ಮಹಾಲಿಂಗಪುರ
‘ವರ್ಷದ 12 ತಿಂಗಳಲ್ಲಿ ಶ್ರಾವಣ ಮಾಸದ ಒಂದು ತಿಂಗಳು ಭಕ್ತಿ ಭಾವೈಕ್ಯದಿಂದ ಕೂಡಿರುತ್ತದೆ. ಭಗವಂತನಲ್ಲಿ ಪ್ರಾರ್ಥಿಸಲು ಒಳ್ಳೆಯ ಸಂದರ್ಭ ಇದಾಗಿದೆ’ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ ಹೇಳಿದರು.
ಸಮೀಪದ ಚಿಮ್ಮಡ ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಹಮ್ಮಿಕೊಂಡಿದ್ದ ಭಕ್ತಗಣ ಪಾದಯಾತ್ರೆಯಲ್ಲಿ ಮಾತನಾಡಿದರು.
‘ಶ್ರಾವಣ ಮಾಸದ ನಿಮಿತ್ತ ಎಲ್ಲ ದೇವಸ್ಥಾನಗಳಲ್ಲಿ ಪೂಜಾದಿ ಕಾರ್ಯಕ್ರಮ ನಡೆಯುತ್ತವೆ. ಒಳ್ಳೆಯ ಮನಸ್ಸು, ಒಳ್ಳೆಯ ಭಾವನೆಯನ್ನು ಇಟ್ಟುಕೊಂಡು ಮುನ್ನಡೆಯೋಣ’ ಎಂದರು.
ದೇವಸ್ಥಾನ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು. ಪ್ರಕಾಶ ಪಾಟೀಲ, ಅವ್ವನಪ್ಪಾ ಮುಗಳಖೋಡ, ಪ್ರಕಾಶ ಪೂಜಾರಿ, ಹಣಮಂತ ಕುಂಬಾರ, ಮಹಾಲಿಂಗ ಕಾಜಗಾರ, ಶಿವಾನಂದ ದಿನ್ನಿಮನಿ, ಪ್ರಕಾಶ ಹಳ್ಳೂರ ಮತ್ತಿತರರು ಇದ್ದರು.