ಯಲಬುರ್ಗಾ
ತಾಲೂಕಿನ ಮರಕಟ್ಟ ಗ್ರಾಮದ ಬಸವ ಕೇಂದ್ರದ ವತಿಯಿಂದ ಶ್ರಾವಣ ಮಾಸದ ನಿಮಿತ್ತವಾಗಿ ‘ವಚನಗಳ ನಡಿಗೆ ಮನೆ ಮನಗಳ ಕಡೆಗೆ’ ಎಂಬ ಕಾಯ೯ಕ್ರಮ, ೨ನೇ ವಷ೯ದ ೧೯ ನೇ ದಿನದ್ದು, ಶರಣೆ ವನಜಾಕ್ಷಮ್ಮ ಶರಣಪ್ಪ ಮಾಲಿ ಇವರ ಮನೆಯಲ್ಲಿ ನಡೆಯಿತು.

ಬಸವ ಕೇಂದ್ರದ ಅದ್ಯಕ್ಷರಾದ ಶರಣ ಅಮರೇಶಪ್ಪ ಬಳ್ಳಾರಿ ಇವರು ಶಿವಯೋಗಿ ಸಿದ್ದರಾಮ ಶರಣರ ವಚನ, ಗುರುವಿಗೆ ತನುವ ಕೊಟ್ಟು ಗುರುವಾದನಯ್ಯ ಬಸವಣ್ಣ ಎಂಬ ವಚನ ಚಿಂತನೆಯನ್ನು ಮಾಡಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಬಸವ ಕೇಂದ್ರದ ಗೌರವಾಧ್ಯಕ್ಷ ಹನಮಗೌಡ ಬಳ್ಳಾರಿ ಮರಕಟ್ಟ ವಹಿಸಿದ್ದರು.

ಹನಮೇಶ ಗೌಡ್ರ ಸಾಮೂಹಿಕ ವಚನ ಪ್ರಾಥ೯ನೆ ಮಾಡಿದರು. ಮಹಾ ಲಿಂಗಪ್ಪ ಮೇಟಿ ಇವರು ವಚನ ಗಾಯನ ಮಾಡಿದರು. ಹನಮಂತಪ್ಪ ಹುಣಿಸಿಹಾಳ ಕಾಯ೯ಕ್ರಮದ ನಿರೂಪಣೆ ಮಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು.