ಶರಣ ಮಾರ್ಗದಲ್ಲಿ ನಡೆದ ಭಾವೈಕ್ಯತೆಯ ಹರಿಕಾರ ತಿಂಥಿಣಿ ಮೌನೇಶ್ವರ

ಬೆಳಗಾವಿ

ಬಸವಾದಿ ಶರಣರಿಂದ ಪ್ರೇರಣೆ ಪಡೆದು, ಅವರ ವಚನಗಳನ್ನು ಪಾಲಿಸುತ್ತ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹರಿಕಾರರಾಗಿ ಎಲ್ಲರಲ್ಲೂ ಅರಿವು ಮೂಡಿಸಿದ ಶರಣ ತಿಂಥಿಣಿ ಮೌನೇಶ್ವರರು ಎಂದು ಡಾ. ದಾನಮ್ಮ ಝಳಕಿ ಹೇಳಿದರು.

ಲಿಂಗಾಯತ ಸಂಘಟನೆ ವತಿಯಿಂದ, ಫ. ಗು. ಹಳಕಟ್ಟಿ ಭವನದಲ್ಲಿ ರವಿವಾರ ನಡೆದ ಶ್ರಾವಣ ಸತ್ಸಂಗ ಕಾರ್ಯಕ್ರಮದಲ್ಲಿ ತಿಂಥಿಣಿ ಮೌನೇಶ್ವರ ಶರಣರ ಕುರಿತು ಅವರು ಮಾತನಾಡಿದರು.

ಅರಿವಿನ ಕಲೆಯಿಂದ ಬದುಕಿರಿ ಮತ್ತು ನೈತಿಕತೆಯ ಜೀವನ ಸಾಗಿಸಿ ಎಂದು ಕಾಯಕ ನಿಷ್ಠೆ ಪಾಲಿಸುವುದರ ಜೊತೆಗೆ, ಸರ್ವರನ್ನು ಒಂದೆಡೆ ಸೇರಿಸಿ ಸಮತಾಭಾವ ನಿರ್ಮಿಸುವಲ್ಲಿ ಮಹಾನ್ ಕಾರ್ಯ ಮಾಡಿದ ಸತ್ಪುರುಷರ ಕಾಯಕ ಬಲು ದೊಡ್ಡದು ಎಂದರು.

ನೈತಿಕತೆಗೆ ಎಲ್ಲರೂ ಬೆಲೆ ಕೊಡುವಂತಾಗಬೇಕು. ಜಾತಿ ಬಿಟ್ಟು ಕಾಯಕ, ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆ ಕೊಡುವ ಸಂಪ್ರದಾಯ ಬೆಳೆಯಲಿ ಎಂದ ಮೌನೇಶ್ವರರ ಜೀವನ ಕ್ರಮ ಮತ್ತು ಶರಣರ ವಚನಗಳನ್ನು ಪರಿಪಾಲನೆ ಮಾಡುತ್ತಾ ಜೀವನವನ್ನು ಪಾವನಗೊಳಿಸೋಣ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ, ಶರಣರ ಅನುಭವದ ನುಡಿಗಳನ್ನು ಜೀವನದಲ್ಲಿ ನಾವೆಲ್ಲ ರೂಢಿಸಿಕೊಳ್ಳೋಣ ಎಂದರು.

ಆರಂಭದಲ್ಲಿ ಸುರೇಶ ನರಗುಂದ ಸ್ವಾಗತಿಸಿದರು. ಕಾರ್ಯದರ್ಶಿ ಸಂಗಮೇಶ ಅರಳಿ ನಿರೂಪಿಸಿದರು. ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಸತೀಶ ಪಾಟೀಲ, ಶಶಿಭೂಷಣ ಪಾಟೀಲ, ಶಿವಾನಂದ ತಲ್ಲೂರ ಮಹದೇವ ಕೆಂಪಿಗೌಡರ, ಬಸವರಾಜ ಬಿಜ್ಜರಗಿ, ಅನಿಲ ರಘಶೆಟ್ಟಿ, ವಿರೂಪಾಕ್ಷಿ ದೊಡ್ಡಮನಿ, ಬಸವರಾಜ ಕರಡಿಮಠ, ಸದಾಶಿವ ದೇವರಮನಿ, ಬಸವರಾಜ ಮತ್ತಿಕಟ್ಟಿ, ಕುಮಾರ ಪಾಟೀಲ, ಬಿ.ಪಿ.ಜೇವಣಿ, ಆನಂದ ಕಕಿ೯, ಪ್ರೀತಿ ಮಠದ, ಶಂಕರ ಗುಡಸ, ವಿ. ಕೆ. ಪಾಟೀಲ, ಆನಂದ ಕರ್ಕಿ, ಸುಜಾತ ಮತ್ತಿಕಟ್ಟಿ ಮಹಾದೇವಿ ಘಾಟೆ, ಶೋಭಾ ದೇಯನ್ನವರ, ವಿದ್ಯಾ ಕರ್ಕಿ ಸುವರ್ಣ ಗುಡಸ ಸೇರಿದಂತೆ ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *