ಇವು ಲಿಂಗಾಯತರ ಸಂಘರ್ಷದ ದಿನಗಳು: ಬಸವ ಸಂಜೆಯಲ್ಲಿ ಮಹತ್ವದ ಚರ್ಚೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಲಿಂಗಾಯತ ಸಮಾಜವನ್ನು ದಾರಿ ತಪ್ಪಿಸಲು ಸರಣಿ ಪ್ರಯತ್ನಗಳು ನಡೆಯುತ್ತಿವೆ.’

ಬೆಂಗಳೂರು

ಇಂದು ನಗರದಲ್ಲಿ ಆಯೋಜಿತವಾಗಿರುವ ಬಸವ ಸಂಜೆ ಕಾರ್ಯಕ್ರಮದಲ್ಲಿ ಲಿಂಗಾಯತ ಸಮಾಜ ಎದುರಿಸುತ್ತಿರುವ ಸಂಘರ್ಷಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯಲಿದೆ.

‘ಬಸವ ತತ್ವ – ಸಂಘರ್ಷ, ಸವಾಲು, ಸಾಧ್ಯತೆ’ ವಿಷಯದ ಮೇಲೆ ನಡೆಯಲಿರುವ ಚರ್ಚಾ ಗೋಷ್ಠಿಯಲ್ಲಿ ಹಿರಿಯ ಶರಣತತ್ವ ಚಿಂತಕರಾದ ಡಾ. ಜೆ.ಎಸ್. ಪಾಟೀಲ್, ಪಿ ರುದ್ರಪ್ಪ ಮತ್ತು ಡಾ. ರಾಜಶೇಖರ ನಾರನಾಳ ಭಾಗವಹಿಸಲಿದ್ದಾರೆ.

ಸಂವಾದವನ್ನು ಡಾ ಎಚ್ ಎಂ ಸೋಮಶೇಖರಪ್ಪ ನಡೆಸಿಕೊಡಲಿದ್ದಾರೆ. ಶಾಂತಕುಮಾರ ಹರ್ಲಾಪುರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಬಸವನಗುಡಿಯಲ್ಲಿರುವ ಸಭಾಂಗಣದಲ್ಲಿ ನಡೆಯಲಿರುವ ಬಸವ ಸಂಜೆ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಎಂ. ಎಂ. ಕಲಬುರ್ಗಿ ಹುತಾತ್ಮರಾದ 10ನೇ ವರ್ಷದ ಸಂದರ್ಭದಲ್ಲಿ ವಿಶೇಷ ಉಪನ್ಯಾಸವೂ ನಡೆಯಲಿದೆ.

“ಕಳೆದ ಒಂದು ಒಂದು ವರ್ಷಗಳಲ್ಲಿ ಪ್ರತಿ ತಿಂಗಳು ಲಿಂಗಾಯತ ಸಮಾಜವನ್ನು ಟಾರ್ಗೆಟ್ ಮಾಡುವಂತಹ ಒಂದಲ್ಲಾ ಒಂದು ಬೆಳವಣಿಗೆಗಳು ನಡೆಯುತ್ತಾ ಬಂದಿವೆ. ಅವುಗಳನ್ನು ಒಂದು ಸಮುದಾಯವಾಗಿ ನಾವು ಅರ್ಥ ಮಾಡಿಕೊಳ್ಳಲು ಈ ಚರ್ಚಾ ಗೋಷ್ಠಿ ನೆರವಾಗಲಿದೆ,” ಎಂದು ಸೋಮಶೇಖರಪ್ಪ ಹೇಳಿದರು.

ವಚನ ದರ್ಶನ, ಶರಣರ ಶಕ್ತಿ, ಕುಂಭಮೇಳ, ರೇಣುಕಾಚಾರ್ಯ ಜಯಂತಿ ಮತ್ತು ಫೋಟೋ ವಿವಾದ, ಯತ್ನಾಳ, ಕನ್ನೇರಿ ಶ್ರೀಗಳ ಹೇಳಿಕೆಗಳು, ಸೇಡಂನಲ್ಲಿ ಸಂಘ ಪರಿವಾರದ ಉತ್ಸವ, ಶಂಕರ ಬಿದರಿ ಸುತ್ತೋಲೆ, ಪಂಚಪೀಠ ಶ್ರೀಗಳ ಚಟುವಟಿಕೆಗಳು, ದಸರಾ ದರ್ಬಾರ್, ಕೂಡಲ ಸಂಗಮದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವ – ಹೀಗೆ ಲಿಂಗಾಯತ ಸಮಾಜವನ್ನು ದಾರಿ ತಪ್ಪಿಸಲು ಸರಣಿ ಪ್ರಯತ್ನಗಳು ನಡೆಯುತ್ತಿವೆ.

ಈ ವರ್ಷ ಕಟ್ಟರ್ ಲಿಂಗಾಯತ, ಬಸವ ತಾಲಿಬಾನ್ ಅನ್ನೋ ಹೊಸ ಪದಗಳೂ ಸೃಷ್ಟಿಯಾದವು.

ಈ ಬೆಳವಣಿಗೆಗಳನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕು. ಇವುಗಳಿಗೆ ನಾವು ಹೇಗೆ ಪ್ರತಿಕ್ರಿಯೆ ನೀಡಿದ್ದೇವೆ, ಮುಂದಿನ ದಾರಿ ಏನು. ಇವುಗಳ ಬಗ್ಗೆ ಸಂವಾದ ನಡೆಯಲಿದೆ. ಎಲ್ಲರು ಬಂದು ಭಾಗವಹಿಸಬೇಕು, ಸೋಮಶೇಖರಪ್ಪ ಹೇಳಿದರು.

ದಿನಾಂಕ – ಆಗಸ್ಟ್ 17
ಸಮಯ – ಸಂಜೆ 4ರಿಂದ 8
ಸ್ಥಳ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ, ಬಸವನಗುಡಿ, ಬೆಂಗಳೂರು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
6 Comments
  • ಕುತಂತ್ರಗಳ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಖಂಡಿತಾ ಬೇಕಿತ್ತು. ಅದು ಸರಿಯಾದ ಸಮಯದಲ್ಲಿ ನಡೆಯುತ್ತಿದೆ ಅನಿಸುತ್ತಿದೆ. ಈ ಕಾರ್ಯಕ್ರಮ ಆಯೋಜನೆಗೆ ಶ್ರಮಿಸುತ್ತಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು

    • ಆರಮನೆ, ರಾಜ ಗುರುಗಳು ಅಧಿಕಾರ, ಅರಸೋತ್ತಗೆ ಕಳೆದು ೮೦ ದಶಕಗಳೇ ಕಳೆದವು. ಎತ್ತಿನ ಬಂಡಿ ಹೊಡೆದು ಬಿಟ್ಟಿವೆ. ಕುದುರೆಗಳು ಟಾಂಗಾ ಎಳೆಯುವುದು ಬಿಟ್ಟಿವೆ. ಆದರೆ! ನಮ್ಮ ಮಾನವರು ಮಲ ಹೊರುವ ಕೆಲಸದಿಂದ ಮುಕ್ತಿ ಪಡೆಯುತ್ತಿದ್ದರು. ಆದರೆ ಗುಲಾಮಿ ಪಲ್ಲಕ್ಕಿ ಮೆರವಣಿಗೆ ಮಾಡುವುದು ಬಿಟ್ಟಿಲ್ಲ. ಎಂಥ ವಿಪರ್ಯಾಸ? ಬಸವ ಬಳಗದವರು ಪ್ರತಿ ಕಾರ್ಯಕ್ರಮದಲ್ಲೂ , ಸ್ವಾಮೀಜಿ ಗಳು ವಿರೋಧಿಸಿ ಪೊಲೀಸ್ ಅಧಿಕಾರಿಗಳು ಸಹಾಯ ಪಡೆದು ನಿಲ್ಲಿಸಬೇಕು.🌼🌼👏👏
      ಶರಣು ಶರಣಾರ್ಥಿ.

  • ಅಪ್ಪ ಬಸವಣ್ಣ ಮತ್ತು ಬಸವತತ್ವವನ್ನು ಹಿಡಿದಿಡಲು ಮತ್ತು ಮರೆಮಾಚಲು ಸಾದ್ಯವಿಲ್ಲ ಅದೊಂದು ಪ್ರಕರವಾದ ನಿಜಬೆಳಕು, ಮಾನವಕುಲದ ಬದುಕಿನ ಬೆಳಗು. ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿಯಿಂದ ನಡೆದು ಬಂದ ಹುನ್ನಾರ ಷಡ್ಯಂತ್ರ ಫಲಸಿಲ್ಲ ಏಕೆಂದರೆ ಮುಷ್ಟಿಯಿಂದ ಸೂರ್ಯನ ಮುಚ್ಚಿಡುವ ಪ್ರಯತ್ನದಂತೆ ನಿಷ್ಪಲ. ಪಂಚಪೀಠದಲ್ಲಿರುವ ಪಂಚಾಚಾರ್ಯರಲ್ಲಿ ಒಬ್ಬರಾದವರು ಧಾರವಾಡ ಮುರಘಾಮಠದಲ್ಲಿ ಬಸವಾ ಬಸವಾ ನಾಮ ಜಪಿಸಿ ಬೆಳೆದವರು ಮರೆತು ಮಾತನಾಡುತ್ತಾರೆ.

    • ಬಸವಣ್ಣನವರ ಹಾಗೂ ಬಸವಾದಿ ಶಿವಶರಣರ ಮತ್ತು ವಚನಗಳ, ಕನ್ನಡ ಧರ್ಮ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಬಗ್ಗೆ ಕೆಟ್ಟದ್ದನ್ನು ಮಾತನಾಡುವರು….. ಕರ್ನಾಟಕದಲ್ಲಿ ಹುಟ್ಟಿದ್ದು ಮಹಾ ಅಯೋಗ್ಯರು ಮತ್ತು ಕನ್ನಡ ಮಣ್ಣಿನಲ್ಲಿ ಅವರ ತಂದೆ ತಾಯಿಗಳ ಹೆಸರು ಹೇಳಲು ನಾಲಾಯಕರು,,,, ತಮ್ಮ ಸ್ವಾರ್ಥ ಆಸೆಗಾಗಿ,ಸಾಧನೆಗಾಗಿ,ಬಸವಣ್ಣನವರ ಬಗ್ಗೆ ಹಾಗೂ ಇಲ್ಲಿಯ ಜನರ ಭಾವನೆಗಳಿಗೆ ದಕ್ಕೆ ತರುವ ಮಾನಸಿಕ ಸ್ಥಿತಿಯ ಭಯೊತ್ಪಾಧಕರು…. ಇವರಿಗೆ ಭಗವಂತನು ಒಳ್ಳೆಯ ಬುದ್ದಿ ಕೊಡಲಿ… ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *