪಿಕೊಳ್ಳದೆ ಇರುವ ಸಮಾಜವನ್ನು ಕಂಡು ಮರುಕು ಹುಟ್ಟಿಸುತ್ತದೆ. ಇದು ‘ಅಪಮಾನ’ವೇ ಎಂಬ ಭಾವ ಕಾಡುತ್ತದೆ. ಅವ್ರು ‘ನಮ್ಮವರು’ ಇವ್ರು ‘ಬೇರೆಯವರು’ ಎಂಬ ಮನಸ್ಥಿತಿ ಮೊದಲು ತೊಳೆದು ಮಾನವೀಯತೆ ಮೈಗೂಡಿಸಿಕೊಳ್ಳಬೇಕು.
ಇಲ್ಲಿ ಬದ್ಧತೆ ಎಂಬುದು ಬರೀ ಗೌಣ. ಜಾತಿ, ಪ್ರತಿಷ್ಠೆ, ಆಡಂಬರ, ಪ್ರಚಾರ ಅಷ್ಟೇ ಇಲ್ಲಿ ಮುಖ್ಯವಾದವು.
ನಿಮ್ಮ ಲೇಖನದ ಈ ಸತ್ಯ ಅರಿತವರು ಖಂಡಿತಾ ಒಪ್ಪುತ್ತಾರೆ..
ಆದರೆ ಮೊದಲೇ ಬಸವಪ್ರಣೀತ ಲಿಂಗಾಯತ ಒಪ್ಪದೆ ಇರುವವರು ಹಾಗು ಕುತಂತ್ರಿಗಳು ತತ್ವಸಿದ್ದಾಂತಗಳನ್ನ ಅರಿಯದ ಗ್ಲಿಂರಾಮೀಣ ಭಾಗದ ಲಿಂಗಾಯತ ಸಮುದಾಯದ ಸಾಮಾನ್ಯ ಜನರಿಗೆ ಗೊಂದಲ ಮೂಡಿಸುವ ಕೆಲಸ ಮಾಡಬಹುದೆಂದು ತೋರುತ್ತದೆ