ಬೀದರ
ಜಗತ್ತಿಗೆ ಹೊಸ ಮಾನವ ಮೌಲ್ಯಗಳನ್ನು ಕೊಟ್ಟು ಮಾನವ ಸಮಾನತೆಯ ತತ್ವವನ್ನು ಸಾರಿದ ಪವಿತ್ರ ಬಸವಕಲ್ಯಾಣದ ಭೂಮಿಯಲ್ಲಿ ವ್ಯಕ್ತಿ ಆಡಂಬರ ಪ್ರದರ್ಶಿಸುವ, ಅಸಮಾನತೆಯ ನಿರ್ಲಜ್ಞ ಪ್ರದರ್ಶನ ಮಾಡುವ, ಮಾನವನ ಹಕ್ಕುಗಳನ್ನು ಕಾಲ್ತಳದಲ್ಲಿಟ್ಟು ತುಳಿಯುವ ದಸರಾ ದರ್ಭಾರದ ಹೆಸರಿನಲ್ಲಿ ಪ್ರಸ್ತಾವಿತ ಅಡ್ಡಪಲ್ಲಕ್ಕಿಯ ಮೆರವಣಿಗೆ ನಡೆಸುತ್ತಿರುವ ಶ್ರೀ ರಂಭಾಪುರಿ ಸ್ವಾಮಿಗಳ ಕೃತ್ಯ ಖಂಡನೀಯವಾಗಿದೆ.
ಅದನ್ನು ತಡೆಹಿಡಿಯುವ ಎಲ್ಲಾ ಪ್ರಯತ್ನಗಳನ್ನು ಮಾಡಿ ಮಾನವೀಯತೆಯನ್ನು ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿಶ್ಚಯಿಸಲು ಆಗಸ್ಟ್ 17 ಬೆಳಗೆ ೧೧-೦೦ ಗಂಟೆಗೆ ಬಸವಕಲ್ಯಾಣದ ಬಿ.ಕೆ.ಡಿ.ಬಿ. ಕಲ್ಯಾಣ ಮಂಟಪದಲ್ಲಿ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಬಸವ ಭಕ್ತರ ಸಭೆ ಕರೆಯಲಾಗಿದೆ.
ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಮಾನವ ಮೌಲ್ಯಪರ ಬಾಂಧವರು ಸಭೆಯಲ್ಲಿ ಉಪಸ್ಥಿತರಿರಬೇಕೆಂದು ಬೀದರ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಪ್ರಕಟಣೆಯ ಮೂಲಕ ಕೋರಿದ್ದಾರೆ.
ದಸರಾ ದರ್ಬಾರ್ ಕಾರ್ಯಕ್ರಮ ಮಾಡಲು ಬಸವ ಅಭೀಮಾನಿಗಳು ಅವಕಾಶ ಕೊಡಬಾರದು
ಆರಮನೆ, ರಾಜ ಗುರುಗಳು ಅಧಿಕಾರ, ಅರಸೋತ್ತಗೆ ಕಳೆದು ೮೦ ದಶಕಗಳೇ ಕಳೆದವು. ಎತ್ತಿನ ಬಂಡಿ ಹೊಡೆದು ಬಿಟ್ಟಿವೆ. ಕುದುರೆಗಳು ಟಾಂಗಾ ಎಳೆಯುವುದು ಬಿಟ್ಟಿವೆ. ಆದರೆ! ನಮ್ಮ ಮಾನವರು ಮಲ ಹೊರುವ ಕೆಲಸದಿಂದ ಮುಕ್ತಿ ಪಡೆಯುತ್ತಿದ್ದರು. ಆದರೆ ಗುಲಾಮಿ ಪಲ್ಲಕ್ಕಿ ಮೆರವಣಿಗೆ ಮಾಡುವುದು ಬಿಟ್ಟಿಲ್ಲ. ಎಂಥ ವಿಪರ್ಯಾಸ? ಬಸವ ಬಳಗದವರು ಪ್ರತಿ ಕಾರ್ಯಕ್ರಮದಲ್ಲೂ , ಸ್ವಾಮೀಜಿ ಗಳು ವಿರೋಧಿಸಿ ಪೊಲೀಸ್ ಅಧಿಕಾರಿಗಳು ಸಹಾಯ ಪಡೆದು ನಿಲ್ಲಿಸಬೇಕು.🌼🌼👏👏
ಶರಣು ಶರಣಾರ್ಥಿ.