‘ಸೊಡ್ಡಳ ಎಂಬ ಪದಕ್ಕೆ ಶಿವ, ಈಶ್ವರ ಎಂಬ ತಿರುಳು ಇದೆ’

ಬೆಳಗಾವಿ

ವಚನ ಪಿತಾಮಹ ಫ.ಗು. ಹಳಕಟ್ಟಿ ಭವನದಲ್ಲಿ ಗುರುವಾರ ಲಿಂಗಾಯತ ಸಂಘಟನೆ ವತಿಯಿಂದ ಸೊಡ್ಡಳ ಬಾಚರಸರ ವಚನಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಬಸವತತ್ವ ಅನುಭಾವ ಕೇಂದ್ರದ ಪೂಜ್ಯ ವಾಗ್ದೇವಿ ತಾಯಿ ಅವರು ಉಪನ್ಯಾಸ ನೀಡುತ್ತಾ, ಕಲ್ಯಾಣದ ಶರಣರು ಕಾಯಕ ಬಿಡುತ್ತಿರಲ್ಲಿಲ್ಲ. ಸೊಡ್ಡಳ ಬಾಚರಸ ಬಸವಣ್ಣವರಿಗೆ ತುಂಬ ಆಪ್ತರಾಗಿದ್ದರು. ಕಲ್ಯಾಣ ನಗರದ ಬಿಜ್ಡಳನ ಅರಮನೆಯ ಕಣಜದಿಂದ ದಾನ್ಯವನ್ನು ಅಳೆದು ಕೊಡುವ ಮತ್ತು ಕೊಟ್ಟಿದ್ದರ ಲೆಕ್ಕವನ್ನು ಬರೆಯುವ ಕರಣಿಕರಾಗಿದ್ದರು. ಇವರ ಕಾಲ1160 ಆಗಿತ್ತು. ಸೊಡ್ಡಳ ಅಂಕಿತದಲ್ಲಿ 102 ವಚನಗಳು ಉಪಲಬ್ದವಾಗಿವೆ. ತತ್ವ ವಿವೇಚನೆ, ನೀತಿಭೋದೆ, ಶಿವಭಕ್ತಿ ನಿಷ್ಟೆ ಅವರು ವಚನಗಳಲ್ಲಿ ವ್ಯಕ್ತವಾಗಿವೆ.

ಶಿವಶರಣ ಶರಣೆಯರ ತಮ್ಮ ವಚನದಲ್ಲಿ ಹೇಳಿರುವ ಒಳ್ಳೆಯ ನಡೆ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾತಿನ ಚಪಲಕ್ಕಾಗಿ ಇಲ್ಲವೇ ಉದರ ಪಾಡಿಗಾಗಿಯೋ ವಚನದ ಸಂಗತಿಗಳನ್ನು ಇತರರ ಮುಂದೆ ಹಾಡಿ ಹೊಗಳುವ ವ್ಯಕ್ತಿಗಳು ಎಂದಿಗೂ ಶಿವನ ಒಲುಮೆಗೆ ಪಾತ್ರರಾಗಲಾರರು ಎಂದರು.

ಪೂಜ್ಯ ಕುಮಿದಿನಿ ತಾಯಿಯವರು ಸೊಡ್ಡಳ ಬಾಚರಸರ ವಚನಗಳನ್ನು ಹೇಳಿದರು. ಆರಂಭದಲ್ಲಿ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡಿಸಿಕೊಟ್ಟರು.
ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶರಣೆ ಶ್ರೀದೇವಿ ಕಾಡಣ್ಣವರ ದಾಸೋಹ ಸೇವೆಗೈದರು.

ಶರಣೆ ಸುಲೋಚನಾ ವಸ್ತ್ರದ, ಕಾಶಕ್ಕ ಯಮಕನಮರಡಿ, ಗುತ್ತಿಗೋಳಿ, ಮಂಗಳಾ ಕಾಗತಿಕರ, ಲೀಲಾವತಿ ರಾಚೋಟಿಮಠ, ರಾಜಶ್ರೀ ಖನಗಣಿ, ಶೋಭಾ ಅಂಗಡಿ, ಸುಜಾತಾ ಮತ್ತಿಕಟ್ಟಿ, ವಿದ್ಯಾ ಕರಕಿ, ಶಾಂತಾ ತಿಗಡಿ, ರತ್ನಾ ಬೆಣಚನಮರಡಿ, ಪ್ರೀತಿ ಗುರಯ್ಯನಮಠದ, ಶೋಭಾ ದೇಯನ್ನವರ, ದೀಪಾ ಪಾಟೀಲ, ರತ್ನಾ ಮು೦ಗರವಾಡಿ, ಬಸವರಾಜ ಕರಡಿಮಠ, ಶಿವಾನಂದ ನಾಯಕ, ಶಂಕರ ಗುಡಗನಟ್ಟಿ, ವಿ.ಕೆ. ಪಾಟೀಲ, ಆನಂದ ಕರಕಿ, ಬಸವರಾಜ ಮತ್ತಿಕಟ್ಟಿ, ಮಹಾಂತೇಶ ಮೆಣಸಿನಕಾಯಿ, ಶರಣ ಶರಣೆಯರು ಉಪಸ್ಥಿತರಿದ್ದರು.

ಸುರೇಶ ನರಗುಂದ ಸ್ವಾಗತಿಸಿದರು, ಸಂಗಮೇಶ ಅರಳಿ ನಿರೂಪಿಸಿದರು, ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *