ಬಸವಕಲ್ಯಾಣ
ವಿಶ್ವಮಾನ್ಯ ವಚನ ಸಂದೇಶಗಳನ್ನು ನೀಡಿದ ಕಾಯಕ ಭೂಮಿಯಲ್ಲಿ, ಗುರು ಬಸವಣ್ಣನವರಿಗೆ ಮತ್ತು ವಚನ ಸಾಹಿತ್ಯಕ್ಕೆ, ಧಕ್ಕೆಯಂಟು ಮಾಡುವ, ಅವಮಾನ ಮಾಡುವಂತಹ ಯಾವುದೇ ಕಾರ್ಯಕ್ರಮಗಳನ್ನು ಬಸವ ಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವದಳಗಳು ಬಲವಾಗಿ ಖಂಡಿಸುತ್ತವೆ ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಶ್ರೀ ಜಗದ್ಗುರು ಮಾತೆ ಡಾ. ಗಂಗಾದೇವಿ ತಿಳಿಸಿದ್ದಾರೆ.
ದಾವಣಗೆರೆಯ ಪಂಚಪೀಠಾಧೀಶರ ಶೃಂಗಸಭೆಯಲ್ಲಿ ಬಸವಣ್ಣನವರ ಇತಿಹಾಸಕ್ಕೆ ಮಸಿ ಬಳಿಯುವಂತಹ ಹೇಳಿಕೆ ನೀಡಿ, ಸಮಾಜದಿಂದ ಛೀಮಾರಿಗೊಳಗಾಗಿದ್ದ ರಂಭಾಪುರಿ ಶ್ರೀಗಳು, ಬಸವಕಲ್ಯಾಣದಲ್ಲಿ ದಸರಾ ದರ್ಬಾರ್ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಮಾಡಿಕೊಳ್ಳುವ ನೆಪದಲ್ಲಿ, ಮತ್ತೊಮ್ಮೆ ಗುರುಬಸವಣ್ಣನವರಿಗೆ ಅವಮಾನ, ಅಪಚಾರ ಮಾಡಲು ಹೊರಟಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ದಸರಾ ದರ್ಬಾರ್ ಹಾಗೂ ಅಪ್ಪಪಲ್ಲಕ್ಕಿ ಉತ್ಸವದ ವಿರುದ್ಧ ಪ್ರತಿಭಟನಸಲೆಂದು ಬೀದರ ಜಿಲ್ಲೆಯ ಮಠಾಧೀಶರು, ಪೂಜ್ಯರು ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ಇದೇ ಅ. 17ರಂದು ಬೆಳಗ್ಗೆ 11ಕ್ಕೆ ಬಸವಕಲ್ಯಾಣ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದೆ.
ಬಸವಪರ ಸಂಘಟನೆಗಳ ಪದಾಧಿಕಾರಿಗಳು, ಬಸವಾಭಿಮಾನಿಗಳು ಮತ್ತು ರಾಷ್ಟ್ರೀಯ ಬಸವದಳಗಳ ಎಲ್ಲಾ ಶಾಖೆಗಳ ಮುಖಂಡರು ತಪ್ಪದೇ ಸಭೆಯಲ್ಲಿ ಭಾಗವಹಿಸಿ ವಿರೋಧ ವ್ಯಕ್ತಪಡಿಸುವ ಮೂಲಕ ಗುರುಬಸವಣ್ಣನವರ ಹಾಗೂ ಲಿಂಗಾಯತ ಧರ್ಮದ ಹಿತರಕ್ಷಣೆ ಕಡೆಗೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
I don’t understand what is the problem with addapallakki and dasara darbar if that is ok for followers. India is a secular country every one has right to profess their faith
ಎಲ್ಲಾ ಬಸವಭಿಮಗಳು ಈ ಹೋರಾಟದಲ್ಲಿ ಭಾಗವಹಿಸಿ. ಮಾತಾಜಿಯವರ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲಿರಿ.
ಬಸವ ತತ್ವ ಮುಖ್ಯ , ಅಡ್ಡ ಪಲ್ಲಕ್ಕಿ ಅಲ್ಲ
ಬಸವ ತತ್ವ ನಿಜಾಚರಣಿಯಲ್ಲಿ , ನಿಜವಲ್ಲದ್ದು ಕೂಡಿ ಕೊಳ್ಳಬಾರದು. ಬಸವ ವಿರೋಧಿಗಳು ಈಗಲಾದರೂ ಬಸವ ಮಾರ್ಗ ಹಿಡಿಯಬೇಕು
ಹೇಮಂತ ಭೂತನಾಳ ಸರ ಇಲಕಲ್
In the whole world why u want Badava Kalyana only? U want common people to carry u on their shoulders! So disgusting it is..if they r going in a vehicle, in procession one can tolerate, instead u r carried by bumanbeings should be condemned and that too such inhuman procession in the place of lord basaveshwara, is not at all welcomed..think and talk..atleast in the land of basava be ashamed to do such dirty activities..
ಧನ್ಯವಾದ ಗಂಗಾ ಮಾತಾಜಿ ತಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ