ರಾಯಚೂರು
ನಗರದ ಬಸವ ಕೇಂದ್ರದ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ಕೇಂದ್ರದ ಗೌರವಾಧ್ಯಕ್ಷರಾದ ಹರವಿ ನಾಗನಗೌಡರು ನೆರವೇರಿಸಿದರು.
ಅವರು ಮಾತನಾಡುತ್ತ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಮಾಡಿದ ವೀರಯೋಧ ಸುಭಾಷಚಂದ್ರ ಬೋಸ್, ಭಗತ್ ಸಿಂಗ್ ಮತ್ತಿತರ ಮಹನೀಯರನ್ನು ಸ್ಮರಣೆ ಮಾಡಿದರು.
ಸ್ವತಂತ್ರ ದಿನಾಚರಣೆ ನಮ್ಮೆಲ್ಲರ ಸ್ವಾಭಿಮಾನದ, ದೇಶಾಭಿಮಾನದ ಪ್ರತೀಕ. ಈ ಆಚರಣೆ ಮನೆ- ಮನೆಗಳಲ್ಲಿ ಅತ್ಯಂತ ಉತ್ಸಾಹದಿಂದ ಮಾಡಬೇಕು. ಯುವಶಕ್ತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಇತಿಹಾಸ ಅರಿವು ಮೂಡಿಸಬೇಕು, ಇದರಿಂದ ಯುವ ಪ್ರಜೆಗಳಲ್ಲಿ ದೇಶಾಭಿಮಾನ ವೃದ್ಧಿಸುವುದು.
ಯುವಶಕ್ತಿಯೇ ನಮ್ಮ ದೇಶ, ನಾವೆಲ್ಲರೂ ಒಟ್ಟಾಗಿ ದೇಶಕ್ಕಾಗಿ ಶ್ರಮಿಸಿದಾಗ ಮಾತ್ರ ದೇಶದ ಪ್ರಗತಿಯಾಗಿ ಅರಿವು ಜಾಗೃತೆ ಮೂಡುವುದೆಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಚನ್ನಬಸವ, ಇಂಜಿನಿಯರ್, ಅಮರಪ್ಪ ಅಮಿನಗಡ್, ಸರೋಜಾ ಮಾಲಿಪಾಟೀಲ್, ಲಲಿತಾ ಮಲ್ಲಿಕಾರ್ಜುನ ಗುಡಿಮನಿ, ಸಿ.ಬಿ. ಪಾಟೀಲ್, ಪಾರ್ವತಿ ಪಾಟೀಲ್, ವೆಂಕಣ್ಣ ಆಶಾಪೂರ್, ನಾಗೇಶಪ್ಪ ಎಎಸ್ಐ, ಪೂರ್ಣಿಮಾ, ನಿರ್ಮಲ, ನಾಗರಾಜ್ ಪಾಟೀಲ್, ಜಯಶ್ರೀ ಚನ್ನಬಸವಣ್ಣ ಮಹಾಜನಶೆಟ್ಟಿ, ಭೀಮನಗೌಡ ಮುಂತಾದವರು ಉಪಸ್ಥಿತರಿದ್ದರು.