ರಾಯಚೂರು
ಬಸವ ಕೇಂದ್ರದ 165ನೇ ಮಹಾಮನೆ ಕಾರ್ಯಕ್ರಮ ಬಸವೇಶ್ವರ ಕಾಲೋನಿಯ ಪಾರ್ವತಿ ಪಾಟೀಲ ಅವರ ಮನೆಯಲ್ಲಿ ನಡೆಯಿತು.
ಜಯಶ್ರೀ ಮಹಾಜನಶೆಟ್ಟಿ ಅವರು ಮಾತನಾಡಿ, ಬಸವಣ್ಣನವರ ಮಹಾಮನೆಯು ಕಾಯಕ ಜೀವಿಗಳ ಕೇಂದ್ರವಾಗಿತ್ತು. ಸರ್ವಾಚಾರ ಸದ್ಭಕ್ತಿಯ ಮೂಲವಾಗಿತ್ತು ಎಂದು ಹೇಳುತ್ತಾ, ಮಹಾಮನೆಯ ಘನತೆಯನ್ನು ತಿಳಿಸಿದರು.
ವಿಶೇಷವಾಗಿ ಅಲ್ಲಮಪ್ರಭುಗಳು, ಸಿದ್ದರಾ ಮೇಶ್ವರ ಹಾಗೂ ಚನ್ನಬಸವೇಶ್ವರರು ಈ ಮಹಾಮನೆಯ ಬಗ್ಗೆ ತಮ್ಮ ವಚನಗಳಲ್ಲಿ ಅನೇಕ ಕಡೆ ಪ್ರಸ್ತಾಪ ಮಾಡಿದ್ದನ್ನು ನಾವು ಕಾಣುತ್ತೇವೆ. ಈ ಮಹಾಮನೆ ಎಂಬ ಹೆಸರು ಬಂದಿದ್ದೆ ಬಸವಣ್ಣನವರಿಂದ. ಅದಕ್ಕಿಂತ ಹಿಂದೆ ಮಹಾಮನೆ ಕಲ್ಪನೆಗಳು ಇರಲಿಲ್ಲವೆಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶರಣೆ ಮುಕ್ತಾ ನರಕಲದಿನ್ನಿಯವರು, ಪೂಜ್ಯ ಮಹಾಂತ ಅಪ್ಪಗಳ ಜನ್ಮೋತ್ಸವ ನಿಮಿತ್ಯ ಆಚರಿಸಲ್ಪಡುವ, ಅವರ ವ್ಯಸನಮುಕ್ತ ಸಮಾಜ ನಿರ್ಮಾಣ ಕಲ್ಪನೆಯನ್ನು ವಿವರಿಸಿ, ಮಹಾಂತ ಜೋಳಿಗೆ ಬಸವ ಕೇಂದ್ರದಲ್ಲಿ ಇಡಲಾಗಿದ್ದು, ತಮ್ಮ ದುಶ್ಚಟಗಳನ್ನು ಆ ಜೋಳಿಗೆಗೆ ಹಾಕಿ ಆದರ್ಶ ವ್ಯಕ್ತಿಗಳಾಗಬೇಕೆಂದು ವಿನಂತಿಸಿದರು.
ಕೇಂದ್ರದ ಗೌರವಾಧ್ಯಕ್ಷ ಹರವಿ ನಾಗನಗೌಡರು ‘ಬಸವ ಸಂಸ್ಕೃತಿ ಅಭಿಯಾನ’ ಇದೇ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗಲಿದ್ದು, 5 ರಂದು ಬಸವ ರಥದೊಂದಿಗೆ ನಗರಕ್ಕೆ ಆಗಮಿಸಲಿದ್ದು, ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದರು.
ಬಸವ ಕೇಂದ್ರದ ಅಧ್ಯಕ್ಷ ರಾಜನಗೌಡ ಕೋಳೂರು ಅಧ್ಯಕ್ಷೀಯ ನುಡಿಗಳನ್ನಾಡಿ, ಇಂತಹ ಮಹಾಮನೆ ಕಾರ್ಯಕ್ರಮಗಳ ಮೂಲಕ ಬಸವಾದಿ ಶರಣರ ವಚನಗಳನ್ನು, ತತ್ವಾದರ್ಶಗಳನ್ನು ಮನೆಮನೆಗೆ ಮುಟ್ಟಿಸಲು ಸಾಧ್ಯವೆಂದರು.

ವಚನ ಪ್ರಾರ್ಥನೆ ಹಾಗೂ108 ಬಸವ ನಾಮಾವಳಿಯನ್ನು ಅಕ್ಕನ ಬಳಗದ ಸದಸ್ಯರಾದ ಅನ್ನಪೂರ್ಣ ಮೇಟಿ, ಮುಕ್ತಾ ಅಕ್ಕ, ಪೂರ್ಣಿಮಾ, ಡಾ. ಪ್ರಿಯಾಂಕ ಗದ್ವಾಲ್, ಮುನಿಯಮ್ಮ ಯಲ್ಲನಗೌಡ ನಡೆಸಿಕೊಟ್ಟರು.
ಪಾರ್ವತಿ ಪಾಟೀಲ ಸರ್ವರನ್ನು ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು. ಸಿ.ಬಿ. ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾದೇವಪ್ಪ ಏಗನೂರ, ಎಸ್. ಶಂಕರಗೌಡರು, ನಾಗರಾಜ್ ಪಾಟೀಲ, ಬಸವರಾಜ ಕುರಗೋಡ, ಲಲಿತಾ ಮಲ್ಲಿಕಾರ್ಜುನ ಗುಡಿಮನಿ, ನಾಗೇಶ್ವರಪ್ಪ, ಎಎಸ್ಐ, ಸರೋಜ ಮಾಲಿಪಾಟೀಲ, ವೆಂಕಣ್ಣ ಅಶಾಪೂರ, ಉಮಾ ಪಾಟೀಲ, ಚಂದ್ರಕಲಾ, ಪಿ ಸೋಮಶೇಖರ, ನರಸಪ್ಪ, ಬೆಟ್ಟಪ್ಪ ಕಸ್ತೂರಿ, ಶಾಲಿಕಾ ಮೇಡಂ ಮುಂತಾದವರು ಉಪಸ್ಥಿತರಿದ್ದರು.