ಬಸವಕಲ್ಯಾಣದಲ್ಲಿ ದಸರಾ ದರ್ಬಾರ್ ವಿರೋಧಿಸಲು ಭಾಲ್ಕಿ ಶ್ರೀಗಳಿಂದ ಕರೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಬಸವಕಲ್ಯಾಣದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಆಯೋಜಿಸಲಾಗುತ್ತಿರುವ ರಂಭಾಪುರಿ ಶ್ರೀಗಳ ದಸರಾ ದರ್ಬಾರ್ ಕಾರ್ಯಕ್ರಮವನ್ನು ವಿರೋಧಿಸಲು ಭಾಲ್ಕಿ ಶ್ರೀಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.

ಆಗಸ್ಟ್ 17 ಪಟ್ಟಣದ ಬಿ.ಕೆ.ಡಿ.ಬಿ. ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೧-೦೦ ಗಂಟೆಗೆ ನಾಡಿನ ಹಿರಿಯ ಪೂಜ್ಯರ ಸಾನಿಧ್ಯದಲ್ಲಿ ಮುಂದಿನ ನಡೆಯನ್ನು ಚರ್ಚಿಸಲು ಬಸವಭಕ್ತರಿಗೆ ಅಹ್ವಾನ ನೀಡಲಾಗಿದೆ.

ಇಂದು ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ದಸರಾ ದರ್ಬಾರ್ ಖಂಡಿಸಿ ವಿವರವಾದ ಹೇಳಿಕೆ ನೀಡಿದ್ದಾರೆ:

“ಬಸವತತ್ವವನ್ನು ಒಪ್ಪಿಕೊಳ್ಳದೇ ಇರುವ ಕೆಲವರು ಸಮತೆಯ ಕ್ರಾಂತಿಯ ಭೂಮಿಯಾದ ಬಸವಕಲ್ಯಾಣದ ಭೂಮಿಯಲ್ಲಿ ತಮ್ಮ ವ್ಯಕ್ತಿ ಪ್ರತಿಷ್ಠೆಯ ವೈಭವ ಮೆರೆಯಲು ಮುಂದಾಗಿದ್ದಾರೆ.

ದಸರಾ ದರ್ಬಾರ ಹೆಸರಿನಲ್ಲಿ ವಿಶ್ವಗುರು ಬಸವಣ್ಣನವರಿಗೆ ಅವಮಾನಿಸುವ ಹಾಗೂ ಶರಣರ ಲಿಂಗಾಯತ ಧರ್ಮದ ವಿರುದ್ಧ ಕುತಂತ್ರಗಳು ಹೆಣೆಯುತ್ತಿದ್ದಾರೆ. ಭಕ್ತರ ಹೃದಯ ಸಿಂಹಾಸನದಲ್ಲಿ ವಿರಾಜಮಾನವಾಗಲಾರದ ಆಚಾರ್ಯರು, ಅವರ ಹೆಗಲ ಮೇಲೆ ಕುಳಿತುಕೊಳ್ಳುವ ಮಾನವ ಧರ್ಮದ ವಿರುದ್ಧ ಅಟ್ಟಹಾಸ ಮೆರೆಯುತ್ತಿದ್ದಾರೆ.

ಬಸವಕಲ್ಯಾಣದ ಬೀದಿಗಳಲ್ಲಿ ಆಚಾರ್ಯರರ ಅಡ್ಡಪಲ್ಲಕ್ಕಿಯ ಮಾತುಗಳು ಕೇಳಿಬರುತ್ತಿವೆ. ಸಮಾಜ ಕಟ್ಟುವ ಹೊಣೆಗಾರಿಕೆ ಹೊತ್ತುಕೊಂಡವರು ಸಮಾಜ ಒಡೆಯುವ ಹುನ್ನಾರು ನಡೆಸುತ್ತಿದ್ದಾರೆ.

ವಿಶ್ವಗುರು ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದರೂ ಎಂಬ ಹಸಿ ಸುಳ್ಳನ್ನು ಹಬ್ಬಿಸುವ ಆಚಾರ್ಯರು, ಬಸವಕಲ್ಯಾಣದ ಭೂಮಿಯಲ್ಲಿ ಬಂದು ಬಸವತತ್ವಕ್ಕೆ ದ್ರೋಹ ಬಗೆಯುವ ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ.

ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಇನ್ನೂ ಕೆಲವು ಹಿಂದುಳಿದ ಮಹಾಪುರುಷರ ವೇಷಭೂಷಣದಲ್ಲಿ ನಜರ್ ಸಮರ್ಪಣೆ ಮಾಡಿಸಿಕೊಳ್ಳುವ ಮೂಲಕ ನಮ್ಮ ಮಹಾಪುರುಷರಿಗೆ ಅವಮಾನಿಸುವ ಸಾಂಪ್ರದಾಯ ದಸರಾ ದರ್ಬಾರದಲ್ಲಿ ನಡೆಯುತ್ತಾ ಬಂದಿದೆ.

ಈ ಬಸವದ್ರೋಹಿಗಳ ಕುತಂತ್ರದ ವಿರುದ್ಧ ನಾಡಿನ ಬಸವಪರ ಹಾಗೂ ಹಿಂದುಳಿದ ಮಠಗಳ ಪೂಜ್ಯರು, ಸಂಘಟಕರು ಮತ್ತು ಭಕ್ತರು ಒಗ್ಗಟ್ಟಿನಿಂದ ಕೂಡಿಕೊಂಡು ಅವರ ಕುತಂತ್ರಕ್ಕೆ ವಿರುದ್ಧವಾಗಿ ಗಣಾಚಾರದಿಂದ ಸಿಡಿದೇಳುವುದು ಬಹಳ ಅವಶ್ಯವಿದೆ.”

ಸಮಸ್ತ ಭಕ್ತರು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
10 Comments
  • ಇವರು ಬಸವ ಅನ್ಯಾಯಗಳು ಹೀನ ಮನಸ್ಥಿತಿಯ ಸ್ವಾಮಿಗಳು, ಹಾಕಿರುವ ಕಾವಿಗೆ ಅವಮಾನ

  • ಕಲ್ಯಾಣಮ್ಮ ಅಕ್ಕ ಮಹಾದೇವಿ ಗವಿ ಬಂದವರ ಓಣಿ ಬಸವಕಲ್ಯಾಣ says:

    ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿಗೆ ನನ್ನ ಧಿಕ್ಕಾರ ಕಾರಣ ನಮ್ಮ ದೇಶದಲ್ಲಿ ಮಧ್ಯಪಾನ ಧೂಮಪಾನ ಇತ್ಯಾದಿ ದುಷ್ಟಚಗಳು ದಿನೇ ದಿನೆ ಹೆಚ್ಚುತ್ತಿದೆ ನಾನು ಶ್ರೇಷ್ಠ ರೆಂದೂ ಅಡ್ಡಪಲ್ಲಕ್ಕಿಯಲ್ಲಿ ಮೇರೆಯುತ್ತಾರೆ ನೀಜಕ್ಕೂ ಶ್ರೇಷ್ಠರಿದ್ದರೆ ಮಧ್ಯಪಾನ ಧೂಮಪಾನ ಇತ್ಯಾದಿ ಗಳು ಉತ್ಪನ್ನವಾಗದಂತೆ ವಾಗಬೇಕಿತ್ತು. ಬಾರ್ ರು ಬೀರರು ಅಂಗಡಿಗಳು ನಾಶವಾಗಬೇಕಿತ್ತು. ಎಲ್ಲ ಡಂಬಾಚಾರ ಮಹಿಳೆಯರು ಹೆಚ್ಚೆತ್ತುಗೊಳ್ಳಬೇಕು. ಮಹಿಳೆಯರು ಹಿಂತಾಹ ಪೊಳ್ಳು ದರಬಾರ್ ಗೆ ಹೊಗದೆ ತಮ್ಮ ಕಾಯಕ ಗಡೆಘಮನ ಕೊಡಬೇಕು. ಎಂದು ನನ್ನ ವಿನಂತಿ🙏

  • ಮಹಾ ಮಾನವತಾವಾದಿ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಧರ್ಮದ ಸಂಸ್ಥಾಪಕ ಬಸವಣ್ಣನ ನಾಡಿನಲ್ಲಿ ಪವಾಡ ಸದೃಶ್ಯ ಜನ್ಮದ ಹಿನ್ನೆಲೆಯಿರುವ ಮಠಾಧೀಶರ ವೈಭವೋಪೇತ ದರ್ಬಾರ್, ಮನುಷ್ಯರು ಹೆಗಲ ಮೇಲೆ ಹೊರುವ ಅಡ್ಡಪಲ್ಲಕ್ಕಿ ಉತ್ಸವ ನಡೆಸುವುದು ಕೂಡದು. ಇದನ್ನು ನಡೆಯಲು ಬಿಡಬಾರದು.

  • ಮೊದಲನೆಯದಾಗಿ ಹೇಳಬೇಕೆಂದರೆ ದಸರಾ ದರ್ಬಾರ್ ನಮ್ಮ ಲಿಂಗಾಯತರ ಸಂಸ್ಕೃತಿ ಅಲ್ಲ ಅಂದ ಮೇಲೆ ಬಸವಣ್ಣವರ ವಿರೋಧಿಯಾದ ಇಂತಹ ಕಪಟಿ ರಂಭಾಪುರಿಗೆ ಸರಿಯಾಗಿ ಬುದ್ಧಿ ಕಲಿಸುವ ಸಮಯ ಬಂದಿದೆ ಏನೇ ಇದ್ದರೂ ಎಲ್ಲಾ ಮಠಾಧೀಶರು ಒಂದಾಗಿ ಭಾಲ್ಕಿ ಶ್ರೀಗಳ ಕರೆಗೆ ಮನ್ನಣೆ ನೀಡಿ ದಸರಾ ದರ್ಬಾರ್ ನಿಲ್ಲಿಸಲು ಎಲ್ಲರಲ್ಲಿ ಮನವಿ ಮಾಡುತ್ತೇನೆ
    ಶರಣು ಶರಣಾರ್ಥಿ

    • ನಿಮ್ಮ ಸಂಸ್ಕೃತಿ ಅಲ್ಲ ಅನ್ಮೇಲೆ ಸುಮ್ಮನಿರಿ , ಬಸವಣ್ಣ ನವರು ಹೇಳಿದ್ರೆ ಇದಿರು ಹಳಿಯಲು ಬೇಡ , ಇನ್ನೊಬ್ಬರ ನಿಂದಿಸಬೇಡ, ಅದೇರೀತಿ ನೀವು ಯಾವ ಅಂತರಂಗ,ಬಹಿರಂಗ ಶುದ್ಧಿ ಮಾಡುತ್ತೀರಿ????? ಅದೇರೀತಿ ಪರರ ಚಿಂತೆ ನಿಮಗೆಕಯ್ಯ ನಿಮ್ಮ ನಿಮ್ಮ ಮಾನವ ತನುವ ಸಂತಿಸಿಕೊಳ್ಳಿ , so ಇವಾಗ ಹೇಳಿ ಯಾವ ತತ್ವ ವನ್ನು ನೀವು ಪಾಲಿಸುತ್ತಿದಿರೀ ಅಂಥ ???? ಜನ ನಿಮ್ಮ ತರ ಮೂರ್ಕರಲ್ಲ

  • ಭಕ್ತರಿಗೆ ತನ್ನ ಮುಸ್ಲಿಂ ಹಿನ್ನೆಲೆ ತಿಳಿದ ನಂತರ ಲಿಂಗಾಯತ ಶ್ರೀಗಳು ಕರ್ನಾಟಕ ಮಠವನ್ನು ತೊರೆಯಬೇಕಾಯಿತು | ಬೆಂಗಳೂರು ಸುದ್ದಿ – ದಿ ಇಂಡಿಯನ್ ಎಕ್ಸ್‌ಪ್ರೆಸ್ https://share.google/H2Vj3kE3vijhXuUyf. ಮೇಲಿರುವ ಲಿಂಕ್ ನೋಡಿ ಅನಂತರ ಪಂಚ ಪೀಠದವರ bhagge ಮಾತಾಡಿ , ನಿಮ್ಮ ಹುಳುಕನ್ನು ನೀವು ತಿಡಿಕೊಳ್ಳಿ

    • ಅವರು ಮುಸ್ಲಿಂಮರಾಗಿದ್ದು ಬಸವ ತತ್ವಕ್ಕೆ ಮಾರು ಹೋಗಿ ಲಿಂಗಾಯತ ತತ್ವ ಪ್ರಚಾರಕ್ಕೆ ಇಳಿದಿದ್ದರೆ ಯಾರಾದರೂ ಸ್ವಾಗತ ಮಾಡೋಣ, ಅವರ ಕೆಟ್ಟ ಹವ್ಯಾಸಗಳಿಂದ ಅವರನ್ನು ತೆಗೆದಿದ್ದರೆ ಅದನ್ನು ಸ್ವಾಗತಿಸೋಣ.

      ಈ ಪಂಚಪೀಠಧೀಶ್ವರರು ಬೇಡ ಜಂಗಮ ಹೆಸರಲ್ಲಿ‌ ಕೇವಲ ವೀರಶೈವ ಜಂಗಮರೆಗೆ ಮೀಸಲಾತಿ ಕೊಡಿಸಲು ‌೨೦ ವರ್ಷದಿಂದ ತಿಣುಕಾಡಿ ಹಿಂಬಾಗಿಲಿನಿಂದ ದಲಿತರಾಗಿ ಹೊರಟಿದ್ದು ಲಿಂಗಾಯತ ಸಮುದಾಯಕ್ಕೆ ಅವಮಾನವಲ್ವ? ಆಗ ಅಖಂಡ ವೀರಶೈವ ಲಿಂಗಾಯತ ಸಮುದಾಯ ನೆನಪಾಗಲಿಲ್ವ? ಇವರು ಸಮಾಜ ಕಟ್ಟುವವರು ಅಂದ್ರೆ ಯಾರು ನಂಬ್ತಾರೆ ? ಹಾಗಾಗಿ ವೀರಶೈವ ಪಂಚಪೀಠಧೀಶ್ವರರು ಸ್ವಲ್ಪ ಬದಲಾವಣೆ ಮಾಡಿಕೊಂಡು ಆಗಿರುವ ಪ್ರಮಾದ ಸರಿ ಮಾಡಿಕೊಂಡರೆ ಬಲಿಷ್ಟ ಸಮುದಾಯವಾಗಿ ಹೊರಹಮ್ಮಬಹುದು, ಸಮಾಜಕ್ಕೆ ಜನರಿಗೆ ಭಕ್ತರಿಗೆ ಒಳ್ಳೆಯದನ್ನು ಭೋದಿಸುವ ಮಠಾಧೀಶರು‌ ಕೂಡ ಕಿರೀಟ ಧರಿಸುವ, ಅಡ್ಡಪಲ್ಲಕ್ಕಿ ಉತ್ಸವ ಹಟಕ್ಕೆ ಬಿದ್ದಂತೆ ಮಾಡಿಸಿಕೊಂಡು ಹೆಗಲ ಮೇಲೆ ಕುಂತು ಮೆರೆಯುವ ಸಂಪ್ರದಾಯ ಬಿಟ್ಟು ಸರಳ ವಚನ ಸಾಹಿತ್ಯ ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲ ,ಇಷ್ಟಲಿಂಗ ಪೂಜೆ ಅರಿವು, ಆಚಾರ ಹೇಳಲಿ .

      ನಾವು ನೀವು ಇಲ್ಲಿ ಸ್ಪರ್ದೆಗೆ ಬಿದ್ದವರಂತೆ ಕಮೆಂಟ್ ಮಾಡಿದರೆ ಏನಾಗುತ್ತೆ ಹೇಳಿ? ಬದಲಾವಣೆಗೆ ಸ್ವಲ್ಪ ಪಂಚಪೀಠಾಧೀಶ್ವರರೂ ತೆರೆದುಕೊಳ್ಳಬೇಕು, ಅವರ ಕಾಲ್ಪನಿಕ ಪುರಾಣಪುರುಷ ರೇಣುಕಾಚಾರ್ಯರ ಪ್ರಚಾರ ಹೇಳಿಕೆ ನಿಲ್ಲಿಸಿಬಿಟ್ಟರೆ ಅದು ಬಹು ದೊಡ್ಡ ಸಂದೇಶವಾಗುವುದು.

      ಕಲ್ಲಿನಲ್ಲಿ ಹುಟ್ಟಿದ ರೇಣುಕಾಚಾರ್ಯರನ್ನು ಬಿಡುವುದು ಇವರಿಗೆ ಅಷ್ಟು ಸುಲಭವಲ್ಲ, ಲಿಂಗಾಯತರು ಕಾಲ್ಪನಿಕ ರೇಣುಕಾಚಾರ್ಯರನ್ನು ಎಂದೂ ಒಪ್ಪಲಾರರು.

      • Ade ಕೆಲಸವನ್ನು ನೀವು ಮಾಡುತ್ತಿದಿರಲ್ಲ ನಿಮ್ಮ ಕಾಯಕ ಬಿಟ್ಟು ಅದು ಸರಿ ಎಲ್ಲ ಇದು ಸರಿ ಇಲ್ಲ, ಅಂಥ ಜನರನ್ನು ಯಾಕೆ ಗೊಂದಲದಲ್ಲಿ ಸಿಲುಕಿಸುತ್ತಿದಿರೇ??? ನಿಮಗೆ ಬೇಕು ನೀವು ಮಾಡ್ಕೊಳ್ಳಿ , ನೀವು ಬಸವ ತತ್ವ ಪಾಲನೆ, ಬೋಧನೆ ಮಾಡುತ್ತೀರೋ ಮಾಡಿ ಯಾರು ಬೇಡ ಅಂತಾರೆ, ಯಾರು ಅಡ್ಡಿ ಮಾಡಿಲ್ಲ ಆದ್ರೆ ಬೇರೆಯವು ಅವರಿಗೆ ಬೇಕಾದದನ್ನು ಮಾಡುತ್ತೆ ಅದಕ್ಕೆ ನಿಮ್ಮ ಆಕ್ಷೇಪಣೆ ಯಾಕೆ , ನೀವೇನು ತಾಲಿಬಾನಿಗಳ ????

        ಮಹನೀಯರು ನೀವು ಸ್ಪರ್ಧೆ, ದ್ವೇಷ ಮಾಡುತ್ತಿರುವುದು, ನೀವು ಬದಲಾಗಿ ಅನಿಮ್ಮ ಕಾಯಕ ನೀವು ಮಾಡಿ ಬಸವಣ್ಣ ನವರು ಹೇಳಿದ ಹಾಗೆ ಪರರ ಚಿಂತೆ ಬಿಟ್ಟು ನಿಮ್ಮ ತಾನು ಮಾನವ ಸಂತೈಸಿಕೊಳ್ಳಿ!!!!

        ನಿಮಗೆ ಕಾಲ್ಪನಿಕ ಇರಬಹುದು ಸ್ವಾಮಿ, ನಮಗಲ್ಲ ಇತಿಹಾಸ ಎಷ್ಟೂ ಕಲ್ಲಿನ ಶಾಸನಗಳೇ ಹೇಳುತ್ತವೆ , ಅಜರಾಮರವಾಗಿವೆ, ಯಾರೂ ತಿರುಚಿ ಭರೆಧ ಹಾಳೆಗಳನ್ನು ಯಾಕೆ ನಂಬಬೇಕು???? ಲಿಂಗತ ಧರ್ಮ ಸ್ಥಾಪನೆ ಅಂಥ ಯಾವ ಹಾಳೆಗಳಿದೆ???? ಯಾವ ಕಲ್ಲಿನ ಶಾಸನದಲ್ಲಿಯೂ ಇಲ್ಲ!!! ವೀರಶೈವರು ಹಾಗೆ ಗುರು ಇಲ್ಲ ಅಂಥ ಹೇಳಿಕೊಳ್ಳುವ ಧರ್ಮ ಗುರುವನ್ನು ಯಾವುದೇ ಕಾರಣಕ್ಕೂ ಒಪ್ಪುದಿಲ್ಲ.

        ಯಾವುದನ್ನು ಸೃಷ್ಟಿಸಲು ಆಗುವುದಿಲ್ಲವೋ!!!! ಅದನ್ನು ಬದಲಾಯಿಸಲೂ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ!!! ಅದರ ಪರಿಣಾಮವನ್ನು ಸೃಷ್ಟಿಯೇ ನಿಮಗೆ ಹೇಳಿಕೊಡುತ್ತೆ

  • ಶಿವಾಚಾರ್ಯ ಮಠದ ಸ್ವಾಮಿಗಳು ಕೆಲವು ರಾಜಕಾರಣಿಗಳನ್ನು ಮುಂದೇಮಾಡಿ ಈ ಕಳಸುಮೆಲೋಗಾರವನ್ನು ಮಾಡಲುಹೊರಟಿದ್ದಾರೆ. ಇದನ್ನು ನಾವು ಬಲವಾಗಿ ತಡೆಯಬೇಕು.

Leave a Reply

Your email address will not be published. Required fields are marked *