ಬಸವಕಲ್ಯಾಣದಲ್ಲಿ ದಸರಾ ದರ್ಬಾರ್ ಕೈಬಿಡಲು ಧನ್ನೂರ ಆಗ್ರಹ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಬಸವಕಲ್ಯಾಣದಲ್ಲಿ ನಡೆಸಲು ಉದ್ದೇಶಿಸಿರುವ ದಸರಾ ದರ್ಬಾರ್ ಕಾರ್ಯಕ್ರಮ ಕೈಬಿಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.

ಬಸವಕಲ್ಯಾಣವು ಶರಣರು ತತ್ವಕ್ಕಾಗಿ ಪ್ರಾಣಕೊಟ್ಟ ನೆಲ. ಈ ನೆಲದಲ್ಲಿ ಶರಣರ ತತ್ವಕ್ಕೆ ವಿರುದ್ಧವಾದ ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನಮ್ಮದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಪರಂಪರೆಯೇ ಹೊರತು ದರ್ಬಾರ್ ಪರಂಪರೆ ಅಲ್ಲ. ಹೀಗಾಗಿ ದಸರಾ ದರ್ಬಾರ್ ಸಂಘಟಿಸುವ ಯಾವ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದ್ದಾರೆ.

ಆಡಂಬರ, ಬಂಗಾರದ ಕಿರೀಟ ಧರಿಸುವುದು, ಎತ್ತರದಲ್ಲಿ ಕೂರುವುದು, ಅಡ್ಡಪಲ್ಲಕ್ಕಿಯಲ್ಲಿ ಮೆರೆಯುವುದು ನಮ್ಮ ಪರಂಪರೆ ಅಲ್ಲ. ನಮ್ಮದು ಸರಳ, ಜ್ಞಾನವನ್ನೇ ರತ್ನ ಎನ್ನುವ, ಎನಗಿಂತ ಕಿರಿಯರಿಲ್ಲವೆನ್ನುವ, ತತ್ವವನ್ನು ಮೆರೆಸುವ ಪರಂಪರೆ ಎಂದು ಹೇಳಿದ್ದಾರೆ.

ಬಸವಕಲ್ಯಾಣಕ್ಕೆ ಎಲ್ಲರಿಗೂ ಸ್ವಾಗತವಿದೆ. ಆದರೆ, ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಗೆ ಚ್ಯುತಿ ಉಂಟಾಗುವಂತಹ ಕಾರ್ಯಕ್ರಮ ಸಂಘಟಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಂಘಟಕರು ಕೂಡಲೇ ದಸರಾ ದರ್ಬಾರ್ ಕೈಬಿಡಬೇಕು. ಇಲ್ಲವಾದಲ್ಲಿ ಬಸವ ಭಕ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
13 Comments
  • ಶ್ರೀ ಧನ್ನೂರ್ ಸರ್, ನಿಮ್ಮ ನಿಲುವಿಗೆ ನಮ್ಮ ಬೆಂಬಲವಿದೆ. ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್.

    • ಆರಮನೆ, ರಾಜ ಗುರುಗಳು ಅಧಿಕಾರ, ಅರಸೋತ್ತಗೆ ಕಳೆದು ೮೦ ದಶಕಗಳೇ ಕಳೆದವು. ಎತ್ತಿನ ಬಂಡಿ ಹೊಡೆದು ಬಿಟ್ಟಿವೆ. ಕುದುರೆಗಳು ಟಾಂಗಾ ಎಳೆಯುವುದು ಬಿಟ್ಟಿವೆ. ಆದರೆ! ನಮ್ಮ ಮಾನವರು ಮಲ ಹೊರುವ ಕೆಲಸದಿಂದ ಮುಕ್ತಿ ಪಡೆಯುತ್ತಿದ್ದರು. ಆದರೆ ಗುಲಾಮಿ ಪಲ್ಲಕ್ಕಿ ಮೆರವಣಿಗೆ ಮಾಡುವುದು ಬಿಟ್ಟಿಲ್ಲ. ಎಂಥ ವಿಪರ್ಯಾಸ? ಬಸವ ಬಳಗದವರು ಪ್ರತಿ ಕಾರ್ಯಕ್ರಮದಲ್ಲೂ , ಸ್ವಾಮೀಜಿ ಗಳು ವಿರೋಧಿಸಿ ಪೊಲೀಸ್ ಅಧಿಕಾರಿಗಳು ಸಹಾಯ ಪಡೆದು ನಿಲ್ಲಿಸಬೇಕು.🌼🌼👏👏
      ಶರಣು ಶರಣಾರ್ಥಿ.

  • ಬಸವಕಲ್ಯಾಣದಲ್ಲಿ ದಸರಾ ದರ್ಬಾರ್ ನಡೆಸುವುದು ಮತ್ತು ಅಡ್ಡಪಲ್ಲಕ್ಕಿ ಉತ್ಸವ ನಡೆಸುವುದು ಸೂಕ್ತವಲ್ಲ.

    • ಹಾಗಾದ್ರೆ ಪಂಚ ಪೀಠ ಇರುವ ಸ್ಥಳ ಗಳಲ್ಲಿ ನೀವು ನಿಮ್ಮ ಬಸವ ತತ್ವ ಪ್ರಚಾರ ಮಾಡೋದು ಸೂಕ್ತನ??? ಇದು ನಿಮಗೆ ಭಾಸವಾದಿ ಶರಣರು ಕೊಟ್ಟ ಸಂಸ್ಕೃತಿ ನಾಚಿಕೆ ಆಗಬೇಕು ಅವರ ಹೆಸರನ್ನು ದುರ್ಬಳಕೆ ಮಾಡುತ್ತಿರುವ

    • ಸರ್ ಏನೆ ಕಾರಣಕ್ಕೂ ನಡೆಯಬಾರದು
      ನಮ್ಮ ಧರ್ಮ ಬಸವಣ್ಣನ ಧರ್ಮ
      ಲಿಂಗಾಯತ ಧರ್ಮದವರು ಒಗ್ಗಟ್ಟಾಗಿ ಹೋರಾಡಬೇಕು ಎಲ್ ಪೀಠದ ಸ್ವಾಮೀಜಿ ಗಳು ಒಟ್ಟಾಗಿ ಹೋದರೆ ಅದು ನಮ್ಮ ಗೆಲ್ಲುವು
      ಜೈ ಬಸವೇಶ್ವರ

  • ದನ್ನೂರ ರವರ ಈ ಸಂದೇಶ ಅಖಂಡ ಬಸವಭಕ್ತರ ಅಭಿಪ್ರಾಯವಾಗಿದೆ ಪಂಚ ಪೀಠಗಳು ಈ ಸಂದೇಶವನ್ನು ಸ್ಪಸ್ಟವಾಗಿ ಅರಿತುಕೊಳ್ಳಬೆಕು.

    • ಇದಕ್ಕೆ ಹೇಳಿದುದು, ಬಸವ ತಾಲಿಬಾನಿಗಳು , ನೀವು ಯಾರು ಮಾಡಬೇಡಿ ಅಂಥ ಹೇಳೋಕ್ಕೆ !! ಇಲ್ಲಿ ನಿಮ್ಮ ತಾಲಿಬಾನಿ ಹಿಡಿತ ತಪ್ಪುವುದು ಅಂಥ ಇಷ್ಟೆಲ್ಲ ಮಾಡುತ್ತಿರುವುದು??? ನಿಮಗೆ ನಾಚಿಕೆ ಆಗಬೇಕು !!! ಯಾರಾದ್ರೂ ನೀವು ಮಾಡುವ ಕಾಯಕ ಧರ್ಮ ಪ್ರಚಾರಕ್ಕೆ ಅಡ್ಡಿ ಮಾಡುತೀಧ್ರ???? ನಿಮಗೆ ಇತರ ಹೇಡಿತರದ ಮನಸ್ಥಿತೇ , ಅವ್ರು ಮಾಡಿಕೊಳ್ಳಲಿ ಬಿಡಿ

      • ಬಸವ ತತ್ವವನ್ನು ನೀವು ವಿರೋಧಿಸುವ ನಿಮಗೆ ಬಸವಕಲ್ಯಾಣದಲಿ ನಿಮಗೆಲ್ಲ ಏನು ಕೆಲಸ

  • ವೀರ ಶಿವಗಳು ಶನಿಯಂತೆ ಕೇಕೆ ಹಾಕಲೆತ್ನಿಸುತ್ತಿವೆ ಬಸವ ಗಣಾಚಾರಿ ಪಡೆಗಳು ತಕ್ಕ ಪಾಠ ಕಲಿಸಲು ಎದ್ದು ನಿಲ್ಲುತ್ತಿವೆ! ನೋಡೇ ಬಿಡೋಣ ಈ ಶವಗಳ ಆರ್ಭಟ ನಿಲ್ಲಿಸಲು ಎಲ್ಲರೂ ಈಗಿನಿಂದಲೇ ಒಂದಾಗಿ!

  • Nitish R, ಲಿಂಗಾಯತ ಧರ್ಮ & ವೀರಶೖವ ಧರ್ಮ ಎರಡೂ ಒಂದೇ ಯಂಬುದಾಗಿ ನಿಮ್ಮ ಪಂಚಪೀಠಗಳು ಹೆಳುತ್ತಿವೆ,ಆದ್ದರಿಂದ ನಾವು ಬಸವಣ್ಣನವರ ಸುಧಾರಿತ ಆಚರಣೆಗಳನ್ನು ಬೆಂಬಲಿಸಬೇಕಲ್ಲವೆ?
    ಇಲ್ಲವಾದರೆ ವೀರಶೖವ & ಲಿಂಗಾಯತ ಎರಡೂ ಬೆರೆಬೆರೆ ಯಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಿ.

  • ಲಿಂಗಾಯತ ಧರ್ಮ ವನ್ನು ಸಂಘಟಿಸಲು ಒಂದಾಗಬೇಕಿದೆ. Nitish ರವರೇ, ಪಂಚಾಪೀಠದವರು ಲಿಂಗಾಯತರೇ. ಅವರು ಹೇಳುವ ತಮ್ಮ ಧರ್ಮದ ಪ್ರಾಚೀನತೆ ಸುಳ್ಳು ಪುರಾಣದಗಳು. ಸತ್ಯದ ಮಾರ್ಗದಲ್ಲಿ ನಡೆಯಬಕು, ವೀರಶೈವ ಇದು 15ನೆಯ ಶತಮಾನದ ನಂತರ ರೂಢಿಗೆ ಬಂದದ್ದು. ನೆನಪಿಡಿ ತಾಳಿಬನಿ ಗಳೆಂದು ಯಾರನ್ನು ಸಂಬಂಧಿಸಿ ಹೇಳಲುಹೊರಟಿದ್ದೀರಿ?.

Leave a Reply

Your email address will not be published. Required fields are marked *